Advertisement

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

04:10 AM Aug 06, 2020 | Hari Prasad |

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕೆಂಬ ಹಲವು ವರುಷಗಳ ಕನಸು ನನಸಾದರೂ, ಕೋವಿಡ್ 19 ಸೋಂಕಿನ ಭೀತಿಯಿಂದಾಗಿ ಐತಿಹಾಸಿಕ ನಗರಕ್ಕೆ ಭೇಟಿ ಕೊಟ್ಟು ಭೂಮಿಪೂಜೆಯನ್ನು ಕಣ್ತುಂಬಿಕೊಳ್ಳಲು ಅನೇಕರಿಗೆ ಸಾಧ್ಯವಾಗಲಿಲ್ಲ.

Advertisement

ಹಾಗಂತ, ಯಾರೂ ನೊಂದುಕೊಂಡಿಲ್ಲ. ಬದಲಿಗೆ, ತಮ್ಮ ತಮ್ಮ ಮನೆಗಳಲ್ಲೇ ಹಬ್ಬದ ಸಂಭ್ರಮವನ್ನು ಮೂಡಿಸುವ ಮೂಲಕ ಭೂಮಿಪೂಜೆಯ ಖುಷಿಯನ್ನು ಅನುಭವಿಸಿದ್ದಾರೆ.

ದೇಶವಾಸಿಗಳು ಮನೆಗಳಲ್ಲೇ ಇದ್ದು, ವಿಶೇಷ ಪೂಜೆ ಪ್ರಾರ್ಥನೆ ಕೈಗೊಳ್ಳುವ ಮೂಲಕ ಆಧ್ಯಾತ್ಮಿಕವಾಗಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮನೆಗಳನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಿ, ಹಣತೆಗಳನ್ನು ಹಚ್ಚಿ ದೀಪಾವಳಿ ಹಬ್ಬದ ಮಾದರಿಯಲ್ಲೇ ಸಂಭ್ರಮ ಪಟ್ಟಿದ್ದಾರೆ.

ಕೆಲವರು 108 ಬಾರಿ ಶ್ರೀರಾಮನ ಹೆಸರನ್ನು ಬರೆಯುವ ಮೂಲಕ ಪರಿಕ್ರಮ ನೆರವೇರಿಸಿದರೆ, ಇನ್ನು ಕೆಲವರು ರಾಮಜಪ, ಭಜನೆಯನ್ನು ಹಮ್ಮಿಕೊಂಡಿದ್ದರು. ಕೆಲವೆಡೆ ಸಂಘ-ಸಂಸ್ಥೆಗಳು ಸಾಮೂಹಿಕ ಪೂಜೆಗಳನ್ನು ಹಮ್ಮಿಕೊಂಡಿದ್ದವು.


ಮುಸ್ಲಿಂ ಭಕ್ತಾದಿಗಳೂ ಭಾಗಿ: ಭಗವಾನ್‌ ಶ್ರೀರಾಮನನ್ನು ‘ಇಮಾಮ್‌-ಎ-ಹಿಂದ್‌’ ಎಂದು ಕರೆದಿರುವ ಅಯೋಧ್ಯೆಯ ಮುಸ್ಲಿಂ ಭಕ್ತಾದಿಗಳು ತಮ್ಮ ಮನೆಗಳ ಟಿವಿ ಮುಂದೆ ಕುಳಿತು ಇಡೀ ಭೂಮಿ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದ್ದಾರೆ.

ಕೋವಿಡ್ 19 ಸೋಂಕಿನ ಪ್ರಭಾವ ತಗ್ಗಿದ ಬಳಿಕ ನಾವೂ ರಾಮ ಜನ್ಮಭೂಮಿಗೆ ತೆರಳಿ ಪೂಜೆ ಸಲ್ಲಿಸುತ್ತೇವೆ ಎಂದೂ ಅವರು ಹೇಳಿದ್ದಾರೆ. ನಮಗೆಲ್ಲರಿಗೂ ಈ ದಿನ ಸಂತಸ ತಂದಿದೆ. ನಾವು ಕೂಡ ಕರಸೇವಕರು.

Advertisement

ಶ್ರೀರಾಮನನ್ನು ಇಮಾಮ್‌-ಎ-ಹಿಂದ್‌ ಎಂದು ಪರಿಗಣಿಸುವವರು ಎಂದು ಸುನ್ನಿ ಸಾಮಾಜಿಕ ಫೋರಂ ಅಧ್ಯಕ್ಷ ರಜಾ ರಯೀಸ್‌ ಹೇಳಿದ್ದಾರೆ. ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸುವಾಗ ನಾವು ಡ್ರಮ್‌ಗಳನ್ನು ಬಾರಿಸಿ, ಹಾರ್ಮೋ ನಿಯಂ ನುಡಿಸಿ ಸಂಭ್ರಮಿಸಿದೆವು.

ಶ್ರೀರಾಮ ನಮ್ಮ ಪೈಗಂಬರರಿದ್ದಂತೆ ಎಂದೂ ಅವರು ಹೇಳಿದ್ದಾರೆ. ಜತೆಗೆ, ರಾಮಮಂದಿರವು ಸಹೋದರತ್ವದ ಸಂಕೇತವಾಗಲಿ ಎಂದೂ ಆಶಿಸಿದ್ದಾರೆ.

ಸಿಎಂ ಕಚೇರಿಯಲ್ಲಿ ದೀಪೋತ್ಸವ
ಭೂಮಿಪೂಜೆ ಬಳಿಕ ಬುಧವಾರ ಸಂಜೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ರ ಲಕ್ನೋದ ಕಚೇರಿಯಲ್ಲಿ ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಝಾರ್ಖಂಡ್‌ನ‌ಲ್ಲಿ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲೂ ದೀಪಗಳನ್ನು ಹಚ್ಚಲಾಗಿದೆ. ಕೇಂದ್ರ ಸಚಿವ ಡಾ| ಹರ್ಷವರ್ಧನ್‌ ಅವರು ತಮ್ಮ ಮನೆಯಲ್ಲೇ ಎಲ್ಲ ಸಿಬಂದಿಗೂ ಸಿಹಿ ಹಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next