Advertisement

ಸಂಯೋಜಿತ ಚಿಕಿತ್ಸೆ ಯಶಸ್ವಿ : 600 ಸೋಂಕುಪೀಡಿತರಿಗೆ ಆಯುರ್ವೇದ, ಅಲೋಪತಿ ಆರೈಕೆ

02:24 AM Jun 03, 2021 | Team Udayavani |

ಹೊಸದಿಲ್ಲಿ : ಆಯುರ್ವೇದ ಮತ್ತು ಅಲೋಪತಿ ವೈದ್ಯ ಪದ್ಧತಿಗಳನ್ನು ಸಂಯೋಜಿಸಿದ ಚಿಕಿತ್ಸಾ ವಿಧಾನದಲ್ಲಿ 600 ಮಂದಿ ಕೊರೊನಾ ಸೋಂಕುಪೀಡಿತರು ಗುಣಮುಖರಾಗಿದ್ದಾರೆ.

Advertisement

ಹೊಸದಿಲ್ಲಿಯ ಕೇಂದ್ರ ಸರಕಾರಿ ಸ್ವಾಮ್ಯದ ಅಖೀಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ಈ ಸಾಹಸ ನಡೆಸಿದೆ. ಸಂಸ್ಥೆಯ ಪ್ರಾಧ್ಯಾಪಕ ಡಾ| ತನುಜಾ ನೆಸಾರಿ ಇದರ ವಿವರ ನೀಡಿದ್ದಾರೆ. ಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ, ಎರಡೂ ವೈದ್ಯ ಪದ್ಧತಿಗಳ ಸಂಯೋಜನೆಯಿಂದ ಈ ಯಶಸ್ಸನ್ನು ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಧಾನದಲ್ಲಿ ಶೇ. 94 ಮಂದಿ ಸೋಂಕು ಪೀಡಿತರಿಗೆ ಆಯುರ್ವೇದ ಔಷಧ ನೀಡಲಾಯಿತು. ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯ ಸೂಚನೆಯ ಪ್ರಕಾರ ಅಲೋಪತಿ ಔಷಧವನ್ನು ಅಗತ್ಯ ಪರಿಸ್ಥಿತಿಯಲ್ಲಿ ಮಾತ್ರ ನೀಡಲಾಯಿತು ಎಂದು ಡಾ| ನೆಸಾರಿ ಹೇಳಿದ್ದಾರೆ. ಸೋಂಕಿನ 2ನೇ ಅಲೆಯ ಸಂದರ್ಭದಲ್ಲಿ 200 ಮಂದಿಯ ಸಹಿತ ಒಟ್ಟು 600 ಮಂದಿಯನ್ನು ಆಯುರ್ವೇದ ಸಂಸ್ಥೆಯ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು ಎಂದಿದ್ದಾರೆ.

ನಮ್ಮ ದೇಶದಲ್ಲಿ ಆಯುರ್ವೇದ ಮತ್ತು ಅಲೋಪತಿ ವೈದ್ಯಪದ್ಧತಿ ಜತೆಯಾಗಿಯೇ ಇವೆ. ಲ್ಯಾಬ್‌ನಲ್ಲಿ ನಡೆಸಿದ ಪರೀಕ್ಷೆಯ ಫ‌ಲಿತಾಂಶದ ಆಧಾರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಆಯು ರ್ವೇದ ಫಾರ್ಮಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ| ತನುಜಾ ನೆಸಾರಿ ಹೇಳಿದ್ದಾರೆ.

ಜಂಟಿ ನಿರ್ಧಾರ
ಯಾವ ಸೋಂಕು ಪೀಡಿತರಿಗೆ ಯಾವ ಔಷಧ ನೀಡ ಬೇಕು ಎಂಬುದನ್ನು ಅಲೋಪತಿ ಮತ್ತು ಆಯುರ್ವೇದ ವೈದ್ಯರು ಸೇರಿಕೊಂಡು ನಿರ್ಧಾರ ಮಾಡುತ್ತಿದ್ದರು ಎಂದು ಡಾ| ತನುಜಾ ಹೇಳಿದ್ದಾರೆ. ಮಧ್ಯಮ ಸ್ವರೂಪದ ಸೋಂಕುಪೀಡಿತರಿಗೆ ಎರಡೂ ವೈದ್ಯ ಪದ್ಧತಿ ಮೂಲಕ ಚಿಕಿತ್ಸೆ ನೀಡಲಾಗಿದೆ. ಮೊದಲ ಹಂತದಲ್ಲಿ ಆಯುರ್ವೇದ ಮತ್ತು ಆಮ್ಲಜನಕ ಥೆರಪಿ ನೀಡಲಾಗುತ್ತಿತ್ತು. ಆರೋಗ್ಯ ಸುಧಾರಿಸದವರಿಗೆ ಅಲೋಪತಿ ಔಷಧ ನೀಡಲಾಗುತ್ತಿತ್ತು ಎಂದಿದ್ದಾರೆ.

Advertisement

ನಾವೂ ಸಿಟಿ ಸ್ಕ್ಯಾನ್ ಮಾಡುತ್ತೇವೆ
ಔಷಧವನ್ನು ನೀಡಬೇಕು ಎಂಬ ಕಾರಣಕ್ಕೆ ನೀಡುವುದಿಲ್ಲ ಎಂದು ಹೇಳಿರುವ ಡಾ| ತನುಜಾ, ಪ್ರತಿಯೊಬ್ಬ ಸೋಂಕು ಪೀಡಿತ ವ್ಯಕ್ತಿಯನ್ನು ಕೂಲಂಕಷವಾಗಿ ಗಮನಿಸುತ್ತಿದ್ದೆವು. ಅಲೋಪತಿ ಎನ್ನುವುದು ಆಧುನಿಕ ವೈದ್ಯ ಪದ್ಧತಿ. ನಮ್ಮ ಸಂಸ್ಥೆಯಲ್ಲಿ ರೋಗಲಕ್ಷಣ ಶಾಸ್ತ್ರ ಮತ್ತು ರೇಡಿಯಾಲಜಿ ವಿಭಾಗ ಹಾಗೂ ಲ್ಯಾಬ್‌ ಇವೆ. ಇಲ್ಲಿ ಸಿ.ಟಿ. ಸ್ಕ್ಯಾನ್, ಸಿಆರ್‌ಪಿ ಮತ್ತು ಇತರ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸುತ್ತೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next