Advertisement

ಬಾಲ್ಯವಿವಾಹ ತಡೆಗೆ ಜಾಗೃತಿ ಅಗತ್ಯ

08:13 PM Nov 04, 2020 | Suhan S |

ಬಾಗಲಕೋಟೆ: ಬಾಲ್ಯವಿವಾಹ ತಡೆಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕಲಾದಗಿ ಪೊಲೀಸ್‌ ಠಾಣೆಯ ಪೊಲೀಸ್‌ ಸಬ್‌ ಇನ್ಸಪೆಕ್ಟರ್‌ ರವಿ ಪವಾರ ಹೇಳಿದರು.

Advertisement

ತುಳಸಿಗೇರಿ ಗ್ರಾಮದಲ್ಲಿ ಗ್ರಾಮೀಣ ಪರಿಸರ ಮತ್ತು ಸಮುದಾಯ ಜಾಗೃತಿ ಸಂಸ್ಥೆ, ಸಿಂಧು ಮಕ್ಕಳ ಸಂಘ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ ಆಶ್ರಯದಲ್ಲಿ ಹಮ್ಮಿಕೊಂಡ ಬಾಲ್ಯ ವಿವಾಹ ನಿಷೇಧ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಾಲ್ಯ ವಿವಾಹ ಹೆಚ್ಚಾಗಲು ಹೆಣ್ಣು ಮಕ್ಕಳ ಬಗ್ಗೆ ಇರುವ ಬೇಜವಾಬ್ದಾರಿ ಇದಕ್ಕೆ ಕಾರಣ. ಹೆಣ್ಣು ಮಕ್ಕಳು ಕನಿಷ್ಠ ಪದವಿ ಶಿಕ್ಷಣ ಮುಗಿದ ನಂತರ ಮದುವೆ ವಿಚಾರಕ್ಕೆ ಹೋಗಬೇಕು. ಆಗ ಅವರ ಆಯ್ಕೆ ಹಾಗೂ ಪರಿಪಕ್ವತೆ ಹೊಂದಿರುತ್ತಾರೆ. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಫೆಬ್ರವರಿ 2020ರಲ್ಲಿ ತುಳಸಿಗೆರೆ ಗ್ರಾಮದಲ್ಲಿ 3 ಬಾಲ್ಯ ವಿವಾಹ ಮಾಡುವ ಸಾದ್ಯತೆ ಇದೆ ಎಂಬ ಮಾಹಿತಿ ಆಧಾರದ ಮೇಲೆ ಪ್ರೌಢಶಾಲೆಗೆ ಭೇಟಿ ನೀಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಪಾಲಕರಿಗೆ ಅರಿವು ನೀಡಿ ತಡೆಯಲಾಗಿದೆ ಎಂದರು ತಿಳಿಸಿದರು.

ಜಿಲ್ಲಾ ಮಕ್ಕಳ ಸಹಾಯವಾಣಿ-1098, ಪೊಲೀಸ್‌ ತುರ್ತು ದೂರವಾಣಿ ಸಂಖ್ಯೆ 112 ಈ ಸಂಖ್ಯೆಯನ್ನು ಬಳಸಿ ಮಕ್ಕಳ ಮೇಲೆ ಆಗುವ ತೊಂದರೆಗಳನ್ನು ತಪ್ಪಿಸಬಹುದು. ಮತ್ತು ಬಾಲ್ಯ ವಿವಾಹ ಎಲ್ಲಿಯಾದರು ಕಂಡು ಬಂದರೆ ತಕ್ಷಣ ಮಾಹಿತಿಯನ್ನು ಕೊಡುವ ಜವಾಬ್ದಾರಿ ನಮ್ಮ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಸರ್ಚ ಸಂಸ್ಥೆಯ ಸಂಯೋಜಕ ಜಿ.ಎನ್‌. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ನವೆಂಬರ್‌ 1 ಬಾಲ್ಯ ವಿವಾಹ ನಿಷೇಧ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಜನರಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.

Advertisement

ತುಳಸಿಗೇರಿ ಗ್ರಾಮ ಲೆಕ್ಕಾಧಿಕಾರಿ ಸಾಬಣ್ಣ ಹಳ್ಳಿ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ

ಸುಧಾಕರ ಬಡಿಗೇರ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ದಾಸಣ್ಣನವರ, ಸಿಂಧು ಮಕ್ಕಳ ಸಂಘದ ಅನುಷ್ಕ ಹಲಗಲಿ, ಸಂಸ್ಥೆಯ ಸಿಬ್ಬಂದಿ ರೇಖಾ ಬಡಿಗೇರ, ಶೈಲಜಾ ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next