Advertisement
ಮಾರಿಷಸ್: ಜ.22ಕ್ಕೆ 2 ಗಂಟೆ ‘ರಜೆ’ಶ್ರೀರಾಮಮಂದಿರ ಉದ್ಘಾಟನೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಭಾರೀ ಸಂಭ್ರಮ ಮೂಡಿಸಿದೆ. ಮಾರಿಷಸ್ ಸರಕಾರ ಜ.22ರಂದು 2 ಗಂಟೆಗಳ ಕಾಲ ಸರಕಾರಿ ಅಧಿಕಾರಿಗಳಿಗೆ ಬಿಡುವು ನೀಡಲು ಸಮ್ಮತಿಸಿದೆ. ಮಂದಿರ ಉದ್ಘಾಟನೆಯ ಹೊತ್ತಿನಲ್ಲಿ ತಮ್ಮ ದೇಶದ ಹಿಂದೂಗಳಿಗೆ, ಆ ಸಂದರ್ಭವನ್ನು ಸಂಭ್ರಮಿಸಲು, ಇದ್ದಲ್ಲಿಂದಲೇ ಪ್ರಾರ್ಥನೆ ಸಲ್ಲಿಸಲು ಪ್ರಧಾನಿ ಪ್ರವಿಂದ್ ಜಗನ್ನಾಥ್ ನೇತೃತ್ವದ ಸರಕಾರ ಅವಕಾಶ ಕೊಟ್ಟಿದೆ. ಆ ದೇಶದ ಸನಾತನ ಧರ್ಮ ದೇಗುಲಗಳ ಒಕ್ಕೂಟ, ಪ್ರಧಾನಿ ಪ್ರವಿಂದ್ ಜಗನ್ನಾಥ್‌ಗೆ ಪತ್ರ ಬಿಡುವು ನೀಡುವಂತೆ ಆಗ್ರಹಿಸಿತ್ತು.
ಅಮೆರಿಕದ ಹ್ಯೂಸ್ಟನ್‌ನಲ್ಲಿ ರಾಮ ಮಂದಿರ ಲೋಕಾರ್ಪಣೆ ಸಂಭ್ರಮ ತುಂಬಿದೆ. ಆ ನಗರದ ವಿವಿಧೆಡೆ ಬೈಕ್ ರ‍್ಯಾಲಿ ನಡೆಯಿತು. ಹೊಸ ಮಂದಿರದ ಬೃಹತ್ ಕಟೌಟ್‌ಗಳನ್ನು ತೆರೆದ ವಾಹನದಲ್ಲಿ ಪ್ರದರ್ಶಿಸಿ ಮೆರವಣಿಗೆ ಮಾಡಲಾಯಿತು. ಕೇಸರಿ ಮತ್ತು ಅಮೆರಿಕದ ರಾಷ್ಟ್ರ ಧ್ವಜ ಪ್ರದರ್ಶಿಸಿ ಜೈ ಶ್ರೀರಾಮ್ ಘೋಷಣೆ ಹಾಕಿದರು. ರಾಮನಿಗಾಗಿ ಎರಡು ಬಾರಿ ಹಿಮಾಲಯಕ್ಕೆ ಹಾರಿದ ಹನುಮ
ಹನುಮಂತ, ರಾಮನ ಮೇಲೆ ಎಷ್ಟು ಭಕ್ತಿಯನ್ನಿಟ್ಟದ್ದ ಎಂದು ಎಲ್ಲರಿಗೂ ಗೊತ್ತು. ಲಂಕಾದಲ್ಲಿ ಯುದ್ಧ ನಡೆಯುತ್ತಿರುವಾಗ, ಇಂದ್ರಜಿತ್ ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆಗಾಗ ಕಪಿಸೇನೆ ಮೂಛೆìಹೋದ ಪ್ರಸಂಗ ನಡೆಯುತ್ತದೆ. ಶ್ರೀರಾಮ-ಲಕ್ಷ್ಮಣರ ಜೀವಕ್ಕೇ ಆಪತ್ತು ಎದುರಾದಾಗ, ಎರಡು ಬಾರಿ ಹನುಮಂತ ಹಿಮಾಲಯಕ್ಕೆ ಹಾರಿ, ಸಂಜೀವಿನಿಯನ್ನು ತರುತ್ತಾನೆ. ಮೊದಲ ಬಾರಿಯಂತೂ, ಓಷಧ ಕರಣಿ-ವಿಶಲ್ಯ ಕರಣಿ ಎಂಬ ಸಸ್ಯಗಳು ಸಿಗದಾಗ ಸಂಜೀವಿನಿ ಪರ್ವತವನ್ನೇ ಹೊತ್ತುಕೊಂಡು ಹನುಮ ಮರಳಿ ಲಂಕೆಗೆ ನೆಗೆಯುತ್ತಾನೆ.