ನೇಪಾಳದಲ್ಲಿರುವ ಜನಕಪುರ ಧಾಮದಲ್ಲಿ ಇರುವ ರಾಮ ಜಾನಕಿ ದೇಗುಲದಿಂದ ಉಡುಗೊರೆಗಳನ್ನು ಹೊತ್ತು ಸಾಗಿದ್ದ ಮೂರು ವಿಶೇಷ ವಾಹನಗಳು ಕರಸೇವಕಪುರಕ್ಕೆ ಆಗಮಿಸಿವೆ.
Advertisement
ಉಡುಗೊರೆಗಳ ಜತೆಗೆ ಜನಕಪುರಿಯಿಂದ 500 ಮಂದಿ ವಿಶೇಷ ಅತಿಥಿಗಳೂ ಆಗಮಿಸಿದ್ದಾರೆ ಎನ್ನುವುದು ವಿಶೇಷವಾಗಿರುವ ಸಂಗತಿ. ಅವರೆಲ್ಲರೂ ರಾಮಲಲ್ಲಾನ ಬಂಧುಗಳು ಎಂದು ಪರಿಗಣಿಸಲಾಗಿದೆ.
Related Articles
ಲಕ್ನೋ: ಅಯೋಧ್ಯೆಯಲ್ಲಿ ಭವ್ಯವಾಗಿರುವ ರಾಮ ಮಂದಿರ ಉದ್ಘಾಟನೆಗೆ ಎಲ್ಲರೂ ಸಜ್ಜಾಗುತ್ತಿದ್ದಾರೆ. ಅಯೋಧ್ಯೆ ನಗರಾಭಿವೃದ್ಧಿ ಪ್ರಾಧಿಕಾರ ಸಹ ಅಯೋಧ್ಯೆಗೆ ತ್ರೇತಾಯುಗದ ಟಚ್ ನೀಡಲು ಉದ್ದೇಶಿಸಿದೆ.
ಶ್ರೀರಾಮಕಾಲದಲ್ಲಿ ಅಯೋಧ್ಯೆಯಲ್ಲಿ ಕಂಗೊಳಿಸುತ್ತಿದ್ದ ವಿವಿಧ ಸಸ್ಯಪ್ರಬೇಧ ಗಳನ್ನು ತಂದು ಇಲ್ಲಿ ನೆಡಲು ಪ್ರಾಧಿಕಾರ ಉದ್ದೇಶಿಸಿದೆ. ವಾಲ್ಮೀಕಿ ರಾಮಾಯಣ ದಲ್ಲಿ ಉಲ್ಲೇಖವಾಗಿರುವ ವಿವಿಧ ಸಸ್ಯಪ್ರಬೇಧಗಳನ್ನು ಹುಡುಕಿ ತರಲಾಗುತ್ತಿದೆ. ಅಂಥ ಸುಮಾರು 5,000 ಗಿಡಗಳನ್ನು ತಂದು ಸದ್ಯದಲ್ಲೇ ನೆಡಲಾಗುವುದು ಎಂದು ಪ್ರಾಧಿಕಾರದ ನರ್ಸರಿ ನಿರ್ದೇಶಕ ರಾಮ್ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
Advertisement
ರಾಮಾಯಣದಲ್ಲಿ ಹೆಸರಿಸಲಾಗಿರುವ ಸಸಿಗಳನ್ನು ತಂದು ನಗರವನ್ನು ಚಂದಕಾಣಿಸುವುದು ನಮ್ಮ ಉದ್ದೇಶ ಎಂದು ಪ್ರಾಧಿಕಾರದ ಅಧ್ಯಕ್ಷ ವಿಶಾಲ್ ಸಿಂಗ್ ಹೇಳುತ್ತಾರೆ. ಈಗಾಗಲೇ ರಾಮನ ಕಾಲದಲ್ಲಿ ನಗರದಲ್ಲಿ ಇತ್ತೆನ್ನಲಾದ ದೇವದಾರ, ಚಂದನ, ರಕ್ತಚಂದನ, ಮಾವಿನ ಗಿಡ, ಅಶೋಕ, ಪಾರಿಜಾತ, ಮತ್ತಿತರ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಬೂಸ್ಟ್
ಉತ್ತರ ಪ್ರದೇಶ ರಾಜ್ಯ ಪ್ರವಾಸೋದ್ಯಮ ನಿಗಮಕ್ಕೆ ವಾರಾಣಸಿ ಮತ್ತು ಅಯೋಧ್ಯೆಗೆ ಹೇಗೆ ಮತ್ತು ಯಾವಾಗ ಭೇಟಿ ನೀಡಬಹುದು ಎಂಬ ಬಗ್ಗೆ ದೇಶದ ವಿವಿಧ ಭಾಗಗಳಿಂದ ಮಾಹಿತಿಗಾಗಿ ಫೋನ್ ಕರೆಗಳು ದಾಂಗುಡಿ ಇಡುತ್ತಿವೆ. ಲಕ್ನೋದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಫೋನ್ ಕರೆಗೆ ಉತ್ತರಿಸಿ ಸುಸ್ತಾಗಿದ್ದಾರೆ ಎಂದು ವರದಿಯಾಗಿದೆ.
ಮೂರೇ ತಿಂಗಳಲ್ಲಿ ಅಯೋಧ್ಯೆಗೆ ಸಿಗಲಿದೆ ಸೌರಶಕ್ತಿ ಬೆಳಕುರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ ನಿಯಮಿತ (ಎನ್‌ಟಿಪಿಸಿ) ಅಯೋ ಧ್ಯೆಯಲ್ಲಿ ಸ್ಥಾಪಿಸಿರುವ ಸೌರ ವಿದ್ಯುತ್ ಘಟಕ ಜ.14ರಂದು ಆಂಶಿಕವಾಗಿ ಕಾರ್ಯಾರಂಭ ಮಾಡಲಿದೆ. ಜ.22ರಂದು ರಾಮ ಮಂದಿರ ಲೋಕಾರ್ಪಣೆಗೆ ಒಂದು ವಾರ ಇರುವಂತೆಯೇ ಅದು ಆಂಶಿಕವಾಗಿ ಕಾರ್ಯಾ ರಂಭ ಮಾಡುವುದು ಮಹತ್ವ ಪಡೆದಿದೆ. ಒಟ್ಟು 40 ಮೆಗಾ ವ್ಯಾಟ್‌ನ ಸೌರ ವಿದ್ಯುತ್ ಘಟಕ ಇದಾಗಿದ್ದು, ಮುಂದಿನ ಭಾನುವಾರ 10 ಮೆಗಾ ವ್ಯಾಟ್ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆ ಮಾಡಲಿದೆ ಎಂದು ಎನ್‌ಟಿಪಿಸಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಾ.31ರಂದು ಪೂರ್ಣ ಪ್ರಮಾಣದಲ್ಲಿ ಘಟಕ ಕಾರ್ಯಾರಂಭ ಮಾಡಲಿದೆ. ಮೂರು ತಿಂಗಳ ಹಿಂದಷ್ಟೇ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಲಾಗಿತ್ತು. ಸಾಮಾನ್ಯ ವಾಗಿ ಒಂದು ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಿ, ಕಾರ್ಯಾರಂಭ ಮಾಡಬೇಕಾಗಿದ್ದರೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಅಸ್ಸಾಂನಿಂದ ಬಂತು ವಿಶೇಷ ಬಿದಿರು
ಕಾಮರೂಪ್ : ರಾಮ ಮಂದಿರ ಲೋಕಾರ್ಪಣೆಗಾಗಿ ದೇಶದ ವಿವಿಧ ಭಾಗ ಗಳಿಂದ ಸುವಸ್ತುಗಳು ಅಯೋಧ್ಯೆಗೆ ತಲಪುತ್ತಿವೆ. ಅಂಥ ಸಾಲಿಗೆ ಅಸ್ಸಾಂನ ಕಾಮರೂಪ್ ಜಿಲ್ಲೆಯ ಬಿದಿರುಗಳೂ ಸೇರಿವೆ. ಅಖಿಲ ಅಸ್ಸಾಂ ದಿವ್ಯಾಂಗರ ಒಕ್ಕೂಟದ ವತಿಯಿಂದ 7 ಸಾವಿರ ಬಿದಿರಿನ ತುಂಡುಗಳನ್ನು ತರಲಾಗಿದೆ. ಕಾಮರೂಪ್ ಜಿಲ್ಲೆಯ ಲಂಪಿ ಎಂಬ ಪ್ರದೇಶದಿಂದ ಅವುಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ. ಅವುಗಳನ್ನು ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ.