ಹೊಸದಿಲ್ಲಿ: ಅಯೋಧ್ಯೆಯಲ್ಲಿ ರುವ ವಿವಾದಿತ 2.77 ಎಕರೆ ಜಮೀನು ಯಾರಿಗೆ ಸೇರಬೇಕು ಎಂಬ ರಾಜಕೀಯ ಸೂಕ್ಷ್ಮದ ಪ್ರಕರಣದ ವಿಚಾ ರಣೆಯನ್ನು ಸುಪ್ರೀಂ ಕೋರ್ಟ್ ಮಂಗಳ ವಾರ ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್ ನೇತೃ ತ್ವದ ಸಾಂವಿಧಾನಿಕ ಪೀಠ ಅದರ ವಿಚಾರಣೆ ನಡೆಸಲಿದೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ. ಜ. 27ರಂದು ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ಯನ್ನು ಜ. 29ರಂದು ನಿಗದಿ ಮಾಡಿತ್ತು. 29ರಂದು ಪೀಠದ ಸದಸ್ಯರಾ ಗಿರುವ ನ್ಯಾ.ಎಸ್.ಎ. ಬೋಬ್ದೆ ಲಭ್ಯರಿರದೇ ಇದ್ದುದ ರಿಂದ ವಿಚಾರಣೆ ಮುಂದೂ ಡಲಾಗಿತ್ತು.
ಸ್ವಾಮಿ ಅರ್ಜಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸುವುದು ನಮ್ಮ ಮೂಲಭೂತ ಹಕ್ಕು. ಹೀಗಾಗಿ, ಆ ಹಕ್ಕನ್ನು ಚಲಾಯಿಸಲು ನಮಗೆ ಅವಕಾಶ ನೀಡಬೇಕು ಎಂದು ಕೋರಿ ತಾವು ಸಲ್ಲಿಸಿರುವ ಅರ್ಜಿಯನ್ನು ತ್ವರಿತ ವಿಚಾರಣೆ ನಡೆಸಬೇಕು ಎಂದು ಬಿಜೆಪಿ ನಾಯಕ ಡಾ| ಸುಬ್ರಮಣಿಯನ್ ಸ್ವಾಮಿ ಸೋಮ ವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಅದನ್ನು ಪ್ರತ್ಯೇಕ ವಾಗಿ ಯೇ ವಿಚಾರಣೆ ನಡೆಸಬೇಕು ಎಂದು ಕೇಳಿ ಕೊಂಡಿದ್ದಾರೆ. ಇವರು ಅರ್ಜಿ ಸಲ್ಲಿಸು ತ್ತಲೇ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೋಯ್, “ಮಂಗಳವಾರ ಇತರೆ ಅರ್ಜಿಗಳ ವಿಚಾರಣೆ ವೇಳೆ ನೀವೂ ಕೋರ್ಟ್‌ಗೆ ಹಾಜರಾಗಿ. ನಿಮ್ಮ ಅರ್ಜಿಯನ್ನು ಪರಿಶೀಲಿ ಸುತ್ತೇವೆ’ ಎಂದಷ್ಟೇ ಹೇಳಿದ್ದಾರೆ.
ಕಳೆದ ವರ್ಷ ಬಿಜೆಪಿ ಸಂಸದ ಇದೇ ಮಾದರಿಯ ಅರ್ಜಿ ಸಲ್ಲಿಸಿದ್ದ ವೇಳೆ ಸುಪ್ರೀಂಕೋರ್ಟ್, ಅಯೋಧ್ಯೆ ಜಮೀನು ವಿವಾದ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಡಿ ಎಂದಿತ್ತು.ಆದರೆ ಪ್ರಾರ್ಥನೆ ಸಲ್ಲಿಕೆ ಎಂಬುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸುವುದಷ್ಟೇ ತಮ್ಮ ಅರಿಕೆ ಎಂದ ಬಳಿಕ ಕೋರ್ಟ್ ಅವರ ಅರ್ಜಿಯನ್ನು ಮಾನ್ಯ ಮಾಡಿತ್ತು.