Advertisement
ಈಗಾಗಲೇ ಅಯೋಧ್ಯೆಯಲ್ಲಿ 23 ದೊಡ್ಡ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 8 ನಗರನಿರ್ಮಾಣ ಯೋಜನೆಗಳು, 15 ಖಾಸಗಿ ಹೋಟೆಲ್‌ಗಳೂ ಸೇರಿವೆ. ಒಟ್ಟಾರೆ 4,500 ಕೋಟಿ ರೂ. ಬಂಡವಾಳ ಹರಿದುಬರಲಿದೆ. ಕೆಲವು ಯೋಜನೆಗಳು ಇನ್ನೆರಡು ವರ್ಷಗಳಲ್ಲಿ ಮುಗಿಯಲಿದ್ದರೆ, ಇನ್ನು ಕೆಲವು ಹಂತಹಂತವಾಗಿ ಮುಗಿಯಲಿವೆ ಎಂದು ಉತ್ತರಪ್ರದೇಶ ನಗರಾಭಿವೃದ್ಧಿ ಸಚಿವಾಲಯ ಹೇಳಿದೆ.
Related Articles
Advertisement
ಜ.22ಕ್ಕೆ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆಯಾಗುವ ಹೊತ್ತಿನಲ್ಲೇ ಇಸ್ಕಾನ್ ಇಂಡಿಯಾ ವಿಶೇಷ ಉಪಕ್ರಮವೊಂದನ್ನು ಇಟ್ಟುಕೊಂಡಿದೆ. ಅದು ಭಾನುವಾರದಿಂದ ದೆಹಲಿಯ ಕೈಲಾಶ್ ನಗರದ ಇಸ್ಕಾನ್ ಕೇಂದ್ರದಿಂದ ಅಯೋಧ್ಯೆಗೆ ಯಾತ್ರೆ ಆರಂಭಿಸಲಿದೆ. ಸರಿಯಾಗಿ ಜ.22ಕ್ಕೆ ಸ್ಥಳಕ್ಕೆ ತಲುಪಲಿದೆ. ಅರ್ಥಾತ್ ಹಿಂದೆ ಪಾಂಡವರ ರಾಜಧಾನಿಯಾಗಿ ಇಂದ್ರಪ್ರಸ್ಥವೆಂದು ಕರೆಸಿಕೊಂಡಿದ್ದ ದೆಹಲಿಯಿಂದ ಅಯೋಧ್ಯೆಗೆ 635 ಕಿ.ಮೀ. ದೂರವನ್ನು ಎತ್ತಿನಗಾಡಿಯಲ್ಲಿ ಕ್ರಮಿಸಲಿದೆ! ಈ ಯಾತ್ರೆಯ ಮೂಲಕ ಮಾರ್ಗಪೂರ ಹಳ್ಳಿಗರನ್ನು, ನಗರಪ್ರದೇಶಗಳ ಜನರನ್ನು ಸಂಪರ್ಕಿಸಿ ಶ್ರೀರಾಮನ ಬಗ್ಗೆ ಅರಿವು ಮೂಡಿಸುವುದು ಇಸ್ಕಾನ್ ಉದ್ದೇಶ. ಈ ಯಾತ್ರೆಯಲ್ಲಿ ಭಾರತೀಯರು ಮಾತ್ರವಲ್ಲ ವಿದೇಶೀಯರೂ ಪಾಲ್ಗೊಳ್ಳಲಿದ್ದಾರೆ. ರಷ್ಯಾ, ಮಾರಿಷಸ್‌ನ ಭಕ್ತರೂ ಶ್ರೀರಾಮಪ್ರಜ್ಞೆಯನ್ನು ಪಸರಿಸುವುದಕ್ಕೆ ನೆರವಾಗಲಿದ್ದಾರೆ.