Advertisement

ಮಾದಕ ವಸ್ತುಗಳ ವಿರುದ್ಧ ಜಾಗೃತಿ ರ‍್ಯಾಲಿ

12:00 PM Nov 26, 2017 | |

ಬಜಾಲ್‌: ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಅರ್ಧದಷ್ಟು ಜನ ಯುವಜನರಾಗಿದ್ದಾರೆ. ಆ ಕಾರಣಕ್ಕಾಗಿ ನಮ್ಮ ದೇಶವನ್ನು ಯುವಭಾರತವಾಗಿದೆ. ದೇಶದ ಯುವಕರು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗದೇ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್‌ ಕುಮಾರ್‌ ಬಜಾಲ್‌ ಹೇಳಿದರು. ಡಿವೈಎಫ್‌ಐ ಹಮ್ಮಿಕೊಂಡ ಮಾದಕ ವಸ್ತುಗಳ ವಿರುದ್ಧ ಯುವಜನ ಜಾಗೃತಿ ರ‍್ಯಾಲಿ ಮತ್ತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

Advertisement

ದೇಶದ ಸತ್ಪ್ರಜೆಗಳಾಗಿ ದೇಶಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಯುವಜನರು ಗಾಂಜಾ, ಅಫೀಮಿಗೆ ಬಲಿಬಿದ್ದು ದಾರಿ ತಪ್ಪುತ್ತಿದ್ದಾರೆ. ದಾರಿ ತಪ್ಪಿದ ಯುವಜನರು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವ ಮೂಲಕ ಸಮಾಜದ ದ್ರೋಹಿಗಳಾಗುತ್ತಿರುವುದು ಅಪಾಯಕಾರಿ ಎಂದರು.

ಜಿಲ್ಲಾಧ್ಯಕ್ಷ ಬಿ. ಕೆ. ಇಮ್ತಿಯಾಜ್‌, ಜಿಲ್ಲಾ ಕಾರ್ಯದರ್ಶಿ ಸಂತೋಷ್‌ ಬಜಾಲ್‌, ಮಾಜಿ ಕಾರ್ಪೊರೇಟರ್‌ ಜಯಂತಿ ಬಿ. ಶೆಟ್ಟಿ, ಅಧ್ಯಕ್ಷ ರಿತೇಶ್‌, ಪವನ್‌ ಸುಲಾಯ ಉಪಸ್ಥಿತರಿದ್ದರು. ಸ್ಥಳೀಯ ಮುಖಂಡ ಪ್ರೀತೇಶ್‌, ಜಗದೀಶ್‌, ಧೀರಜ್‌, ಪ್ರಶಾಂತ್‌ ಕುಡ್ತಡ್ಕ, ಸೋನಿಲ್‌, ಕೌಶಿಕ್‌, ಬಶೀರ್‌ ಜಲ್ಲಿಗುಡ್ಡೆ ನೇತೃತ್ವ ವಹಿಸಿದ್ದರು. ಧೀರಜ್‌ ಬಜಾಲ್‌ ವಂದಿಸಿದರು. ಡಿವೈಎಫ್‌ಐ ಬಜಾಲ್‌ ಘಟಕದ ಕಾರ್ಯದರ್ಶಿ ಪ್ರಕಾಶ್‌ ಪಕ್ಕಲಡ್ಕ ನಿರೂಪಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬಜಾಲ್‌ ಚರ್ಚ್‌ ಬಳಿ ಯಿಂದ ಪಕ್ಕಲಡ್ಕ ಜುಮ್ಮಾ ಮಸೀದಿ ಮಾರ್ಗವಾಗಿ ಭಜನಾ ಮಂದಿರದವರೆಗೆ ಯುವಜನ ಜಾಗೃತಿ ರ‍್ಯಾಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next