Advertisement

ರಾಮಜನ್ಮಭೂಮಿಯಲ್ಲಿ ಹೊಸ ಸೌಲಭ್ಯ ಜಾರಿಗೆ ನಿರ್ಧಾರ : ಪೂಜೆ ವೀಕ್ಷಿಸಲು ಅವಕಾಶ

10:13 AM Mar 16, 2020 | sudhir |

ಅಯೋಧ್ಯೆ: ಬರುವ ರಾಮ ನವಮಿ ದಿನದಂದು ಭಕ್ತರು ಅಯೋಧ್ಯೆಯ ರಾಮಜನ್ಮ ಭೂಮಿಗೆ ತೆರಳಿ ಶ್ರೀರಾಮ ಲಲ್ಲಾಗೆ ನಡೆಯುವ ಆರತಿಯನ್ನು ಮೊದಲ ಬಾರಿ ಕಣ್ತುಂಬಿಕೊಳ್ಳಬಹುದು.

Advertisement

ಭಕ್ತರಿಗೆ ಇಂಥ ಅವಕಾಶ ಕಲ್ಪಿಸಲು ಅಗತ್ಯವಿರುವ ಸಿದ್ಧತೆಗಳನ್ನು ಅಯೋಧ್ಯೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕಾಗಿ ಹಾಲಿ ಮಂದಿರ ನಿರ್ಮಿಸುತ್ತಿರುವ ಸ್ಥಳದಿಂದ 200 ಮೀಟರ್‌ ದೂರದ ಸ್ಥಳಕ್ಕೆ ರಾಮ ಲಲ್ಲಾ ಮೂರ್ತಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ.

ಪ್ರತಿ ದಿನವೂ ಶ್ರೀರಾಮನಿಗೆ ಪೂಜೆ, ಆರತಿ ನೆರವೇರಿಸಲಾಗುತ್ತದೆ. ಆದರೆ, ದೇವಾಲಯದ ಮುಖ್ಯ ಅರ್ಚಕರು ಹಾಗೂ ಅವರ ಸಹಾಯಕರು ಮಾತ್ರ ಈ ಕೈಂಕರ್ಯಗಳನ್ನು ವೀಕ್ಷಿಸುತ್ತಾರೆ. ರಾಮ ನವಮಿಯನ್ನು ಶ್ರೀ ರಾಮನ ಜನ್ಮ ದಿನವೆಂದೇ ನಂಬಲಾಗಿದೆ. ಹೀಗಾಗಿ ಅಯೋಧ್ಯೆ ವಿವಾದ ಕುರಿತಂತೆ ಐತಿಹಾಸಿಕ ತೀರ್ಪು ಹೊರಬಂದ ಅನಂತರ ಬಂದಿರುವ ಮೊದಲ ರಾಮ ನವಮಿಯಂದು, ಪೂಜಾ ಕೈಂಕರ್ಯಗಳ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲು ದೇವಾಲಯ ಮಂಡಳಿ ತೀರ್ಮಾನಿಸಿದೆ.

ಕೊರೊನಾ ಭೀತಿ: ಈ ನಡುವೆ ದೇಶದಲ್ಲಿ ಕೊರೊನಾ ವೈರಸ್‌ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಎ. 2ರಂದು ಶ್ರೀರಾಮ ನವಮಿ ಆಚರಣೆಗೆ ಅವಕಾಶ ನೀಡಬಾರದು ಎಂಬ ಕೂಗು ಸಹ ಕೇಳಿಬರುತ್ತಿದೆ. ಪೂಜೆ ವೀಕ್ಷಣೆಗೆ ಮೊದಲ ಬಾರಿ ಅವಕಾಶ ನೀಡುತ್ತಿರುವ ಕಾರಣ ಲಕ್ಷಾಂತರ ಭಕ್ತರು ಸೇರುವ ಸಾಧ್ಯತೆಯಿದ್ದು, ವೈರಸ್‌ ಹರಡುವ ಸಾಧ್ಯತೆ ಇರುವುದರಿಂದ, ಆಚರಣೆಗೆ ಅವಕಾಶ ನೀಡಬಾರದು ಎಂದು ಒಂದು ಗುಂಪು ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next