Advertisement

Ayodhya; 11ದಿನಗಳಲ್ಲಿ 25ಲಕ್ಷ ಭಕ್ತರ ಭೇಟಿ, 11 ಕೋಟಿ ದಾಟಿದ ಕಾಣಿಕೆ

12:55 AM Feb 02, 2024 | Team Udayavani |

ಅಯೋಧ್ಯಾ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಅಂದರೆ, ಜ.23ರಿಂದ ಇದುವರೆಗೆ 11 ದಿನಗಳಲ್ಲಿ ಬರೋಬ್ಬರಿ 25 ಲಕ್ಷ ಭಕ್ತರು ಅಲ್ಲಿಗೆ ಭೇಟಿ ನೀಡಿ, ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಜತೆಗೆ ಅವರು ನೀಡಿರುವ ಕಾಣಿಕೆಯ ಮೊತ್ತವೇ 11 ಕೋಟಿ ರೂ. ದಾಟಿದೆ.

Advertisement

ರಾಮ ಮಂದಿರ ಟ್ರಸ್ಟ್‌ ಕಚೇರಿಯ ಉಸ್ತುವಾರಿ ಪ್ರಕಾಶ್‌ ಗುಪ್ತಾ ಮಾತನಾಡಿ 11 ದಿನಗಳಲ್ಲಿ 8 ಕೋಟಿ ರೂ. ಮೊತ್ತ ದೇವಸ್ಥಾನದ ಹುಂಡಿಗೆ ಜಮಾವಣೆಯಾಗಿದೆ. ಇನ್ನು ಚೆಕ್‌ ಮತ್ತು ಆನ್‌ಲೈನ್‌ನಲ್ಲಿ ಬಂದ ಹಣದ ಮೌಲ್ಯ 3.50 ಕೋಟಿ ರೂ. ಸಂಗ್ರಹವಾಗಿದೆ. ದರ್ಶನ ಪಥದಲ್ಲಿ ಗರ್ಭಗುಡಿಯ ಸಮೀಪದಲ್ಲಿ ನಾಲ್ಕು ದೊಡ್ಡ ಹುಂಡಿಗಳನ್ನು ಇಡಲಾಗಿತ್ತು. ಈ ಹುಂಡಿಗಳಲ್ಲಿ ಭಕ್ತರು ದೊಡ್ಡ ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next