ದೇವನಹಳ್ಳಿ: ಸಮಾಜದ ಮೂಢನಂಬಿಕೆಗಳು, ಕಂದಾಚಾರಗಳ ವಿರುದ್ಧ ತಮ್ಮ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು ಶ್ರೀ ಅಂಬಿಗರ ಚೌಡಯ್ಯರವರು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ದಾಸ ಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಚೌಡಯ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಯುವ ಪೀಳಿಗೆ ವಿದ್ಯಾವಂತರಾಗಬೇಕು.
ಮಹಾಪುರುಷರನ್ನು ಮಾದರಿಯನ್ನಾಗಿಸಿಕೊಂಡು ಉತ್ತಮ ಸಮಾಜಕ್ಕೆ ಕಂಕಣ ಬದ್ಧರಾಗಬೇಕು ಎಂದರು. ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಸಮುದಾಯದ ಏಳಿಗೆಗೆ ಅಂಬಿಗರ ಚೌಡಯ್ಯ ಅವರ ಕೊಡುಗೆ ಸಾಕಷ್ಟು ಇದೆ. ಸಮಾಜದ ಪ್ರತಿಯೊಬ್ಬರು ಅವರ ಇತಿಹಾಸ ಮತ್ತು ಅವರು ನಡೆದು ಬಂದ ದಾರಿಯನ್ನು ಪಾಲಿಸುವಂತಾಗಬೇಕು ಎಂದರು.
ಇದನ್ನೂ ಓದಿ:3ನೇ ಅವಧಿಗೆ ಸ್ಪರ್ಧೆ ಇಲ್ಲ; ಮೋದಿ ಬದಲು ಮುಂದಿನ ಪ್ರಧಾನಿ ಹುದ್ದೆಗೆ ಯಾರು ಅರ್ಹ?ಸಮೀಕ್ಷೆ
ತಾಲೂಕು ಅಧ್ಯಕ್ಷ ರಾಮಾಂಜಿನಪ್ಪ, ಮುಖಂಡರಾದ ಶ್ರೀನಿವಾಸ್, ಆನಂದ್, ರಾಘವೇಂದ್ರ, ಗೋಪಾಲ್ ಆರ್., ಆದಿ ನಾರಾಯಣ, ರಾಮಣ್ಣ, ಮಲ್ಲೇಶ್, ನಾಗೇಶ್, ಟಿಎಪಿಸಿಎಂಎಸ್ ಗುರಪ್ಪ, ಶಿರಸ್ತೇದಾರ ನಿಸಾರ್‌ಅಹಮದ್, ಕೆಇಬಿ ಸಹಾಯಕ ಅಭಿ ಯಂತರ ನಿರೀಕ್ಷಕ ಚಿದಾನಂದ್ ಮತ್ತು ವಿಶ್ವನಾಥ್, ತಾಲೂಕು ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಇದ್ದರು.