Advertisement

ಶ್ರೀ ಶ್ರೀ ನಿರ್ಧಾರಕ್ಕೆ ಹಲವರಿಂದ ಅಪಸ್ವರ

11:45 AM Nov 16, 2017 | Team Udayavani |

ಲಕ್ನೋ: ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಮುಂದಾಗಿರುವ ಆರ್ಟ್‌ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ನಿರ್ಧಾರಕ್ಕೆ ಹಲವರು ಅಪಸ್ವರ ಎತ್ತಿದ್ದಾರೆ.

Advertisement

ರಾಮಮಂದಿರ ವಿಚಾರ ಸುಪ್ರೀಂಕೋರ್ಟ್‌ನಲ್ಲಿರುವಾಗ, ತೀರ್ಪು ಬರುವವರೆಗೆ ಸಂಧಾನ ಮಾತುಕತೆಯ ಅಗತ್ಯವಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ವಿಶ್ವ ಹಿಂದೂ ಪರಿಷತ್‌ ಕೂಡ ಸಂಧಾನಕ್ಕೆ ಆಕ್ಷೇಪ ಎತ್ತಿದ್ದು, ಪುರಾತತ್ವ ಸಾಕ್ಷ್ಯಗಳೆಲ್ಲ ಹಿಂದೂಗಳ ಪರ ಇರುವಾಗ ಸಂಧಾನದ ಅಗತ್ಯವೇ ಇಲ್ಲ ಎಂದಿದೆ.

ಮತ್ತೂಂದೆಡೆ, ರವಿಶಂಕರ್‌ ಗುರೂಜಿ ಅವರು ಮಾತುಕತೆ ನಡೆಸುವ ಮೊದಲು ಅವರ ಯೋಜನೆ ಏನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮುಸ್ಲಿಂ ನಾಯಕರು ಆಗ್ರಹಿಸಿದ್ದಾರೆ. ಅಲ್ಲದೆ, ಗುರೂಜಿ ಎಲ್ಲರ ಜೊತೆ ಮಾತಾನಾಡುತ್ತಾರೆ ಎಂದು ಹೇಳಿದ್ದರೂ ಈವರೆಗೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಯಾರನ್ನೂ ಸಂಪರ್ಕಿಸಿಲ್ಲ ಎಂದು ಮಂಡಳಿ ಕಾರ್ಯದರ್ಶಿ ಮೌಲಾನಾ ವಾಲಿ ರೆಹಮಾನ್‌ ಹೇಳಿದ್ದಾರೆ. ಬುಧವಾರ ಉ.ಪ್ರ. ಸಿಎಂ ಯೋಗಿ ಅವರನ್ನು ಗುರೂಜಿ ಭೇಟಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next