Advertisement

ಡ್ರಗ್ಸ್‌ ಮುಕ್ತ ರಾಜ್ಯವಾಗಲಿ: ನಾರಾಯಣಪ್ಪ

01:48 PM Sep 20, 2020 | Suhan S |

ದೇವನಹಳ್ಳಿ: ಯುವಕರು ಡ್ರಗ್ಸ್‌ ನಂತಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಪ್ರತಿ ಕಾಲೇಜು, ಜನ ಪ್ರದೇಶಗಳಲ್ಲಿ ಡ್ರಗ್ಸ್‌ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದರು.

Advertisement

ಪ್ರಧಾನಿ ನರೇಂದ್ರ ಮೋದಿ ಹುಟ್ಟು  ಹಬ್ಬದ ಅಂಗವಾಗಿ ನಗರದ ಹೊಸ ಬಸ್‌ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಡ್ರಗ್ಸ್‌ ಮುಕ್ತ ಕರ್ನಾಟಕ ಸಂಕಲ್ಪ ಹಾಗೂ ಯುವಕರಲ್ಲಿ ಡ್ರಗ್ಸ್‌ ಮಾದಕ ವಸ್ತುಗಳ ನಿಯಂತ್ರಣ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕವನ್ನುಡ್ರಗ್ಸ್‌ಮುಕ್ತವನ್ನಾಗಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ದೃಢ ಸಂಕಲ್ಪಮಾಡಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಿದೆ ಎಂದು ಹೇಳಿದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ಶಾಲಾ ಕಾಲೇಜು ಹಂತದಿಂದಲೇ, ಮಾದಕ ವಸ್ತುಗಳ ಬಗ್ಗೆ ಜಾಗƒತಿ ಮೂಡಿಸಿದರೆ ಸಮಾಜ ಆರೋಗ್ಯಕರವಾಗಿರುತ್ತದೆ. ಯಾವುದೇ ಸಿನಿಮಾ ನಟ -ನಟಿಯರಾಗಿರಲೀ, ರಾಜಕಾರಣಿ ಮಕ್ಕಳೇ ಆಗಿರಲೀ ತಕ್ಕ ಶಿಕ್ಷೆಯಾಗಬೇಕೆಂದರು. ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮೋಹನ್‌, ಡ್ರಗ್ಸ್‌ ಮುಕ್ತ ಕರ್ನಾಟಕ ಹೆಸರಿನಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್‌,  ಪ್ರ.ಕಾರ್ಯದರ್ಶಿ ನೀಲೇರಿ ಮಂಜುನಾಥ್‌, ಜಿಲ್ಲಾ ಮಾಧ್ಯಮ ಪ್ರಮುಖ್‌ ಎಸ್‌.ರಮೇಶ್‌ ಕುಮಾರ್‌, ಮಹಿಳಾ ಮೋರ್ಚಾ ಘಟಕ ತಾಲೂಕು ಅಧ್ಯಕ್ಷೆ ವಿಮಲಾ, ತಾಲೂಕು ಉಪಾಧ್ಯಕ್ಷೆ ಪುನೀತಾ, ತಾಲೂಕು ಎಸ್‌ಸಿಮೋರ್ಚಾ ಕಾರ್ಯದರ್ಶಿ ಸಾಗರ್‌, ಒಬಿಸಿ ಮೋರ್ಚಾ ಅಧ್ಯಕ್ಷ ಸುಜಯ್‌, ಪ್ರ. ಕಾರ್ಯದರ್ಶಿ ಗೌತಮ್‌, ಬಿಜ್ಜವಾರ ಶಕ್ತಿ ಕೇಂದ್ರ ಅಧ್ಯಕ್ಷ ಮನು, ಮಂಜುನಾಥ್‌, ಭೂನ್ಯಾಯ ಮಂಡಳಿ ಸದಸ್ಯ ಮುನಿ ಕೃಷ್ಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next