ಉಡುಪಿ: ಅಯೋಧ್ಯೆ ಶ್ರೀರಾಮನಿಗೆ ಶ್ರೀ ಸಂಸ್ಥಾನ ಕಾಶೀಮಠದ ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು
ಮತ್ತು ಭಕ್ತರಿಂದ ಅರ್ಪಿಸಲಾದ ಸುಮಾ ರು 70 ಲ.ರೂ. ಮೌಲ್ಯದ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ಅಯೋಧ್ಯೆಯಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮೂಲಕ ಶನಿವಾರ ಸಮರ್ಪಿಸಲಾಯಿತು.
ಪೇಜಾವರ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಕಾಶೀ ಮಠಾಧೀಶರು ತಮ್ಮ ಶಿಷ್ಯರೊಂದಿಗೆ ಸೇರಿ ಬೆಳ್ಳಿ ಪಲ್ಲಕಿ ಮತ್ತು ಸ್ವರ್ಣ ಪ್ರಭಾವಳಿಯನ್ನು ಶ್ರೀರಾಮನಿಗೆ ಸಮರ್ಪಣೆ ಮಾಡಿರುವುದು ಸ್ವರ್ಣಾ
ಕ್ಷರದಲ್ಲಿ ಬರೆದಿಡುವಂತಹ ಕಾರ್ಯ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನುಡಿದಿರು ವಂತೆ, ನಾವು ಭಕ್ತಿಯಿಂದ ದೇವರಿಗೆ ಏನನ್ನು ಸಮರ್ಪಣೆ ಮಾಡಿದರೂ ಸ್ವೀಕರಿಸುತ್ತಾನೆ. ಭಗವಂತನಿಗೆ ಕೊಡುವುದಕ್ಕೆ ಕಾಸು, ಸಂಪತ್ತು ಇಲ್ಲವೆಂದು ಯಾರೂ ಕೊರಗಬೇಕಿಲ್ಲ. ಅವನಿಗೆ ಒಂದು ದಳ ತುಳಸೀ, ಬಿಂದು ಗಂಗೋದಕ ಸಾಕಾಗುತ್ತದೆ ಎಂದರು.
ಉಡುಪಿಯ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ. ಕಾರ್ಯಾಗಾರದಲ್ಲಿ ಸ್ವರ್ಣ ಅಟ್ಟೆ ಪ್ರಭಾವಳಿಯನ್ನು ರಚಿಸಲಾಗಿತ್ತು. ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ, ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ರಾಘವೇಂದ್ರ ಕುಡ್ವ, ಸಂಸ್ಥಾನ ಲೆಕ್ಕಪರಿಶೋಧಕ ಸುರೇಂದ್ರ ನಾಯಕ್, ಜಿಎಸ್‌ಬಿ ಸೇವಾ ಮಂಡಲ ಮುಂಬಯಿ ಅಧ್ಯಕ್ಷ ಆರ್.ಜಿ. ಭಟ್, ಮಾಜಿ ಶಾಸಕ ಕೆ. ರಘುಪತಿ ಭಟ್, ಮಹೇಶ್ ಠಾಕೂರ್, ಸುವರ್ಧನ್ ನಾಯಕ್ ಹಾಗೂ ಗಣ್ಯರು ಉಪಸ್ಥಿತರಿದ್ದರು.
ರಜತ ಪಲ್ಲಕ್ಕಿ ಸಮರ್ಪಣೆ
ಶ್ರೀ ಕಾಶೀ ಮಠದ ಕೊಡುಗೆಯಾಗಿ ಬಾಲರಾಮನಿಗೆ ಉಡುಪಿಯ ಸ್ವರ್ಣ ಜುವೆಲರ್ನಲ್ಲಿ ನಿರ್ಮಿಸಲಾದ ರಜತ ಪಲ್ಲಕ್ಕಿಯನ್ನು ಇತ್ತೀಚೆಗೆ ಅರ್ಪಿಸಲಾಯಿತು.