Advertisement

Ayodhya: ನವ ಅಯೋಧ್ಯೆ- ಮಾಸ್ಟರ್‌ ಪ್ಲ್ಯಾನ್‌-2031

02:40 PM Jan 22, 2024 | Team Udayavani |

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ರಾಮ ಮಂದಿರದ ದರ್ಶನಕ್ಕಾಗಿ ಮುಂದಿನ ದಿನಗಳಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು ಆಗಮಿಸಲಿರುವ ಹಿನ್ನೆಲೆಯಲ್ಲಿ ನವ ಆಯೋಧ್ಯೆ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ “ಮಾಸ್ಟರ್‌ ಪ್ಲ್ರಾನ್‌-2031’ಅನ್ನು ರೂಪಿಸಿದೆ.

Advertisement

ಅದರಂತೆ ಮುಂದಿನ 8 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 85 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮಾಸ್ಟರ್‌ಪ್ಲ್ರಾನ್‌-2031ರ ಪ್ರಕಾರ, 1,200
ಎಕ್ರೆ ವ್ಯಾಪ್ತಿಯಲ್ಲಿ 2,200 ಕೋ. ರೂ. ವೆಚ್ಚದಲ್ಲಿ ಮುಂದಿನ 5 ವರ್ಷದಲ್ಲಿ ಹೊಸದಾಗಿ ಟೌನ್‌ ಶಿಪ್‌ ನಿರ್ಮಾಣ ಗೊಳ್ಳಲಿದೆ. ಸರಕಾರಿ ಅತಿಥಿಗೃಹಗಳು, ಹೊಟೇಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಎಲ್ಲ ಸೌಕರ್ಯ, ಸೌಲಭ್ಯಗಳನ್ನೂ ಈ ಟೌನ್‌ಶಿಪ್‌ ಹೊಂದಿರಲಿದೆ.

ಅಯೋಧ್ಯೆಯಲ್ಲಿನ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಇಡೀ ಅಯೋಧ್ಯೆ ನಗರಿಯನ್ನು ಅಭಿವೃದ್ಧಿಪಡಿಸಲು ಉದ್ದೇಶಿ ಸಲಾಗಿದೆ. ಅಯೋಧ್ಯೆಯಲ್ಲಿನ ಪ್ರಮುಖ ದೇಗುಲಗಳು ಮತ್ತು ಸರಯೂ ನದಿ ತೀರವನ್ನು ಅಭಿವೃದ್ಧಿಪಡಿಸಲಾಗುವುದು. ಅಷ್ಟು ಮಾತ್ರವಲ್ಲದೆ ಸರಯೂ ನದಿ ತಟದಲ್ಲಿ ಶ್ರೀರಾಮನ ವನವಾಸದ ಸಂದರ್ಭದಲ್ಲಿನ ಅರಣ್ಯವನ್ನು ಸಾಂಕೇತಿಸುವ “ರಾಮಾಯಣ ಆಧ್ಯಾತ್ಮಿಕ ವನ’ವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಅಯೋಧ್ಯೆಯನ್ನು ಸ್ಮಾರ್ಟ್‌ ಸಿಟಿಯನ್ನಾಗಿ ರೂಪಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ತ್ಯಾಜ್ಯ ನಿರ್ವ ಹಣೆ, ಸುಗಮ ಸಂಚಾರ ವ್ಯವಸ್ಥೆ, ಇ-ಆಡಳಿತ, ಜನರು ಸುಸ್ಥಿರ ಜೀವನ ನಡೆಸುವಂತಾಗಲು ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳು ಇದರಲ್ಲಿ ಸೇರಿವೆ.

ಭವಿಷ್ಯದ ಮೇಲೂ ದೃಷ್ಟಿ
*ಮುಂದಿನ 50 ವರ್ಷಗಳವರೆಗೆ ದೇಗುಲದ ವಿಸ್ತರಣೆಗೆ, ಮಾರ್ಪಾಡುಗಳನ್ನು ಮಾಡಲು ಸಹಕಾರಿಯಾಗುವ ವಾಸ್ತುವಿನ್ಯಾಸದಲ್ಲಿ ರಾಮ ದೇಗುಲ ಸಂಕೀರ್ಣನ್ನು ನಿರ್ಮಿಸಲಾಗಿದೆ.
*ಮಂದಿರ ಆವರಣವನ್ನು ಧೂಳು ಮತ್ತು ಗಾಳಿಯಿಂದ ರಕ್ಷಿಸಲು ಮೂರು ಹಂತದಲ್ಲಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಲಾಗುತ್ತಿದೆ.
* ಯಾವುದೇ ಆಕಸ್ಮಿಕ ಘಟನೆಗಳು ಜರಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ಭದ್ರತಾ ಕಾಂಪ್ಲೆಕ್ಸ್‌ ನಿರ್ಮಾಣ ಮಾಡಲಾಗಿದೆ.
*ದೇವಾಲಯದ ನಾಲ್ಕೂ ಮೂಲೆಗಳಲ್ಲಿ ವಿಚಕ್ಷಣ ಗೋಪುರಗಳನ್ನು ನಿರ್ಮಿಸಲಾಗಿದೆ.
*ಹುತಾತ್ಮ ಕರಸೇವಕರ ಸ್ಮರಣೆಗಾಗಿ ಸ್ಮಾರಕ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next