Advertisement
ಮಂದಿರಕ್ಕೆ ಭೇಟಿ ನೀಡಿದವರ ಪೈಕಿ ಬಿಜೆಪಿ, ಮಿತ್ರ ಪಕ್ಷಗಳ ಸದಸ್ಯರು ಮಾತ್ರವಲ್ಲದೇ, ಕಾಂಗ್ರೆಸ್, ಬಿಎಸ್‌ಪಿ, ಎಸ್‌ಬಿಎಸ್‌ಪಿ, ಆರ್‌ಎಲ್‌ಡಿ ಸದಸ್ಯರೂ ಇದ್ದರು. ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ ಹಾಗೂ ವಿಧಾನ ಪರಿಷತ್ತಿನ ಅಧ್ಯಕ್ಷ ಕುನ್ವರ್ ಮಾನವೇಂದ್ರ ಸಿಂಗ್ ಕೂಡ ಪ್ರವಾಸದಲ್ಲಿ ಭಾಗಿಯಾಗಿದ್ದರು. ಮಂದಿರ ಭೇಟಿ ಬಳಿಕ 14 ನಿಮಿಷಗಳ ವೀಡಿಯೋವನ್ನು ಸಿಎಂ ಯೋಗಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಎಲ್ಲ ಶಾಸಕರು, ಸಚಿವರು ರಾಮ ಭಜನೆ ಹಾಡುತ್ತಿರುವುದನ್ನು ಕಾಣಬಹುದಾಗಿದೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಸೋಮವಾರ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಕೇಜ್ರಿವಾಲ್‌ಗೆ ಮಂದಿರ ಉದ್ಘಾಟನೆಗೆ ಆಹ್ವಾನವಿತ್ತು. ಆದರೆ ಸಮಾರಂಭದ ಬಳಿಕ ಕುಟುಂಬ ಸಮೇತ ಭೇಟಿ ನೀಡುವುದಾಗಿ ಹೇಳಿದ್ದರು. ಇದೀಗ ಇಬ್ಬರು ನಾಯಕರು ಕುಟುಂಬದ ಜತೆಗೆ ಭೇಟಿ ನೀಡಲಿದ್ದಾರೆ.