Advertisement
ಉಭಯ ರಾಷ್ಟ್ರಗಳ ಆಯುರ್ವೇದ ಪರಿಣಿತರ ತಂಡ ಜಂಟಿಯಾಗಿ ಆಯುರ್ವೇದ ಔಷಧಗಳನ್ನು ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲು ಯೋಜಿಸಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ತಿಳಿಸಿದ್ದಾರೆ. ಭಾರತೀಯ ಮೂಲದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ವೈದ್ಯರ ಜತೆ ನಡೆಸಿದ ಸಂವಾದದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಉಭಯ ರಾಷ್ಟ್ರಗಳ ಆಯುರ್ವೇದ ತಜ್ಞರು ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಜ್ಞಾನ ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
Advertisement
ಕೋವಿಡ್ ನಿಯಂತ್ರಣಕ್ಕೆ ಆಯುರ್ವೇದ ಔಷಧಗಳ ಕ್ಲಿನಿಕಲ್ ಪ್ರಯೋಗಕ್ಕೆ ಭಾರತ –ಅಮೇರಿಕಾ ಯೋಜನೆ
09:23 PM Jul 09, 2020 | sudhir |
Advertisement
Udayavani is now on Telegram. Click here to join our channel and stay updated with the latest news.