Advertisement
ಭೋಜನ ವಿರಾಮದ ಅನಂತರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಅವರು ಶಾಸಕ ಗೋಪಾಲಯ್ಯಗೆ ವ್ಯಕ್ತಿಯೊಬ್ಬ ಕೊಲೆಬೆದರಿಕೆ ಹಾಕಿದ್ದಾನೆ. ಈ ಹಿಂದೆ ಆರ್. ಅಶೋಕ್ ಮತ್ತು ಸುರೇಶ್ ಕುಮಾರ್ ಅವರಿಗೂ ಈ ವ್ಯಕ್ತಿ ಧಮ್ಕಿ ಹಾಕಿದ್ದ. ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕುವುದು ಎಷ್ಟು ಸರಿ, ಈ ಬಗ್ಗೆ ಗೃಹಸಚಿವರು ಸದನಕ್ಕೆ ಬಂದು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
Related Articles
Advertisement
ವಚನ ಭ್ರಷ್ಟರು ಈಗ ವಚನಪಾಲಕರಾಗಿದ್ದಾರೆರಾಜ್ಯಪಾಲರ ಭಾಷಣದ ವಂದನಾ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಯು.ಬಿ. ವೆಂಕಟೇಶ್ ಅವರು, ಈ ಹಿಂದೆ ವಚನ ಭ್ರಷ್ಟರಾದವರು ಈಗ ವಚನ ಪಾಲಕರಾಗಿದ್ದಾರೆ ಎಂದು ಬಿಜೆಪಿ -ಜೆಡಿಎಸ್ ಮೈತ್ರಿ ಬಗ್ಗೆ ಲೇವಡಿ ಮಾಡಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿತು. ಇವರಿಗೆ ರಾಮಲೀಲೆ (ಅಯೋಧ್ಯೆ ರಾಮಮಂದಿರ) ಆಯ್ತು. ಈಗ ಕೃಷ್ಣ ಲೀಲೆ ( ಭಾರತ್ ಬ್ರಾಂಡ್ ಅಕ್ಕಿ) ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸರಕಾರದ ಉಚಿತ ಗ್ಯಾರಂಟಿ ಯೋಜನೆಗೆ ಅಕ್ಕಿ ನೀಡದ ಇವರು ಈಗ ಅಕ್ಕಿ ಮಾರಾಟ ಶುರು ಮಾಡಿದ್ದಾರೆ. ಈಗ ಅಕ್ಕಿ ಆಕಾಶದ ಮೇಲೆ ಇಳಿದು ಬಂತಾ ಎಂದು ಟೀಕಿಸಿದರು. ಈ ಮಾತು ಬಿಜೆಪಿಗರನ್ನು ಮತ್ತಷ್ಟು ಕೆರಳಿಸಿತು. ನೀವು ನಮ್ಮ ಸರಕಾರವನ್ನು ದೂರಿ ಆದರೆ ರಾಮನ ವಿಚಾರಕ್ಕೆ ಬರಬೇಡಿ ಎಂದು ಎದ್ದು ನಿಂತು ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದರು. ಸಭಾಪತಿಗಳ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು. ಅಕ್ಕಿ ಕಾಳು ಎಸೆದು ಮತ ಪಡೆಯಲ್ಲ: ಶಿವಲಿಂಗೇಗೌಡ
ಬೆಂಗಳೂರು: ಅಕ್ಕಿ ಕಾಳು ಎಸೆದು ಮತ ಪಡೆಯಲು ನಮಗೂ ಬರುತ್ತದೆ. ಆದರೆ, ನಾವು ಆ ಕೆಲಸ ಮಾಡುವವರಲ್ಲ ಎಂದು ವಿಪಕ್ಷ ಬಿಜೆಪಿಗೆ ಆಡಳಿತಾರೂಢ ಶಾಸಕ ಕೆ.ಎಂ. ಶಿವಲಿಂಗೇಗೌಡ ಟಾಂಗ್ ಹೇಳಿದರು. ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗದೆ. ಮೋದಿ ಅವಧಿಯಲ್ಲಿ ಆಗಿದೆ ಎಂಬುದು ಕಾಕತಾಳೀಯ. ಆದರೂ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಿದ್ದಂತೆ ವಿಪಕ್ಷ ಬಿಜೆಪಿ ಸದಸ್ಯರು ಮುಗಿಬಿದ್ದರು. ರಾಮನನ್ನು ಬಿಜೆಪಿಗೆ ಗುತ್ತಿಗೆ ಕೊಟ್ಟಿಲ್ಲ. ನಾವೂ ಶ್ರೀರಾಮನ ಭಕ್ತರು, ನಾವೂ ಪೂಜಿಸುತ್ತೇವೆ. ನಾನೂ ಜೈ ಶ್ರೀರಾಮ್ ಎನ್ನುತ್ತೇನೆ. ಶ್ರೀರಾಮ ದೇವರಲ್ಲ ಎಂದು ನಾವೇನಾದರೂ ಹೇಳಿದ್ದೇವಾ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿಯ ಭರತ್‌ಶೆಟ್ಟಿ, ಹರೀಶ್ ಪೂಂಜಾ, ರಾಮ ಕಾಲ್ಪನಿಕ ಎಂದವರು ನೀವೇ ತಾನೇ? ಒಪ್ಪಿಕೊಳ್ಳಿ ಎನ್ನುತ್ತಿದ್ದಂತೆ, ಕಾಲ್ಪನಿಕ ಎಂದು ನಾನಂತೂ ಹೇಳಿಲ್ಲ ಎಂದ ಶಿವಲಿಂಗೇಗೌಡ, ಸನಾತನ ಧರ್ಮದ ಕಾಲದಿಂದಲೂ ರಾಮನ ಆರಾಧಕರು ನಾವು. ದೇವರು ನಿಮ್ಮ ಕಡೆಗಿಲ್ಲ, ನಮ್ಮ ಕಡೆಗೇ ಇರುವುದು ಎಂದರು. ಹಾಗಿದ್ದರೆ ಬನ್ನಿ ಜ್ಞಾನವಾಪಿಗಾಗಿ ಹೋರಾಟ ಮಾಡೋಣ ಎಂದು ಬಿಜೆಪಿ ಶಾಸಕರು ಆಹ್ವಾನಿಸಿದರು. ನಿಮ್ಮಂತೆ ಅಕ್ಕಿ ಕಾಳು ಎಸೆದು ಮತ ಪಡೆಯುವ ಕೆಲಸ ಮಾಡುವರಲ್ಲ ನಾವು ಎಂದು ಶಿವಲಿಂಗೇಗೌಡ ತಿರುಗೇಟು ಕೊಟ್ಟರು.