Advertisement

Ayodhya Ram Mandir; ಸಾವಿರಾರು ಕಾರ್ಯಕರ್ತರ ಪರಿಶ್ರಮ,ಲಕ್ಷಾಂತರ ಜನರ ಇಚ್ಛೆ ಸಾಕಾರಗೊಂಡಿದೆ

07:52 PM Jan 22, 2024 | Team Udayavani |

ಗದಗ: ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಅಯೋಧ್ಯೆಯ ಶ್ರೀರಾಮ ಮಂದಿರ ಅತ್ಯಂತ ಭವ್ಯವಾದ ದೇವಾಲಯವಾಗಿದ್ದು, ಸಾವಿರಾರು ಕಾರ್ಯಕರ್ತರ ಪರಿಶ್ರಮ, ಲಕ್ಷಾಂತರ ಜನರ ಇಚ್ಛೆ ಸಾಕಾರಗೊಂಡಿದೆ ಎಂದು ನಗರದ ಶಿವಾನಂದ ಬೃಹನ್ಮಠದ ಸದಾಶಿವಾನಂದ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಪ್ರಾಣಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದಯವಾಣಿ ಪತ್ರಿಕೆಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಶ್ರೀಗಳು ಅಯೋಧ್ಯೆಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿರುವ ಶ್ರೀರಾಮ ಮಂದಿರವನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಎಲ್ಲ ವೈದಿಕ ವಿಧಿವಿಧಾನಗಳಿಂದ ಲೋಕಾರ್ಪಣೆಗೊಂಡಿರುವ ಮಂದಿರವು, ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯವು ಅತ್ಯಂತ ಯಶಸ್ವಿಯಾಗಿ, ಸಮಯಕ್ಕೆ ಸರಿಯಾಗಿ ನೆರವೇರಿತು. ಜೊತೆಗೆ ದೇಶದ ಎಲ್ಲ ವರ್ಗದ ಜನರು ಸಂತೋಷವಾಗಿ ನಿರೀಕ್ಷೆ ಮಾಡುತ್ತಿರುವುದನ್ನು ಕಂಡು ಬರುತ್ತಿತ್ತು. ದೇಶದ ಎಲ್ಲ ರಾಜಕೀಯ ಚಿಂತಕರು, ಸಿನಿಮಾ ತಾರೆಯರು, ವಿಶೇಷ ಆಮಂತ್ರಿತರು ಆಗಮಿಸಿದ್ದರು. ರಾಜ್ಯದಿಂದಲೂ 80ಕ್ಕೂ ಹೆಚ್ಚು ಸನ್ಯಾಸಿಗಳು ಪಾಲ್ಗೊಂಡಿರುವುದು ವಿಶೇಷವಾಗಿತ್ತು ಎಂದರು.

500 ವರ್ಷಗಳ ಪರಿಶ್ರಮಕ್ಕೆ ಪ್ರತಿಫಲ ದೊರೆತಿದ್ದು, ಗೌರವಶಾಲಿ ಭಾರತ ನಿರ್ಮಾಣಕ್ಕೆ ಭವ್ಯ ಶ್ರೀರಾಮ ಮಂದಿರವು ಅಡಿಪಾಯವಾಗಿದೆ. ಶ್ರೀರಾಮ ಮಂದಿರದ ಉದ್ಘಾಟನೆ ಎನ್ನುವುದಕ್ಕಿಂತ ಸಾಂಸ್ಕೃತಿಕ ಪುನರುತ್ಥಾನದ ಕೇಂದ್ರವಾಗಿ ಅಯೋಧ್ಯೆಯು ಬೆಳಗಿತು. ಭಾರತ ದೇಶದಲ್ಲಿರುವ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಅದರದೇ ಆದ ಮಾನ್ಯತೆ ಹಾಗೂ ಗೌರವವಿದೆ. ಅದನ್ನು ಪುನರ್‌ವ್ಯಾಪಿಸಲು ಈ ರೀತಿಯಾಗಿ ಪ್ರತಿಯೊಂದು ಕ್ಷೇತ್ರವೂ ಕೂಡ ವೈಭವಶಾಲಿಯಾದ ಅತೀತವನ್ನು ಪುನರ್‌ಸ್ಥಾಪಿತ ಮಾಡಿಕೊಳ್ಳಬೇಕು. ಅದಕ್ಕೆ ಉದಾಹರಣೆಯಾಗಿ ಅಯೋಧ್ಯೆಯ ಶ್ರೀರಾಮ ಮಂದಿರ ತಲೆ ಎತ್ತಿ ನಿಂತಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next