ಪಣಜಿ : ಗೋವಾ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ಪತ್ನಿಗೆ ಕಿರುಕುಳ ನೀಡಿದ್ದಾರೆ ಎಂದು ನಟಿ ಆಯೇಷಾ ಟಾಕಿಯಾ ಅವರ ಪತಿ ಫರ್ಹಾನ್ ಅಜ್ಮಿ ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಏಪ್ರಿಲ್ 4 ರಂದು ಆರೋಪ ಮಾಡಿರುವ ಅಜ್ಮಿ ಅವರು ಇತರ ಅಧಿಕಾರಿಗಳು ತಪಾಸಣೆ ಮಾಡುವಾಗ ಲೈಂಗಿಕ ನಿಂದನೆಗಳನ್ನು ಮಾಡಿದರು ಎಂದು ಆರೋಪಿಸಿದ್ದಾರೆ. ಮರುದಿನ ಗೋವಾ ವಿಮಾನ ನಿಲ್ದಾಣವು ಅವರ ಆರೋಪಕ್ಕೆ ಉತ್ತರಿಸಿದೆ.
”ಮುಂಬಯಿಯಿಂದ ಬಂದಿಳಿದ ಇಂಡಿಗೋ ವಿಮಾನದಲ್ಲಿ ಜನಾಂಗೀಯ ಅಧಿಕಾರಿಗಳ ತಂಡ, ನನ್ನ ಹೆಸರನ್ನು ಜೋರಾಗಿ ಓದಿದ ತತ್ ಕ್ಷಣ ನನ್ನನ್ನು ಮತ್ತು ನನ್ನ ಕುಟುಂಬವನ್ನು (ಹೆಂಡತಿ ಮತ್ತು ಮಗ) ಉದ್ದೇಶಪೂರ್ವಕವಾಗಿ ಪ್ರತ್ಯೇಕ ಮಾಡಿದರು” ಎಂದು ಆರೋಪಿಸಿದ್ದಾರೆ.
”ನನ್ನ ಹೆಂಡತಿ ಮತ್ತು ಮಗನನ್ನು ಮತ್ತೊಂದು ಸಾಲಿನಲ್ಲಿ ನಿಲ್ಲುವಂತೆ ಹೇಳಿ,ಭದ್ರತಾ ಡೆಸ್ಕ್‌ನಲ್ಲಿರುವ ಸಶಸ್ತ್ರ ಪುರುಷ ಅಧಿಕಾರಿಯೊಬ್ಬರು ದೈಹಿಕವಾಗಿ ಸ್ಪರ್ಶಿಸಲು ಪ್ರಯತ್ನಿಸಿದಾಗ ನಮ್ಮ ನಡುವೆ ವಾಗ್ವಾದ ಪ್ರಾರಂಭವಾಯಿತು. ಇತರ ಎಲ್ಲಾ ಕುಟುಂಬಗಳು ಒಟ್ಟಾಗಿ ನಿಂತಿದ್ದಾಗ ನಾನು ಅವರಿಗೆ, ಯಾವುದೇ ಹೆಣ್ಣನ್ನು ಮುಟ್ಟಲು ಧೈರ್ಯ ಮಾಡಬೇಡಿ ಮತ್ತು ದೂರವಿದ್ದು ನಿರ್ವಹಿಸಿ ಎಂದು ಹೇಳಿದ್ದೇನೆ” ಎಂದು ಟ್ವೀಟ್ ನಲ್ಲಿ ಬರೆದು, ಸಿಸಿಟಿವಿ ಪರಿಶೀಲನೆ ಮಾಡಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದ್ದಾರೆ.
ಫರ್ಹಾನ್ ಅವರ ದೂರಿಗೆ ಪ್ರತಿಕ್ರಿಯಿಸಿ “ಪ್ರಯಾಣ ಮಾಡುವಾಗ ನಿಮಗೆ ಮತ್ತು ಕುಟುಂಬಕ್ಕೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ದಯವಿಟ್ಟು ಈ ವಿಷಯವನ್ನು ಸರಿಯಾಗಿ ಪರಿಶೀಲಿಸಲಾಗುವುದು. ಈ ಬಗ್ಗೆ ಖಚಿತವಾಗಿರಿ ಎಂದು ಗೋವಾ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ.
ಈ ಬಗ್ಗೆ “ಡಿಜಿ ಶೀಲ್ ವರ್ಧನ್ ಸಿಂಗ್ ಸಿಐಎಸ್ ಎಫ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಆದಾಗ್ಯೂ, ಡಿಐಜಿ ಅನಿಲ್ ಪಾಂಡೆ ಅವರು ಫರ್ಹಾನ್ ಮಾಡಿದ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಸಿಐಎಸ್ಎಫ್ ಅತ್ಯಂತ ‘ವೃತ್ತಿಪರ ಶಕ್ತಿ’ ಎಂದು ಹೇಳಿದ್ದಾರೆ.