Advertisement

Ayodhya: ತರಕಾರಿ ವ್ಯಾಪಾರಿಯಿಂದ ರಾಮ ಮಂದಿರಕ್ಕೆ ವಿಶಿಷ್ಟ ಗಡಿಯಾರ

01:44 AM Jan 01, 2024 | Team Udayavani |

ಅಯೋಧ್ಯೆ: ರಾಮ ಮಂದಿರಕ್ಕೆ ದೇಶದ ವಿವಿಧೆಡೆಗಳಿಂದ ಉಡುಗೊರೆಗಳ ಸುರಿಮಳೆ ಆಗುತ್ತಿರುವ ನಡುವೆಯೇ ಲಕ್ನೋದ ರಸ್ತೆ ಬದಿಯ ತರಕಾರಿ ವ್ಯಾಪಾರಿಯೊಬ್ಬರು ವಿಶಿಷ್ಟವಾದ ಗಡಿಯಾರವೊಂದನ್ನು ತಾವೇ ವಿನ್ಯಾಸ­ ಗೊಳಿಸಿ ಮಂದಿರಕ್ಕೆ ಉಡುಗೊರೆ ನೀಡಿ ದ್ದಾರೆ. ವ್ಯಾಪಾರಿ ಅನಿಲ್‌ ಕುಮಾರ್‌ ಸಾಹೋ (52) 75 ಸೆಂ.ಮೀ.ನ ಗಡಿ­ಯಾರ­ವನ್ನು ಉಡುಗೊರೆ ನೀಡಿದ್ದು, ಅಕ್ಟೋ ಬರ್‌ನಿಂದ ಇದನ್ನು ವಿನ್ಯಾಸಗೊಳಿಸಿ­­ದ್ದಾರೆ. ಏಕಕಾಲ­ದಲ್ಲೇ 7 ದೇಶಗಳ ಸಮಯ ತೋರಿಸುವುದು ಇದರ ವಿಶೇ­ಷತೆ. ಭಾರತ, ದುಬಾೖ, ಜಪಾನ್‌, ರಷ್ಯಾ, ಚೀನ , ಸಿಂಗಾಪುರ, ಮೆಕ್ಸಿಕೋ ಮತ್ತು ಅಮೆರಿಕದ ಸಮಯವನ್ನು ಇದು ಒಂದೇ ಸಮಯದಲ್ಲಿ ತೋರಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next