Advertisement

ರಾಮ ಜನ್ಮಭೂಮಿ ನ್ಯಾಸ್‌ಗೆ ವಿವಾದಿತವಲ್ಲದ ನಿವೇಶನ: ಸುಪ್ರೀಂಗೆ ಕೇಂದ್ರ

06:17 AM Jan 29, 2019 | udayavani editorial |

ಹೊಸದಿಲ್ಲಿ : 1992ರಲ್ಲಿ ಬಾಬರಿ ಮಸೀದಿಯನ್ನು ಬೀಳಿಸಲಾದ ಬಳಿಕದಲ್ಲಿ  ಸರಕಾರ ವಶಪಡಿಸಿಕೊಂಡಿದ್ದ 67 ಎಕರೆ ಖಾಲಿ ಭೂಮಿ ವಿವಾದಿತವಾಗಿಲ್ಲದಿರುವ ಕಾರಣ ಅದನ್ನು ಅದರ ಮೂಲ ಮಾಲಕರಾದ ರಾಮ ಜನ್ಮಭೂಮಿ ನ್ಯಾಸ್‌ ಗೆ ಮರಳಿಸುವುದಕ್ಕೆ ಅನುಮತಿ ಕೋರಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದೆ. 

Advertisement

ಸರಕಾರ ಅಂದು ವಶಪಡಿಸಿಕೊಂಡಿದ್ದ 67 ಎಕರೆ ಖಾಲಿ ಜಾಗದಲ್ಲಿ ಕೇವಲ 2.7 ಎಕರೆ ಮಾತ್ರವೇ ವಿವಾದಿತವಾಗಿದೆ. ಉಳಿದ ಜಾಗ ವಿವಾದಿತವಾಗಿಲ್ಲ. ಹಾಗಾಗಿ ಅದನ್ನು ಅದರ ಒಡೆತನ ಹೊಂದಿರುವ ರಾಮ ಜನ್ಮಭೂಮಿ ನ್ಯಾಸ್‌ ಗೆ ಮರಳಿಸಬೇಕಾಗಿದೆ ಎಂದು ಕೇಂದ್ರ ಸರಕಾರ ಕೋರ್ಟಿಗೆ ತಿಳಿಸಿದೆ. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಉಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ  ರಾಮ ಜನ್ಮಭೂಮಿ ನ್ಯಾಸ್‌ ಎಂಬ ಟ್ರಸ್ಟ್‌ ಅಸ್ತಿತ್ವಕ್ಕೆ ಬಂದಿತ್ತು. 

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ತನ್ನ ಭರವಸೆಯನ್ನು ಮೋದಿ ಸರಕಾರ ಈಡೇರಿಸದಿರುವ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಮುನ್ನ ತೀವ್ರ ಟೀಕೆಗೆ ಗುರಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next