Advertisement

ಅಯೋಧ್ಯೆ ತೀರ್ಪು : ಮಾರುಕಟ್ಟೆಗೆ ಬೂಸ್ಟ್‌

09:42 AM Nov 11, 2019 | Team Udayavani |

ಮುಂಬಯಿ: ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದಾಗಿದ್ದ  ಅಯೋಧ್ಯೆ ವಿವಾದವು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಸರ್ವಾನುಮತದಿಂದ ಇತ್ಯರ್ಥಗೊಂಡಿದೆ. ಈ ಬೆಳವಣಿಗೆ ದೇಶದ ಒಟ್ಟಾರೆ ಪರಿಸ್ಥಿತಿಯ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ ಎಂದು ಹೇಳಾಗುತ್ತಿದೆ. ಈ ತೀರ್ಪಿನ ಬಳಿಕ ಶತಮಾನಗಳ ಹಳೆಯ ಅನಿಶ್ಚಿತತೆ ತಿಳಿಯಾಗಿದ್ದು, ದೇಶದ ಆರ್ಥಿಕತೆ ಮೇಲೆ ಜಾಗತಿಕ ಉದ್ಯಮಿಗಳಿಗೆ ವಿಶ್ವಾಸ ಬೆಳೆಯುವಲ್ಲಿ ಈ ತೀರ್ಪು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಈ ತೀರ್ಪಿನ ಬಳಿಕ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದತ್ತ ಹೆಚ್ಚು ಹೂಡಿಕೆಗಳು ಹರಿದು ಬರುವ ನಿರೀಕ್ಷೆ ಇದೆ. ಮತ್ತು ಇದರಿಂದ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಸಕರಾತ್ಮಕವಾಗಿ ಸಾಗಲಿದೆ.

ದೇಶದ ನಾನಾ ರಾಜ್ಯಗಳು ಸೇರಿ ದೇಶ ವಿದೇಶಗಳಿಂದ ಅಯೋಧ್ಯೆಗೆ ಪ್ರತೀ ದಿನ 50 ಸಾವಿರದಿಂದ 1 ಲಕ್ಷ ಪ್ರವಾಸಿಗರು ಭೇಟಿ ನೀಡುವ ಅವಕಾಶ ಇದೆ. ವೈಷ್ಣೋದೇವಿ ಮತ್ತು ತಿರುಪತಿಗಿಂತಲೂ ಬೃಹತ್ ಪ್ರಮಾಣದಲ್ಲಿ ಅಯೋಧ್ಯೆಯನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಭರ್ಜರಿ ಅವಕಾಶಗಳಿವೆ ಎಂದು ಆರ್ಥಿಕ ಮತ್ತು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next