Advertisement

Ayodhya ರಾಮಮಂದಿರ; ತಾಜ್‌ಮಹಲನ್ನು ಹಿಂದಿಕ್ಕಿ ನಂ.1 ಪ್ರವಾಸಿ ತಾಣ

01:45 AM Dec 22, 2024 | Team Udayavani |

ಲಕ್ನೋ: ಉತ್ತರ ಪ್ರದೇಶಕ್ಕೆ ಈ ವರ್ಷ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಅಯೋಧ್ಯೆಯಲ್ಲಿನ ರಾಮಮಂದಿರ ರಾಜ್ಯದ ನಂ.1 ಪ್ರವಾಸಿ ತಾಣ ಎನಿಸಿಕೊಂಡಿದೆ. ಇಷ್ಟು ವರ್ಷಗಳ ಕಾಲ ಅಗ್ರ ಸ್ಥಾನ ಉಳಿಸಿಕೊಂಡಿದ್ದ ತಾಜ್‌ಮಹಲನ್ನು ಇದು ಹಿಂದಿಕ್ಕಿದೆ.

Advertisement

ಈ ವರ್ಷ ಸೆಪ್ಟಂಬರ್‌ವರೆಗೆ ಉತ್ತರ ಪ್ರದೇಶಕ್ಕೆ 47.61 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ 13.58 ಕೋಟಿ ಮಂದಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ 13.55 ಕೋಟಿ ಮಂದಿ ಭಾರತದವರಾಗಿದ್ದರೆ, 3,153 ಮಂದಿ ವಿದೇಶಿ ಪ್ರವಾಸಿಗರಾಗಿದ್ದಾರೆ. ಆಗ್ರಾಕ್ಕೆ 12.51 ಕೋಟಿ ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ 11.59 ಕೋಟಿ ಮಂದಿ ಭಾರತೀಯರಾಗಿದ್ದು, 9.24 ಲಕ್ಷ ವಿದೇಶಿ ಪ್ರವಾಸಿಗರಾಗಿದ್ದಾರೆ.

ಮಂದಿರ ಪ್ರವಾಸೋದ್ಯಮದ ಕೇಂದ್ರ: ರಾಮಮಂದಿರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಪ್ರವಾಸೋದ್ಯಮ ಸಚಿವ ಜೈವೀರ್‌ ಸಿಂಗ್‌, “ಕಳೆದ ವರ್ಷ ಸುಮಾರು 48 ಕೋಟಿ ಮಂದಿ ಭೇಟಿ ನೀಡಿದ್ದರು. ಈ ವರ್ಷ 9 ತಿಂಗ­ಳಲ್ಲೇ ಇದರ ಹತ್ತಿರಕ್ಕೆ ನಾವು ತಲುಪಿ­ದ್ದೇವೆ. ರಾಮಮಂದಿರ ಪ್ರವಾಸೋದ್ಯ­ಮದ ಕೇಂದ್ರವಾಗುತ್ತಿರುವುದಕ್ಕೆ ಸಂತೋ­ಷ­ವಾ­ಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next