1992ರ ಡಿಸೆಂಬರ್ ಆರರಂದು ನಡೆದ ಆ ಘಟನೆಯನ್ನು ನಾನೆಂದು ಮರೆಯಲಾರೆ. ನಾವು ಚಿಕ್ಕಮಗಳೂರಿನಿಂದ 20 ಮಂದಿ ಕರಸೇವಕರಲ್ಲದ ಹಾಗೆ ರೈಲಿನಲ್ಲಿ ಹೋಗಿದ್ದೆವು. ಕರಸೇವ ಕರು ಎಂದು ಗೊತ್ತಾದರೆ ಬಂ ಧಿಸುತ್ತಿದ್ದರು. ಹಾಗಾಗಿ ಬೇರೆ ಬೇರೆ ರೀತಿಯಲ್ಲಿ ಡಿಸೆಂಬರ್ ಮೂರರಂದೇ ಅಯೋಧ್ಯೆ ತಲುಪಬೇಕಾ ಯಿತು. ಕರ್ನಾಟಕದವರಿಗಾಗಿ ಅಲ್ಲಿ ಟೆಂಟ್ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಜ್ಯದಿಂದ 2000ಕ್ಕೂ ಹೆಚ್ಚು ಜನರು ಕರಸೇವೆ ಯಲ್ಲಿ ಪಾಲ್ಗೊಂಡಿದ್ದರು. ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ ದೇಶದ್ಯಾಂತ ಸಾವಿರಾರು ಕರಸೇವಕರು ನೆರೆದಿದ್ದರು.
Advertisement
ಸರಯೂ ನದಿಯಿಂದ ಮರಳು ತಂದು ಹಾಕುವಂತೆ ನಮ್ಮ ತಂಡದ ಮುಖ್ಯಸ್ಥರಿಂದ ಸೂಚನೆ ಬಂತು. ಮರಳು ತಂದು ಹಾಕಿದೆವು. ಡಿ. 6ರಂದು ಸಾರ್ವಜನಿಕ ಸಭೆ ನಡೆಯುತ್ತಿತ್ತು. ಸಭೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ವಿವಾದಿತ ಕಟ್ಟಡ ಸಮೀಪ ಜೈಕಾರ, ಘೋಷಣೆಗಳು ಮೊಳಗಿದವು. ನೋಡಿದರೆ ನಮ್ಮವರು ಅಲ್ಲಿದ್ದ ಅಡೆತಡೆಗಳನ್ನು ಲೆಕ್ಕಿಸದೆ ನುಗ್ಗಿ ವಿವಾದಿತ ಕಟ್ಟಡವನ್ನು ಒಡೆದರು. ನಾವು ಯಾವುದನ್ನೂ ಲೆಕ್ಕಿಸದೆ ತಂಡದ ಮುಖ್ಯಸ್ಥರಾಗಿದ್ದ ವಕೀಲ ರಾಮಸ್ವಾಮಿಯವರ ಸೂಚನೆ ಲೆಕ್ಕಿಸದೆ ಕರಸೇವೆಗೆ ನುಗ್ಗಿದ್ದೆವು.
ಹಾಗೆ ನೋಡಿದರೆ, ಅಯೋಧ್ಯೆ ರಥಯಾತ್ರೆಗೆ ಮೊದಲು ನಾಲ್ಕು ರಥಯಾತ್ರೆಗಳು ಆರಂಭಗೊಂಡವು. ಶಿಲಾಪೂಜೆ, ಇಟ್ಟಿಗೆ ಪೂಜೆ, ರಾಮಜ್ಯೋತಿ ಯಾತ್ರೆ ಅದಾದ ಮೇಲೆ ಶ್ರೀರಾಮ ಪಾದುಕೆ ಯಾತ್ರೆ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯಿತು. ಬಿಜೆಪಿಯಿಂದ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆವರೆಗೆ ಆಡ್ವಾಣಿ ನೇತೃತ್ವದಲ್ಲಿ ರಥಯಾತ್ರೆ ಕೈಗೊಳ್ಳಲಾಗಿತ್ತು. ಆಡ್ವಾಣಿ ಅವರನ್ನು ಬಿಹಾರದ ಸಮಷ್ಟಿಪುರದಲ್ಲಿ ಬಂಧಿ ಸಲಾಯಿತು. ಅಂದು ನಾನು ಹೋರಾಟದ ಕಣಕ್ಕೆ ಧುಮುಕಿ ಜೈಲು ಸೇರಿದೆ. ಎರಡು ದಿನ ಜೈಲುವಾಸ ಅನುಭವಿಸಿದ್ದೆ. ಹಾಗಾಗಿ ಆಗ ಕರಸೇವೆಯಲ್ಲಿ ಭಾಗವಹಿಸಲು ಆಗಲಿಲ್ಲ. ಆದರೆ ಅನಂತರ 1992ರಲ್ಲಿ ಕರಸೇವೆಯಲ್ಲಿ ಭಾಗವಹಿಸಿದನೆಂಬ ಹೆಮ್ಮೆ ನನ್ನದು. ಶ್ರೀ ರಾಮನಿಗೆ ಆಂಜನೇಯ ಲಂಕಾದಹನಕ್ಕೆ ನೆರವು ನೀಡಿ ಸೇವೆ ಮಾಡಿದ್ದಾನೆ. ಅಂಥದ್ದೇ ಕಿಂಚಿತ್ತು ರಾಮನ ಸೇವೆ ಮಾಡಿದ್ದೇನೆಂಬ ಆತ್ಮಾಭಿಮಾನ, ನೆಮ್ಮದಿಯ ಭಾವ ನನಗಿದೆ.
Related Articles
Advertisement