Advertisement

ರಿಷಭ್ ಪಂತ್ ಭರವಸೆಗೆ ಹೊಡೆತ ನೀಡಿತು ಅಕ್ಷರ್ ಪಟೇಲ್ ಹೇಳಿಕೆ

03:49 PM Oct 28, 2022 | Team Udayavani |

ಸಿಡ್ನಿ: ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಅವರಿಂದ ತೆರವಾದ ಸ್ಥಾನದಲ್ಲಿ ಆಡುತ್ತಿರುವ ಅಕ್ಷರ್ ಪಟೇಲ್ ಅವರಿಗೆ ಮಾನಸಿಕವಾಗಿ ಸಿದ್ಧರಾಗಿರಬೇಕು ಎಂದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಹೇಳಿದೆ. ಇದು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಭರವಸೆಗೆ ಮತ್ತಷ್ಟು ಹೊಡೆತ ನೀಡಿದೆ.

Advertisement

ಅಗತ್ಯವಿದ್ದ ಜಾಗದಲ್ಲಿ ಮತ್ತು ಟಾಪ್ ಸಿಕ್ಸ್‌ನಲ್ಲಿ ಬ್ಯಾಟ್ ಮಾಡಲು ಅಕ್ಷರ್ ಪಟೇಲ್ ಗೆ ಸೂಚಿಸಲಾಗಿದೆ. ಭಾರತದ ಬ್ಯಾಟಿಂಗ್ ಕ್ರಮಾಂಕದ ಬಲಗೈ ಆಟಗಾರರನ್ನು ಒಳಗೊಂಡಿರುವ ಕಾರಣ ಅಕ್ಷರ್ ಗೆ ಹೆಚ್ಚಿನ ಬ್ಯಾಟಿಂಗ್ ಜವಾಬ್ದಾರಿ ನೀಡಲು ತಂಡ ಯೋಚಿಸಿದೆ.

ಅಕ್ಷರ್ ಅವರನ್ನು ಪಾಕಿಸ್ತಾನದ ವಿರುದ್ಧ ಐದನೇ ಕ್ರಮಾಂಕದಲ್ಲಿ ಕಳುಹಿಸಲಾಯಿತು. ಆದರೆ ಅವರು ಬೇಗನೇ ರನೌಟಾದ ಕಾರಣ ಈ ಕ್ರಮವು ಫಲ ನೀಡಲಿಲ್ಲ. ಪಾಕಿಸ್ತಾನ ತಂಡವು ಎಡಗೈ ಸ್ಪಿನ್ನರ್ ನವಾಜ್ ಮತ್ತು ಲೆಗ್ ಸ್ಪಿನ್ನರ್ ಶಾದಾಬ್ ಅವರನ್ನು ಹೊಂದಿದ್ದರು, ಆದ್ದರಿಂದ ಎಡಗೈ ಆಟಗಾರನನ್ನು ಕಳುಹಿಸುವುದು ಯೋಜನೆಯಾಗಿತ್ತು. ಅದಕ್ಕೆ ನನಗೆ ಹಾರ್ದಿಕ್ ಗಿಂತ ಮೊದಲು ಆಡಲು ಹೇಳಿದರು” ಎಂದು ಅಕ್ಷರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇದನ್ನೂ ಓದಿ:ತಲ್ಲೂರು: ಹೃದಯಾಘಾತದಿಂದ 13 ವರ್ಷದ ಬಾಲಕಿ ಸಾವು; ನೇತ್ರದಾನ

“ನಮ್ಮ ಅಗ್ರ ಆರು ಮಂದಿ ಬಲಗೈ ಆಟಗಾರರು ಆಗಿರುವುದರಿಂದ, ಅಗತ್ಯವಿದ್ದರೆ ನನಗೆ ಮಧ್ಯಮ ಓವರ್‌ಗಳಲ್ಲಿ ಬಡ್ತಿ ನೀಡಲಾಗುವುದು, ಅದಕ್ಕೆ ನಾನು ಸಿದ್ಧರಾಗಿರಬೇಕು ಎಂದು ಮ್ಯಾನೇಜ್‌ ಮೆಂಟ್‌ ನನಗೆ ತಿಳಿಸಿದೆ” ಎಂದು ಗುಜರಾತ್ ಆಲ್‌ ರೌಂಡರ್ ಹೇಳಿದರು.

Advertisement

ಪ್ರಮುಖ ಕೀಪರ್ ಆಗಿ ಸದ್ಯ ಪಂತ್ ಗಿಂತ ಮೊದಲು ದಿನೇಶ್ ಕಾರ್ತಿಕ್ ಅವರೇ ಅವಕಾಶ ಪಡೆಯುತ್ತಿದ್ದಾರೆ. ಲೆಫ್ಟ್ ಹ್ಯಾಂಡ್ ಬ್ಯಾಟರ್ ವಿಚಾರವಾಗಿ ಪಂತ್ ಅವಕಾಶ ಪಡೆಯಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಇದೀಗ ತಂಡದ ಮ್ಯಾನೇಜ್ ಮೆಂಟ್ ಅಕ್ಷರ್ ಗೆ ಅವಕಾಶ ನೀಡಲು ಯೋಚಿಸಿದ ಕಾರಣ ಪಂತ್ ಸದ್ಯ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next