Advertisement
ಜ.22ರಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾಂಭದ ಲೈವ್ ಪ್ರಸಾರವನ್ನು ದಕ್ಷಿಣ ಕೊರಿಯಾದಲ್ಲಿ ಸಾವಿರಾರು ಮಂದಿ ವೀಕ್ಷಿಸಿದರು.
ಇನ್ನೊಂದೆಡೆ, ಉ.ಪ್ರ.ಸರ್ಕಾರ ಮತ್ತು ದಕ್ಷಿಣ ಕೊರಿಯಾ ಸರ್ಕಾರಗಳು ಜಂಟಿಯಾಗಿ ಸರಯೂ ನದಿ ತೀರದಲ್ಲಿ ರಾಣಿ ಹಿಯೋ ಹ್ವಾಂಗ್-ಓಕೆ ಸ್ಮಾರಕ ನಿರ್ಮಿಸಿವೆ. ಅದಕ್ಕೆ ಗೌರವ ಸಲ್ಲಿಸಲು ಪ್ರತಿ ವರ್ಷ ದಕ್ಷಿಣ ಕೊರಿಯಾದ ನೂರಾರು ಪ್ರವಾಸಿಗರು ಅಯೋಧ್ಯೆಗೆ ಆಗಮಿಸುತ್ತಾರೆ. 6 ದಿನಗಳಲ್ಲಿ 19 ಲಕ್ಷ ಭಕ್ತರಿಂದ ದರ್ಶನ
ಇದೇ ವೇಳೆ ರಾಮ ಮಂದಿರ ವೀಕ್ಷಿಸಲು ಜ.23ರಿಂದ ಇದುವರೆಗೆ 18.75 ಲಕ್ಷ ಮಂದಿ ಆಗಮಿಸಿದ್ದಾರೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಜ.22ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂದಿರವನ್ನು ಲೋಕಾರ್ಪಣೆ ಮಾಡಿದ್ದರು. 6ನೇ ದಿನವಾಗಿದ್ದ ಭಾನುವಾರ 2.25 ಲಕ್ಷ ಮಂದಿ ಭೇಟಿ ನೀಡಿದ್ದರು.