Advertisement
ಅಲ್ಲಿಂದ ಅವನ ಜೀವನದ ಏಕೈಕ ಉದ್ದೇಶ ಗ್ರಾಮ ಪಂಚಾಯ್ತಿ ಸದಸ್ಯನಾಗುವುದು. ಬಚ್ಚೇಗೌಡರೆಂಬ ಬಚ್ಚೇಗೌಡರ ವಿರುದ್ಧ ಸಿದ್ಧೇಗೌಡ ಗೆದ್ದು, ಹೇಗೆ ಗ್ರಾಮ ಪಂಚಾಯ್ತಿ ಸದಸ್ಯನಾಗುತ್ತಾನೆ? ಇದು “ಅಯೋಗ್ಯ’ ಚಿತ್ರದ ಒನ್‌ಲೈನರ್. ಈ ಕಥೆಗೂ, “ಅಯೋಗ್ಯ’ ಎಂಬ ಟೈಟಲ್‌ಗೂ ಏನು ಸಂಬಂಧ ಅಂತ ಕೇಳಬಹುದು. ಮಜ ಇರೋದೇ ಇಲ್ಲಿ. ಗ್ರಾಮ ಪಂಚಾಯ್ತಿ ಸದಸ್ಯನಾಗೋಕೆ ತೊಡೆ ತಟ್ಟಿನಿಂತಿರುವ ಸಿದ್ಧೇಗೌಡನೇ ಈ ಚಿತ್ರದ ಕಥಾನಾಯಕ.
Related Articles
Advertisement
ಹಾಗಾಗಿ “ಅಯೋಗ್ಯ’ ಒಂದು ಅದ್ಭುತ ಚಿತ್ರವಲ್ಲದಿದ್ದರೂ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರನ್ನು ಮನರಂಜಿಸಿ, ನಗಿಸಿ ಕಳಿಸುವಂತ ಚಿತ್ರವಂತೂ ಖಂಡಿತಾ ಹೌದು. ಲಾಜಿಕ್ಕು, ಗೀಜಿಕ್ಕು ಅಂತೆಲ್ಲಾ ನೋಡದೆ, ಸ್ವಲ್ಪ ಹೊತ್ತು ಮ್ಯಾಜಿಕ್ಕು ಬೇಕು ಎನ್ನುವವರು ಚಿತ್ರ ನೋಡಬಹುದು. ಚಿತ್ರ ಸುತ್ತುವುದು ಸತೀಶ್ ನೀನಾಸಂ ಮತ್ತು ರವಿಶಂಕರ್ ಅವರ ಸುತ್ತ. ಇಬ್ಬರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಇಲ್ಲಿ ಸತೀಶ್ ಮತ್ತು ರವಿಶಂಕರ್ ಪ್ರಮುಖವಾದರೂ, ಅವರಿಬ್ಬರ ಜೊತೆಗೆ ಇನ್ನೂ ಹಲವರು ಗಮನಸೆಳೆಯುತ್ತಾರೆ. ಪ್ರಮುಖವಾಗಿ ಸುಂದರ್ ರಾಜ್ ಅವರಿಗೆ ಬಹಳ ದಿನಗಳ ನಂತರ ಒಂದು ಮಜಬೂತಾದ ಪಾತ್ರ ಸಿಕ್ಕಿದೆ ಮತ್ತು ಅವರು ಅದನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆ.ಆರ್. ಪೇಟೆ ಶಿವರಾಜ್, ಗಿರಿ, ತಬಲಾ ನಾಣಿ, ಅರುಣ ಬಾಲರಾಜ್, ಲಕ್ಷ್ಮೀದೇವಮ್ಮ ಎಲ್ಲರೂ ತಮ್ತಮ್ಮ ಅಭಿನಯದಿಂದ ಇಷ್ಟವಾಗುತ್ತಾರೆ.
ಚಿತ್ರದ ಕೊನೆಗೆ ಬರುವ ಕುರಿ ಪ್ರತಾಪ್ ಮತ್ತು ಸಾಧು ಕೋಕಿಲ ಸಹ ಒಂದಿಷ್ಟು ನಗಿಸಿಯೇ ಹೋಗುತ್ತಾರೆ. ಎಲ್ಲರಿಗೆ ಹೋಲಿಸಿದರೆ, ರಚಿತಾ ಪಾತ್ರ ಚಿಕ್ಕದೇ. ಚಿಕ್ಕ ಪಾತ್ರವಾದರೂ ರಚಿತಾ ಗಮನ ಸೆಳೆಯುತ್ತಾರೆ. ಇನ್ನು ಅರ್ಜುನ್ ಜನ್ಯ ಸಂಗೀತದಲ್ಲಿ ಒಂದೆರೆಡು ಹಾಡುಗಳು, ಪ್ರವೀಣ್ ತೆಗ್ಗಿನಮನೆ ಕ್ಯಾಮೆರಾ ಕಣ್ಣಲ್ಲಿ ಮಂಡ್ಯದ ಸುಂದರ ಪರಿಸರ ಖುಷಿಕೊಡುತ್ತದೆ.
ಚಿತ್ರ: ಅಯೋಗ್ಯನಿರ್ದೇಶನ: ಮಹೇಶ್ ಕುಮಾರ್
ನಿರ್ಮಾಣ: ಟಿ.ಆರ್. ಚಂದ್ರಶೇಖರ್
ತಾರಾಗಣ: ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ಗಿರಿ, ಕೆ.ಆರ್. ಪೇಟೆ ಶಿವರಾಜ್, ಸುಂದರ್ ರಾಜ್, ಅರುಣ ಬಾಲರಾಜ್ ಮುಂತಾದವರು * ಚೇತನ್ ನಾಡಿಗೇರ್