Advertisement

ಕಾರಿಗೆ ಆ್ಯಂಬುಲೆನ್ಸ್‌ ಢಿಕ್ಕಿ –ಚಾಲಕನಿಗೆ ಗಾಯ

11:49 AM Feb 21, 2017 | Team Udayavani |

ಕುಂಬಳೆ: ಅನಾರೋಗ್ಯ ಪೀಡಿತ ಒಂದೂವರೆ ವರ್ಷದ ಮಗುವನ್ನು ಮಂಗಳೂರಿನ ಆಸ್ಪತ್ರೆಗೆ ಒಯ್ಯುತ್ತಿದ್ದ ಆ್ಯಂಬುಲೆನ್ಸ್‌ ಕಾರಿಗೆ ಢಿಕ್ಕಿ ಹೊಡೆದು ರಸ್ತೆ ಬದಿಗೆ  ಉರುಳಿ ಚಾಲಕ ಗಾಯಗೊಂಡ ಘಟನೆ ಉಪ್ಪಳದಲ್ಲಿ ಸಂಭವಿಸಿದೆ. 

Advertisement

ಆ್ಯಂಬುಲೆನ್ಸ್‌ ಚಾಲಕ ರಹೀಂ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್‌ನಲ್ಲಿ ತೆರಳುತ್ತಿದ್ದಾಗ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡ ಚಾಲಕ ರಹೀಂ ಅವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಮಧ್ಯಾಹ್ನ ಉಪ್ಪಳ ಶಾಲೆಯ ಬಳಿ ಘಟನೆ ಸಂಭವಿಸಿದೆ. ಅಪಘಾತದ ಸಂಭವಿಸಿದೆ.
ತತ್‌ಕ್ಷಣ ನಾಗರಿಕರು ಗಾಯಗೊಂಡ ಚಾಲಕ ಹಾಗೂ ಮಗು ಸಹಿತ ಹೆತ್ತವರನ್ನು ಆ್ಯಂಬುಲೆನ್ಸ್‌ನಿಂದ ಹೊರತೆಗೆದು ರಕ್ಷಿಸಿದ್ದಾರೆ. ಬಳಿಕ ಎಳೆ ಮಗು ಸಹಿತ ಹೆತ್ತವರನ್ನು ಬೇರೊಂದು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕೊಂಡೊಯ್ದರು. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next