Advertisement

ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಲಿ

05:56 PM Mar 22, 2021 | Team Udayavani |

ತಾವರಗೇರಾ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು, ಆರೋಗ್ಯವಂತದಿನಗಳನ್ನು ಕಳೆಯಬೇಕು. ಸರ್ಕಾರದನಿಯಮಾವಳಿಯಂತೆ ಗಂಡಿಗೆ 21,ಹೆಣ್ಣಿಗೆ 18 ವರ್ಷ ನಂತರವೇ ಮದುವೆಮಾಡಬೇಕು. ಮನೆ ಮತ್ತು ಸುತ್ತಲಿನವಾತಾವರಣದಲ್ಲಿ ಸ್ವತ್ಛತೆ ಕಾಪಾಡಿಆರೋಗ್ಯವಂತ ಜೀವನ ಕಳೆಯಬೇಕುಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕಾವೇರಿ ಶ್ಯಾವಿ ಹೇಳಿದರು.

Advertisement

ಅವರು ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಆರೋಗ್ಯಇಲಾಖೆ, ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ,ಶಿವಮೊಗ್ಗ ಸಮನ್ವಯ ಟ್ರಸ್ಟ್‌ಕಲಾವಿದರಿಂದ ಬೀದಿ ನಾಟಕ ಪ್ರದರ್ಶನಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಶು ಅಭಿವೃದ್ಧಿ ಇಲಾಖೆಯ ತಾವರಗೇರಾ ವಲಯ ಮೇಲ್ವಿಚಾರಕಿದುರ್ಗಮ್ಮ ಪಾಟೀಲ್‌ ಮಾತನಾಡಿ, ಪೋಷಣ್‌ ಅಭಿಯಾನ ಮೂಲಕ ಸಾರ್ವಜನಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಶು ಅಭಿವೃದ್ಧಿ ಇಲಾಖೆ ಮೂಲಕ ಇಂತಹ ಜಾಗೃತಿ ಕಾರ್ಯಕ್ರಮಏರ್ಪಡಿಸಲಾಗುತ್ತಿದೆ. ಗರ್ಭಿಣಿಯರಿಗೆಸೀಮಂತ ಕಾರ್ಯಕ್ರಮ, ಗರ್ಭಿಣಿಯರಆರೈಕೆ, ಮಕ್ಕಳಿಗೆ ಚುಚ್ಚುಮದ್ದು, ಶಿಶು ಪೋಷಣಾ ಅಭಿಯಾನ,ಅನ್ನಪ್ರಾಶನಾ, ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಪೂರ್ವ ಶಿಕ್ಷಣ, ಮಕ್ಕಳ ಆರೈಕೆಜೊತೆಗೆ ಪೌಷ್ಟಿಕ ಆಹಾರ ಕುರಿತುಜನರಲ್ಲಿ ಜಾಗೃತಿ ಮೂಡಿಸಲು ಕಲಾತಂಡಗಳಿಂದ ಬೀದಿ ನಾಟಕ ಪ್ರದರ್ಶನ ನಡೆಸಲಾಗುತ್ತಿದೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಮೊಗ್ಗದ ಸಮನ್ವಯ ಟ್ರಸ್ಟ್‌ಕಲಾವಿದರಿಂದ ಜಾಗೃತಿ ಕುರಿತನಾಟಕ ಪ್ರದರ್ಶನ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿ ಡಾ| ಕಾವೇರಿ ಶ್ಯಾವಿ, ಡಾ| ಶ್ರೀಧರ, ಮೇಲ್ವಿಚಾರಕಿರೇಣುಕಾ ಹುನಗುಂದ, ಪೋಷಣಾ ಅಭಿಯಾನ ತಾಲೂಕು ಸಂಯೋಜಕಿಭಾಗ್ಯಶ್ರೀ ಹೊಸಮನಿ ಮತ್ತುವಿವಿಧ ವಲಯಗಳ ಮೇಲ್ವಿಚಾರಕರು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು, ಆರೋಗ್ಯಇಲಾಖೆ ಸಿಬ್ಬಂದಿ, ಶಿಶು ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next