Advertisement

3,01,152 ಹಣತೆ: ಅಯೋಧ್ಯೆ ದೀಪೋತ್ಸವ ಗಿನ್ನೆಸ್‌ ದಾಖಲೆಗೆ

04:03 PM Nov 07, 2018 | Team Udayavani |

ಲಕ್ನೋ : ದೀಪಾವಳಿ ಹಬ್ಬದ ಅಂಗವಾಗಿ ಅಯೋಧ್ಯಾ ಪಟ್ಟಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಡೆಸಿಕೊಟ್ಟ  2018ರ ಅಯೋಧ್ಯಾ ದೀಪೋತ್ಸವ ಗಿನ್ನೆಸ್‌ ದಾಖಲೆ ಮಾಡಿದೆ.

Advertisement

ಸರಯೂ ನದೀ ತೀರದಲ್ಲಿ ನಡೆದಿರುವ ಈ ದೀಪೋತ್ಸವದಲ್ಲಿ 3,01,152 ಹಣತೆಗಳನ್ನು ಬೆಳಗಿಸಲಾಗಿರುವುದು ಗಿನ್ನೆಸ್‌ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ. 

ಇದೇ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಕೆಲವೊಂದು ಪ್ರಮುಖ ಘೋಷಣೆಗಳನ್ನು ಮಾಡಿದರು. ಅವುಗಳಲ್ಲಿ ಮುಖ್ಯವೆಂದರೆ ಅಯೋಧ್ಯೆಯಲ್ಲಿ ಶೀಘ್ರವೇ ಭಗವಾನ್‌ ಶ್ರೀರಾಮನ ಭವ್ಯವಾದ ಮೂರ್ತಿಯೊಂದನ್ನು ಸ್ಥಾಪಿಸಲಾಗುವುದು ಎನ್ನುವುದಾಗಿದೆ. 

ಇದೇ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಫೈಜಾಬಾದ್‌ ನ ಹೆಸರು ಇನ್ನು ಮುಂದೆ ಅಯೋಧ್ಯೆ ಆಗಿರುತ್ತದೆ ಎಂದು ಪ್ರಕಟಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next