ಮಾಗಡಿ: ಯುವ ಜನಾಂಗ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬಾರದು ಎಂದು ತಹಶೀಲ್ದಾರ್ ಬಿ.ಜಿ.ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಂಬಾಕು ಸೇವನೆ ತಡೆ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವಕ್ಕೆ ಹಾನಿಯಾಗುವ ಚಟುವಟಿಕೆಗಳಿಂದ ಯವ ಜನತೆ ದೂರ ಇರಿ ಎಂದು ತಿಳಿಸಿದರು. ತಂಬಾಕು ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು. ತಂಬಾಕಿನಿಂದ ಆಗುವಅಡ್ಡಪರಿಣಾಮಗಳಕುರಿತುಜನರಲ್ಲಿ ಜಾಗೃತಿ ಮೂಡಿಸಬೇಕು. ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರು ಸಮಾನರು. ಹೀಗಾಗಿ ಗಂಡಸರು ಚಟ ಬಿಡಬೇಕು. ಹೆಂಗಸರು ಹಟ ಬಿಡಬೇಕು. ಆಗಲೇ ಸಮಾಜದಲ್ಲಿ ಪ್ರತಿಯೊಬ್ಬರು ಸುಖ ಜೀವನ ಕಾಣಲು ಸಾಧ್ಯ ಎಂದರು.
ಸಮಾಜದಲ್ಲಿ ತಂಬಾಕು ಸೇವನೆ ಮುಕ್ತಗೊಳಿಸಲು ಜನರು ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕು. ಶಾಲಾ, ಕಾಲೇಜಿನಿಂದ 100 ಮೀ. ಸಮೀಪ ತಂಬಾಕು ಮಾರಾಟ ಮಾಡುವಂತಿಲ್ಲ. ಹಾಗೂ 1 ರಿಂದ18 ವಯಸ್ಸಿನವರಿಗೆ ಧೂಮ ಪಾನ ನೀಡುವಂತಿಲ್ಲ. ಹಾಗೊಂದು ವೇಳೆ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಮಾತನಾಡಿ, ಋಷಿಮುನಿ ಗಳ ಕಾಲದಿಂದಲೂ ತಂಬಾಕು, ಗಾಂಜ, ರಾಮರಸ ಸೇವನೆಯಿತ್ತು. 1498 ರಲ್ಲಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಪೋರ್ಚ ಗೀಸರು ಸಿಗರೇಟ್ ಧೂಮಪಾನ ಪರಿಚಯಿ ಸಿದರು. ಮೊಗಲ್ ದೊರೆ ಜಾಹಂಗೀರ್ ಮೊಟ್ಟಮೊದಲು ನಿಷೇಧಕ್ಕೆ ತಂದರೂ,
ಮುಂದೆ ಅದನ್ನು ಜನರು ಪಾಲಿಸಲಿಲ್ಲ.2003 ಕೋಟ್ಪಾ ಕಾಯ್ದೆ ಜಾರಿಗೆ ಬಂದ ನಂತರ ಸಾರ್ವ ಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡುವಂತಿಲ್ಲ. ಸಿನಿಮಾ, ಇತರೆಡೆ ಎಲ್ಲೂ ವೈಭವೀಕರಿಸುವಂತಿಲ್ಲ. ಸಿಗರೇಟ್ ನಲ್ಲಿ 4 ಸಾವಿರ ರಾಸಾಯನಿಕ ವಸ್ತು ಗಳಿರುತ್ತದೆ. ಪ್ರಮುಖವಾಗಿ ನಿಕೋಟಿನ್ ಅಂಶಯಿದ್ದು, ಹೃದಯ, ಮೆದುಳು ಭಾಗ ವನ್ನು ನಾಶಪಡಿಸುವ ಶಕ್ತಿಯಿದೆ. ಧೂಮ ಪಾನದಿಂದ ದೂರವಿದ್ದು, ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಪುರಸಭಾ ಮುಖ್ಯಾಧಿಕಾರಿ ಎಂ ಎನ್. ಮಹೇಶ್, ಪಿಎಸ್‌ಐ ವೆಂಕಟೇಶ್,ಆರೋಗ್ಯ ಇಲಾಖೆ ಅಧಿಕಾರಿ ಡಾ. ಮಧು, ಚಂದ್ರ ಶೇಖರ್ ಮಾತನಾಡಿದರು. ಆರೋಗ್ಯ ಇಲಾಖೆಯ ಹಿರಿಯ ಸಹಾಯಕರಾದ ಶಿವ ಸ್ವಾಮಿ, ರಾಜಣ್ಣ, ತುಕಾರಂ, ಗ್ರಾಪಂಗಳ ಪಿಡಿಒ. ಶಿಕ್ಷಣ ಇಲಾಖೆಯ ಸಿಆರ್‌ಪಿಗಳು, ಶಿಕ್ಷಕರು ಇತರರು ಭಾಗವಹಿಸಿದ್ದರು.