Advertisement

Ayodhya Ram mandir; ಜ.20ರಿಂದ 25ರ ವರೆಗೆ ದೇಶದಲ್ಲಿ ಮುಸ್ಲಿಮರು ಪ್ರಯಾಣಿಸಬೇಡಿ

12:49 AM Jan 08, 2024 | Team Udayavani |

ಗುವಹಾಟಿ: ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರ ಉದ್ಘಾಟನೆ ನಿಮಿತ್ತ ಜನರು ದೇಶಾದ್ಯಂತ ಪ್ರಯಾಣಿಸುತ್ತಾರೆ. ಹೀಗಾಗಿ ಈ ತಿಂಗಳ 20ರಿಂದ 25ರ ವರೆಗೆ ದೇಶದಲ್ಲಿ ಇರುವ ಮುಸ್ಲಿಮರು ಮನೆಯಿಂದ ಹೊರಗೆ ಬರುವುದು ಬೇಡ ಎಂದು ಸಂಸದ ಬದ್ರುದ್ದೀನ್‌ ಅಜ್ಮಲ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಅಸ್ಸಾಂನ ಬಾರ್ಪೆಟಾದಲ್ಲಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸದ ಸಂದರ್ಭದ ಬಳಿಕ ಉಂಟಾಗಿದ್ದ ಪರಿಸ್ಥಿತಿಯೇ ಮತ್ತೆ ಮರುಕಳಿಸಬಹುದು. ಹಿಂಸಾತ್ಮಕ ಘಟನೆಗಳು ಸಂಭವಿಸಬಹುದು. ಇದರಿಂದಾಗಿ ಸಮುದಾಯದವರನ್ನು ರಕ್ಷಿಸುವ ಕೆಲಸ ಆಗಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜ. 20ರಿಂದ 25ರ ಅವಧಿಯಲ್ಲಿ ಜನರು ಬಸ್‌ನಲ್ಲಿ, ವಿಮಾನದಲ್ಲಿ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಮುಸ್ಲಿಮರು ಯಾರೂ ಮನೆಯಿಂದ ಹೊರಗೆ ಬರುವುದು ಬೇಡ ಎಂದರು. ಬಿಜೆಪಿ ವಿರುದ್ಧ ಹರಿಹಾಯ್ದ ಅವರು, “ಆ ಪಕ್ಷ ನಮ್ಮ ಸಮುದಾಯದ ವೈರಿ’ ಎಂದು ದೂರಿದರು.

ಬಿಜೆಪಿ ಎಲ್ಲ ಧರ್ಮಗಳ ಮೇಲೆ ಗೌರವ ಹೊಂದಿದೆ. ಸಬ್‌ ಕಾ ಸಾಥ್‌ ಸಬ್‌ಕಾ ವಿಶ್ವಾಸ್‌ ಎಂಬ ನಿಲುವಿನ ಮೇಲೆ ಪಕ್ಷ ಕಾರ್ಯ ನಿರ್ವಹಿಸುತ್ತಿದೆ.
ಗಿರಿರಾಜ್‌ ಸಿಂಗ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next