Advertisement
ಪ್ರಕರಣದಲ್ಲಿ ಈ ವರೆಗೆ ನಡೆದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಗೊಗೊಯ್ ಅವರು ಟಿಪ್ಪಣಿ ರೂಪದಲ್ಲಿ ಓದುತ್ತಾ ಸಾಗಿದಾಗ, ತೀರ್ಪು ಹಿಂದೂಗಳ ಪರ ಬರುತ್ತದೆ ಎಂದು ಕೆಲವೊಮ್ಮೆ ಅನಿಸಿದರೂ ಮತ್ತೆ ಕೆಲವೊಮ್ಮೆ ತೀರ್ಪು ಮುಸ್ಲಿಂ ಸಂಘಟನೆಗಳ ಪರವಾಗಿ ಬರುತ್ತದೆ ಎಂದೂ ಅನಿಸತೊಡಗಿತ್ತು.
Related Articles
Advertisement
ಸಿಜೆಐ ಇಷ್ಟು ಹೇಳಿದಾಗ, ಅಂತಿಮ ತೀರ್ಪು ಮುಸ್ಲಿಂ ಸಂಘಟನೆಗಳ ಪರವಾಗಿ ಬರಬಹುದು ಎಂಬ ಭಾವನೆ ಜನರಲ್ಲಿ ಹುಟ್ಟಿತು. ಆದರೆ ಅದರ ಬೆನ್ನಲ್ಲೇ ಸಿಜೆಐ ಓದಿದ ಮತ್ತಷ್ಟು ವಾಕ್ಯಗಳು ನೋಡುಗರ ಅನಿಸಿಕೆಯನ್ನು ಬದಲಾಯಿಸಲಾ ರಂಭಿಸಿದವು. ಆದರೆ ಅನಂತರದ ಟಿಪ್ಪಣಿಯ ಸಾಲುಗಳು ಈ ಅಭಿಪ್ರಾಯವನ್ನು ಮರೆಮಾಚಿದವು.
ಬದಲಾದ ನಿರೀಕ್ಷೆ: ಟಿಪ್ಪಣಿ ಓದು ಮುಂದುವರಿಸಿದ ಸಿಜೆಐ, “ಮಸೀದಿಯಿದ್ದ ಜಾಗದಲ್ಲಿ ಹಿಂದೂ ಧಾರ್ಮಿಕ ಚಟುವಟಿಕೆಗಳನ್ನು ಹೋಲುವ ಕಟ್ಟಡ ವೊಂದಿತ್ತು ಎಂದು ಎಎಸ್‌ಐ ತನ್ನ ವರದಿಯಲ್ಲಿ ಹೇಳಿದೆ. ಮಸೀದಿ ನಿರ್ಮಾಣವಾದಾಗಿನಿಂದ ಆ ಜಾಗದ ಮೇಲಿನ ಹಕ್ಕುಗಳಿಗಾಗಿ ಹಿಂದೂಗಳು ಹಾಗೂ ಮುಸ್ಲಿಮರ ನಡುವೆ ಶತಮಾನಗಳಿಂದ ಸಂಘರ್ಷ ನಡೆಯುತ್ತಾ ಬಂದಿರುವುದಕ್ಕೆ ಇತಿಹಾಸದಲ್ಲಿ, ಸರಕಾರಿ ದಾಖಲೆಗಳಲ್ಲಿ ಸ್ಪಷ್ಟವಾದ ಉಲ್ಲೇಖಗಳಿವೆ. ಇದ ಲ್ಲದೆ, ಮಸೀದಿ ನಿರ್ಮಾಣವಾದ ಅನಂತರವೂ ಮಸೀದಿಯ ಅಂಗಳದಲ್ಲಿನ ಒಂದು ಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದುದನ್ನು ಆ ದಾಖಲೆಗಳಲ್ಲೇ ಉಲ್ಲೇಖೀಸಲಾಗಿದೆ” ಎಂದರು. ಅನಂತರ ಮಾತು ಮುಂದುವರಿಸಿದ ಸಿಜೆಐ, ವಿವಾದಿತ ಸ್ಥಳದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಅಪ ಚಾರವಾಗಿದೆ ಎಂದೂ ಹೇಳಿದಾಗ, ತೀರ್ಪನ್ನು ಆಲಿಸು ತ್ತಿದ್ದವರಲ್ಲಿ ಮತ್ತೆ ದುಗುಡ ಶುರುವಾಯಿತು.
ಮತ್ತೆ ಬದಲಾದ ಅನಿಸಿಕೆ: “ಮಸೀದಿಯಲ್ಲಿ ನಿತ್ಯವೂ ನಮಾಜ್ ನಡೆಯುತ್ತಿದ್ದುದು ಸರಕಾರಿ ದಾಖಲೆ ಗಳಲ್ಲಿ ಉಲ್ಲೇಖವಾಗಿದೆ. ಆದರೆ ವಿವಾದದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ನಿರ್ಬಂಧ ವಿಧಿಸಿದ ಕಾರಣ 1949ರ ಡಿ. 16ರಂದು ಕೊನೆಯ ನಮಾಜ್ ನಡೆದಿದೆ’ ಎಂದರು.
ಅನಂತರ, “ಡಿ. 22 ಮತ್ತು 23ರ ನಡುವಿನ ರಾತ್ರಿ ಯಲ್ಲಿ ಮಸೀದಿಯೊಳಗೆ ಶ್ರೀರಾಮನ ವಿಗ್ರಹಗಳನ್ನು ಇಟ್ಟು ಪೂಜೆ ನಡೆಸಲಾಗಿದ್ದು, ವಿವಾದಕ್ಕೆ ತುಪ್ಪ ಸುರಿದಂತಾಗಿದೆ. 1934ರಲ್ಲಿ ಹಾಗೂ 1949ರಲ್ಲಿ ವಿವಾದಿತ ಸ್ಥಳದಲ್ಲಿ ನಡೆದ ಗಲಭೆಗಳಿಂದಾಗಿ ಮಸೀದಿಗೆ ಹಾನಿಯಾಗಿದ್ದರ ಬಗ್ಗೆಯೂ ಸಾಕ್ಷ್ಯಾಧಾರಗಳಿವೆ. ಅಲ್ಲದೆ, ನ್ಯಾಯಾಲಯದಲ್ಲಿ ಈ ವ್ಯಾಜ್ಯ ವಿಚಾರಣೆ ಹಂತದಲ್ಲಿ ದ್ದಾಗಲೇ ವಿವಾದದ ಕೇಂದ್ರ ಬಿಂದುವಾಗಿದ್ದ ಬಾಬರಿ ಮಸೀದಿಯನ್ನು 1992ರಲ್ಲಿ ಕೆಡವಿದ್ದು ಕಾನೂನುಬಾಹಿರವೇ ಸರಿ. ಆ ಮೂಲಕ ಮುಸ್ಲಿ ಮರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ’ ಎಂದರು.
ಇಷ್ಟು ಹೇಳುವಷ್ಟರಲ್ಲಿ ಅಂತಿಮ ತೀರ್ಪು ಹಿಂದೂಗಳ ಪರವಾಗಿ ಬರಲಿದೆ ಎಂದು ಮೂಡಿದ್ದ ಅನಿಸಿಕೆ ಮಾಯವಾಗಿ ಮುಸ್ಲಿಮರ ಪರ ಬರ ಬಹುದು ಎಂದೆನಿಸತೊಡಗಿತು.
ಅಂತಿಮ ಹಂತದಲ್ಲಿ ಸ್ಪಷ್ಟ: ಟಿಪ್ಪಣಿಯ ಅಂತಿಮ ಚರಣದಲ್ಲಿ, ಸಿಜೆಐಯವರು, ತೀರ್ಪಿನ ಬಗ್ಗೆ ಪರೋಕ್ಷ ಸೂಚನೆ ನೀಡಿದರು. “ಇತಿಹಾಸದಲ್ಲಿ ನಿಗದಿತ ವ್ಯಕ್ತಿ ಅಥವಾ ಸಮುದಾಯಕ್ಕೆ ಆಗಿರುವ ಅನ್ಯಾಯಗಳಿಗೆ ಸೂಕ್ತ ಪರಿಹಾರವನ್ನು ನೀಡ ಲೇಬೇಕಿದೆ. ಅದಕ್ಕಾಗಿ ಸಂವಿಧಾನದ 142ನೇ ಕಲಂ ಅನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ. ಅದರ ಆಧಾರದ ಮೇಲೆ ಮುಸ್ಲಿಂ ಸಮುದಾಯಕ್ಕೆ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಯಲ್ಲಿಯೇ ಪ್ರತ್ಯೇಕವಾಗಿ 5 ಎಕರೆ ಭೂಮಿಯನ್ನು ನೀಡ ಬೇಕು ಎಂದು ಸರಕಾರಕ್ಕೆ ಈ ಮೂಲಕ ನ್ಯಾಯಪೀಠ ಆದೇಶಿಸುತ್ತದೆ’ ಎಂದರು.
ಇದನ್ನು ಸಿಜೆಐ ಹೇಳಿದ ಕೂಡಲೇ ವಿವಾದಿತ ಜಾಗವು ಹಿಂದೂಪರ ಸಂಘಟನೆಗಳಿಗೆ ನೀಡ ಬಹುದೆಂಬ ಅನಿಸಿಕೆ ದೃಢವಾಯಿತು. ಇಷ್ಟು ಹೇಳಿದ ಅನಂತರ, ತೀರ್ಪಿನ ಅಂತಿಮ ಹಂತಕ್ಕೆ ತಲುಪಿದ ಸಿಜೆಐ, ಭಾರತೀಯ ಪ್ರಾಚ್ಯವಸ್ತು ಸಂಶೋಧನ ಇಲಾಖೆ ಸಲ್ಲಿಸಿರುವ ವರದಿಯಲ್ಲಿನ ಈ ಅಂಶಗಳನ್ನೇ ಪ್ರಧಾನವಾಗಿಟ್ಟು ಕೊಂಡು ಅಂತಿಮ ತೀರ್ಪು ಪ್ರಕಟಿಸಿದರು. ವಿವಾದಕ್ಕೀಡಾಗಿರುವ 2.77 ಎಕರೆ ಭೂಮಿಯು, ಸಂಪೂರ್ಣವಾಗಿ ರಾಮಲಲ್ಲಾ ವಿರಾಜಮಾನಕ್ಕೇ ನೀಡಬೇಕು. ಅದೇ ಜಾಗದಲ್ಲಿ ರಾಮಮಂದಿರ ವನ್ನು ನಿರ್ಮಿಸಬೇಕು ಎಂದು ಹೇಳಿದರು. ಅಲ್ಲಿಗೆ, ತೀರ್ಪನ್ನು ಆಲಿಸುತ್ತಿದ್ದವರಿಗೆ ಒಂದು ನಿಖರತೆ ದಕ್ಕಿದಂತಾಯಿತು.