Advertisement

ಗ್ರಾಮ ಪಂಚಾಯತ್‌ಗಳಿಂದ ಜಾಗೃತಿ ಕಾರ್ಯಕ್ರಮ ಆರಂಭ:ಕನಿಷ್ಠ ಕಂತಿನ ಗರಿಷ್ಠ ವಿಮಾ ಯೋಜನೆ

09:12 PM Jun 23, 2021 | Team Udayavani |

ಉಡುಪಿ: ಆಕಸ್ಮಿಕವಾಗಿ ಉಂಟಾಗುವ ಸಾವಿನ ಸಂದರ್ಭ ಬಿಪಿಎಲ್‌ / ಎಪಿಎಲ್‌ ಭೇದವಿಲ್ಲದೆ ಎಲ್ಲರಿಗೂ ಸುಲಭ ಕಂತುಗಳಲ್ಲಿ ನೆರವಾಗುವ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ).

Advertisement

 ಅರ್ಹತೆ:

18 ರಿಂದ 50 ವರ್ಷ ವಯೋಮಾನದ ಖಾತೆದಾರರು ಈ ಎರಡೂ ವಿಮೆ ಮಾಡಿಕೊಳ್ಳಬಹುದು. ಇವರಿಗೆ ವರ್ಷಕ್ಕೆ ಒಟ್ಟು 342 ರೂ. ಪ್ರೀಮಿಯಂ ಬರುತ್ತದೆ. ಆಕಸ್ಮಿಕವಾಗಿ ಇವರು ಅಪಘಾತದಲ್ಲಿ ಮರಣ ಹೊಂದಿದರೆ ಇವರ ನಾಮಿನಿಗೆ 4 ಲಕ್ಷ ರೂ. ವಿಮೆ ಸೌಲಭ್ಯ ಸಿಗುತ್ತದೆ.

ನೋಂದಣಿ ಹೇಗೆ?:

ಪ್ರೀಮಿಯಂ ಮೇ ತಿಂಗಳಲ್ಲಿ ಬ್ಯಾಂಕ್‌ ಖಾತೆಯಿಂದ  ಕಡಿತವಾಗುತ್ತದೆ. ಖಾತೆ ತೆರೆಯುವಾಗ ಅಥವಾ ಈಗಾಗಲೇ ಇರುವ ಖಾತೆಯಾದರೂ ನೋಂದಣಿ ಮಾಡಬಹುದು.

Advertisement

ಜಿÇÉೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಕೇವಲ 6,26,429 ಮಂದಿ ನೋಂದಣಿ ಮಾಡಿಕೊಂಡಿ¨ªಾರೆ. ಇವರಲ್ಲಿ 1,086 ಜನ  ಪ್ರಯೋಜನ ಪಡೆದುಕೊಂಡಿದ್ದಾರೆ.  ಸೌಲಭ್ಯ ಕುರಿತು ತಿಳಿವಳಿಕೆ ಇಲ್ಲದ ಕಾರಣ ವಾರಸುದಾರರಿಗೆ ಸೌಲಭ್ಯ ಸಿಗುತ್ತಿಲ್ಲ.

ಹೇಗೆ ಕ್ಲೇಮ್‌ ಮಾಡಬೇಕು? :

ಸವಲತ್ತು ವಾರಸುದಾರರಿಗೆ ಸಿಗಬೇಕಾದರೆ ವಾರಸುದಾರರು ಮರಣ ಹೊಂದಿದವರ ಖಾತೆಯನ್ನು ಕ್ಲೋಸ್‌ ಮಾಡಲು ಬ್ಯಾಂಕ್‌ಗೆ ಬಂದಾಗ ಖಾತೆಯಲ್ಲಿ ಪ್ರೀಮಿಯಂ ಕಡಿತವಾಗಿದೆಯೇ ಎಂದು ನೋಡಬೇಕು. ಕಡಿತವಾಗಿದ್ದರೆ ವಾರಸುದಾರರು ಅಗತ್ಯದ ದಾಖಲೆ  ಕೊಡಬೇಕು. ಆದರೆ  ಮೃತ ಪಟ್ಟ 30 ದಿನಗಳೊಳಗೆ ಬ್ಯಾಂಕ್‌ಅನ್ನು ಸಂಪರ್ಕಿಸಬೇಕು.

ವ್ಯಕ್ತಿ ಮೃತ ಪಟ್ಟಾಗ ಅವರ ವಾರಸುದಾರರಿಗೆ  ಯೋಜನೆ ಬಗ್ಗೆ ತಿಳಿಸಬೇಕು. ಮರಣ ಪತ್ರ ಕೊಡುವಾಗ ಸ್ಥಳೀಯ ಸಂಸ್ಥೆಯವರು ಪಾಸ್‌ ಪುಸ್ತಕ ತರಿಸಿ ಯೋಜನೆಗೆ ಸೇರಿದ ವಿಷಯ ತಿಳಿಸಿ ಸಕಾಲದಲ್ಲಿ ಬ್ಯಾಂಕ್‌ಗೆ ದಾಖಲೆಗಳನ್ನು ಒದಗಿಸಲು ತಿಳಿಸಬಹುದು.

ವಿಮಾ ಯೋಜನೆಗಳನ್ನು ಗ್ರಾ.ಪಂ. ನೌಕರರು, ಸ್ವಸಹಾಯ ಗುಂಪಿನ ಸದಸ್ಯರು, ಎಸ್‌ಎಲ್‌ಆರ್‌ಎಂ (ಸ್ವಚ್ಛತ) ಕಾರ್ಮಿಕರಿಗೆ ಅಳವಡಿಸಬೇಕು. ಯೋಜನೆಯ ಲಾಭ ಕನಿಷ್ಠ ಈ ವರ್ಗಕ್ಕೆ ಸಿಗಬೇಕೆಂದು ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ನಿರ್ಧರಿಸಿದ್ದಾರೆ. ಇದಕ್ಕಾಗಿ ಜೂ. 20ರಿಂದ 30ರವರೆಗೆ ಎಲ್ಲ ಗ್ರಾ.ಪಂ.ಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.  ಜೂ. 24 ಮತ್ತು 25ರಂದು ಗ್ರಾ.ಪಂ.ಗಳಲ್ಲಿ  ಸ್ಥಳದಲ್ಲೇ ನೋಂದಣಿ ನಡೆಸಲಾಗುವುದು.

ಜೂ. 24, 25: ಸ್ಥಳದಲ್ಲೇ ನೋಂದಣಿ  :

ವಿಮಾ ಯೋಜನೆಗಳಲ್ಲದೆ ಸುಕನ್ಯಾ ಸಮೃದ್ಧಿ ಖಾತೆ, ಅಟಲ್‌ ಪಿಂಚಣಿ ಇನ್ನಿತರ ಯೋಜನೆ ಕುರಿತು ಬ್ಯಾಂಕ್‌ನಲ್ಲಿ ಇರುವ ಸೌಲಭ್ಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಮೂಲ್ಯ ಆರ್ಥಿಕ  ಸಾಕ್ಷರತಾ  ಕೇಂದ್ರದ ಆರ್ಥಿಕ  ಸಮಾಲೋಚಕರನ್ನು (ಉಡುಪಿ: 0820- 2529331, ಕುಂದಾಪುರ: 08254- 233334, ಕಾರ್ಕಳ: 08258- 230438) ಸಂಪರ್ಕಿಸಬಹುದು.  -ಸಂತೋಷ ಕುಮಾರ್‌ ಬೇಕಲ್‌, ಸಮಾಲೋಚಕರು, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next