Advertisement

ಅಲ್ಪಸಂಖ್ಯಾತರ ಪೌರತ್ವಕ್ಕಿಲ್ಲ ತೊಂದರೆ

01:41 PM Jan 06, 2020 | Suhan S |

ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಲ್ಲ. ಈ ಕಾಯ್ದೆ ಕೇವಲ ಪೌರತ್ವ ನೀಡಲು ಇರುವುದು ಹೊರತು ಯಾವುದೇ ವ್ಯಕ್ತಿಗಳಿಂದ ಪೌರತ್ವ ಕಿತ್ತುಕೊಳ್ಳಲು ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಹೇಳಿದರು.

Advertisement

ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಬಾಂಗ್ಲಾದೇಶ, ಅಫ್ಘಾನಿಸ್ತಾನ್‌ ಮತ್ತು ಪಾಕಿಸ್ತಾನ್‌ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮರನ್ನು ಹೊರತುಪಡಿಸಿ ಇನ್ನೂಳಿದ ಹಿಂದೂ, ಜೈನ್‌, ಸಿಖ್‌, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್‌ ಧರ್ಮೀಯರಿಗೆ ಕೆಲವು ಕಾನೂನುಗಳಿಗೆ ಒಳಪಟ್ಟು ಪೌರತ್ವ ಕೊಡುವ ಕಾಯ್ದೆ ಇದಾಗಿದೆ. ಆದರೆ, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ರಾಷ್ಟ್ರದ ಅಲ್ಪಸಂಖ್ಯಾತ ಜನರಲ್ಲಿ ತಪ್ಪು ಮಾಹಿತಿ ನೀಡಿ ಅವರನ್ನು ಪ್ರಚೋದಿಸಿ ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ಕಳೆದ ಒಂದು ತಿಂಗಳಿನಿಂದ ಪೌರತ್ವ ಕಾಯ್ದೆ ಜಾರಿಗೆ ಬಂದಾಗಿನಿಂದ ದೇಶದ ಅಲ್ಪಸಂಖ್ಯಾತ ಜನರಲ್ಲಿ ಅಭದ್ರತೆಯ ಭಾವನೆ ಉಂಟಾಗಲು ಕಾಂಗ್ರೆಸ್‌ ಹಾಗೂ ಇನ್ನುಳಿದ ವಿರೋಧಿ ಪಕ್ಷಗಳಿಗೆ ಕಾರಣ ಎಂದರು.

ಸ್ವಾತಂತ್ರ್ಯದ ನಂತರ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ಕಾಂಗ್ರೆಸ್‌ ಪಕ್ಷ. ಅಂದು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದ್ದರೆ ಇಂದು ಈ ಕಾಯ್ದೆಯ ಅವಶ್ಯಕತೆ ಇರುತ್ತಿರಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದು ಕೇವಲ ಬಿಜೆಪಿಯ ಗುರಿಯಾಗಿರಲಿಲ್ಲ. ಇದಕ್ಕಿಂತ ಮೊದಲು ಇಂದಿರಾ ಗಾಂ ಧಿ, ಮನಮೋಹನ್‌ಸಿಂಗ್‌, ರಾಜೀವ್‌ ಗಾಂಧಿ  ಈ ಕಾಯ್ದೆ ತರಲು ಪ್ರಯತ್ನಿಸಿದ್ದರು.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ ಕಾಂಗ್ರೆಸ್‌ ಪಕ್ಷ‌ ಅಲ್ಪಸಂಖ್ಯಾತರನ್ನು ಹಿಂಸೆಗೆ ಪ್ರಚೋದನೆ ನೀಡುತ್ತಿದೆ. ಆದ್ದರಿಂದ ದೇಶದ ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕÒ‌ದ ಮಾತಿಗೆ ಮರುಳಾಗದೇ ದೇಶದ ಸಂವಿಧಾನ ಹಾಗೂ ಭಾರತೀಯ ಜನತಾ ಪಕÒ‌ದ ಮೇಲೆ ನಂಬಿಕೆಯನ್ನಿಟ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಭಿಯಾನದ ಸಂಚಾಲಕರಾದ ಶಿವಾನಂದ ಮ್ಯಾಗೇರಿ, ಹೇಮಾ ಶಿವರಾಜ ಸಜ್ಜನರ, ರಮೇಶ ಹೊನ್ನಳ್ಳಿ, ಬಸನಗೌಡ ಮೇಲಿನಮನಿ, ಶಾಂತವ್ವ ಸುಬೇದಾರ, ಕರಲಂದಸಾಬ್‌ ಧಾರವಾಡ, ರೇಣಕಗೌಡ ಪಾಟೀಲ, ಶರೀಫಸಾಬ್‌ ನದಾಫ್‌, ರೇಖಾ ಕಂಕನವಾಡ, ಸಂಗಪ್ಪ ಕಂಕನವಾಡ, ಫಕ್ಕಿರಗೌಡ ಭರಮಗೌಡ್ರ, ನಾಸೀರಸಾಬ್‌ ಬಡಿಗೇರ, ಭಾರತಿ ರಾಮಪುರಮಠ, ಸಂಜನಾ ರಾಯ್ಕರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next