Advertisement

ಅಲೆಮಾರಿ ಸಮುದಾಯಗಳಿಗೆ ಅರಸು-ಸಿದ್ದರಾಮಯ್ಯ ಕೊಡುಗೆ ಅಪಾರ: ಶಾಸಕ ಮಂಜುನಾಥ್

12:28 PM Jan 22, 2022 | Team Udayavani |

ಹುಣಸೂರು: ಅಲೆಮಾರಿ ಸಮುದಾಯದ ಮಂದಿಗೆ ಅರಸು ನಿಗಮ ಅಲ್ಲದೆ ಗ್ರಾಮ ಪಂಚಾಯ್ತಿವತಿಯಿಂದಲೂ ಮನೆ ವಿತರಿಸಲು ಮುಂದಾಗುವಂತೆ ಶಾಸಕಜ ಎಚ್.ಪಿ.ಮಂಜುನಾಥ್ ಉದ್ದೂರು ಗ್ರಾ.ಪಂ. ವರಿಷ್ಟರು ಹಾಗೂ ಸದಸ್ಯರಿಗೆ ಸೂಚಿಸಿದರು.

Advertisement

ತಾಲೂಕಿನ ಉದ್ದೂರು ಗ್ರಾ.ಪಂ.ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ-ಅರೆ ಅಲೆಮಾರಿ ಜನಾಂಗದವರಿಗಾಗಿ ಏರ್ಪಡಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಲೆಮಾರಿಗಳು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ, ಸರಕಾರದ ನೆರವಿಗೆ ಕಾಯದೆ ನಿಮ್ಮ ಕಾಲಮೇಲೆ ನಿಂತು ಅಭಿವೃದ್ದಿ ಹೊಂದುವ ಮೂಲಕ ನಿಮ್ಮ ಪ್ರಗತಿಗೆ ನೀವೇ ಶಿಲ್ಪಿಗಳಾಗಿಬೇಕಿದೆ.

ಈ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಹೆಳವ ಅಲೆಮಾರಿ ಕುಟುಂಬಗಳಿದ್ದು, ಸಾಕಷ್ಟು ಹಿಂದುಳಿದಿರುವ ಬಗ್ಗೆ ಅರಿವಿದೆ. ಅನೇಕ ಕುಟುಂಬಗಳಿಗೆ ಮನೆಗಳಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಈಗ ಬಂದಿರುವ ವಸತಿ ಯೋಜನೆ ಸೌಲಭ್ಯ ಕಲ್ಪಿಸಬೇಕೆಂದು ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಲಹೆ ನೀಡಿದರು.

ಇವರಿಗೆ ಸರಕಾರದ ಸೌಲಭ್ಯಗಳು ತಲುಪಬೇಕು. ಮುಖ್ಯವಾಗಿ ಅಲೆಮಾರಿಗಳಿಗೆ ಸರಕಾರದಲ್ಲಿ ಭೂಮಿ ಖರೀದಿಸಿ ವಿತರಿಸುವ ಯೋಜನೆ ಇದ್ದು. ಆದರೆ ಅನುಷ್ಟಾನದ ಹಂತದಲ್ಲಿ ಅಡೆತಡೆ ಉಂಟಾಗುತ್ತಿರುವುದರಿಂದ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲವೆಂದರು.

Advertisement

ಅರಸು-ಸಿದ್ದರಾಮಯ್ಯರ ನೆನಪು:

ಅಲೆಮಾರಿ ಹಾಗೂ ಸಣ್ಣಪುಟ್ಟ ಜುನಾಂಗಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ದೇವರಾಜಅರಸರು ಪ್ರಮುಖ ಪಾತ್ರವಹಿಸಿದ್ದರೆ, ನಂತರದಲ್ಲಿ ಸಿದ್ದರಾಮಯ್ಯನವರು ಈ ಸಮುದಾಯದವರಿಗೆ ಆರ್ಥಿಕ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡುವ ಮೂಲಕ ಈ ಸಮುದಾಯದ ನೆನಪಿನಲ್ಲಿ ಅಚ್ಚಳಯದೆ ಉಳಿದ್ದಿದ್ದಾರೆ.  ಆದರೆ ಈಗಿನ ಸರಕಾರದಲ್ಲಿ ಯಾವುದೇ ಯೋಜನೆಗಳು ಇಲ್ಲವೆಂದು ಬೇಸರಿಸಿದರು.

ಹಕ್ಕುಪತ್ರ ವಿತರಣೆ:

ಕಾರ್ಯಕ್ರಮದಲ್ಲಿ 11 ಮಂದಿ ಫಲಾನುಭವಿಗಳಿಗೆ ವಸತಿ ಯೋಜನೆಯ ಹಕ್ಕುಪತ್ರ ವಿತರಿಸಲಾಯಿತು. ಉಳಿದಂತೆ ಇಲಾಖೆ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ತಿಳಿಸಿದರೆ ಸಾಲದು, ಈ ಸಮುದಾಯದ ಅಭಿವೃದ್ದಿಗೆ ಪೂರಕವಾಗಿ ಯೋಜನೆಗಳನ್ನು ತಲುಪಿಸಬೇಕೆಂದು ತಾಕೀತು ಮಾಡಿದರು.

ಬಾಲ್ಯ ವಿವಾಹ ಬೇಡ ಉಪನ್ಯಾಸಕ ವಾಸು:

ಅಲೆಮಾರಿ ಜನಾಂಗದ ಕುರಿತು ಉಪನ್ಯಾಸ ನೀಡಿದ ಬಾಲಕಿಯರ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಎಚ್.ಬಿ.ವಾಸು ಅಲೆಮಾರಿ ಸಮುದಾಯಗಳಿಗೆ ಶಿಕ್ಷಣವೇ ಅಸ್ತçವಾಗಬೇಕು. ಶಿಕ್ಷಣವು ಅಜ್ಞಾನವನ್ನು ಹೋಗಲಾಡಿಸುವ ದೊಡ್ಡ ಸಾಧನವಾಗಿದೆ.  ಅಲೆಮಾರಿಗಳಲ್ಲಿ ಇಂದಿಗೂ ಮೂಡನಂಬಿಕೆ, ಕಂದಾಚಾರ, ಮೌಡ್ಯ ಮಡುಗಟ್ಟಿದೆ. ಇದರಿಂದ ಹೊರಬಂದು ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ. 18 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ದೇವಸ್ಥಾನ, ಹಳ್ಳಿಗಳಲ್ಲಿ  ಮದುವೆ ಮಾಡುವ ಬಗ್ಗೆ ವರದಿಯಾಗುತ್ತಲೇ ಇದೆ. ಬಾಲ್ಯವಿವಾಹ ಮಾಡಬೇಡಿ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜೊತೆಗೆ ವಿವಾಹ ಮಾಡಿಸಿದವರಿಗೂ ಶಿಕ್ಷೆ ಇದೆ ಎಂದು ಎಚ್ಚರಿಸಿದರು.

ತಾಲೂಕು ಹಿಂದುಳಿದ ವರ್ಗಗಳ ಪ್ರಭಾರ ಕಲ್ಯಾಣಾಧಿಕಾರಿ ಸುಕನ್ಯ ಅಲೆಮಾರಿ ಜನಾಂಗದವರಿಗಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉದ್ದೂರು ಗ್ರಾ.ಪಂ.ಅಧ್ಯಕ್ಷ ನಂದೀಶ್, ಉಪಾರ್ಧಯಕ್ಷೆ ಗೌರಮ್ಮ, ಸದಸ್ಯ ಮನುಕುಮಾರ್ ಹಾಗೂ ಇತರೆ ಸದಸ್ಯರು. ಪಿಡಿಓ ನವೀನ್, ಬಿಸಿಎಂ ಅಧಿಕಾರಿ ಸುಜೇಂದ್ರಕುಮಾರ್, ಸಿಬ್ಬಂದಿಗಳಾದ ಚಿಕ್ಕವಡ್ಗಲ್, ರವಿ, ಗೀತಾ, ಪ್ರತಿಭಾ, ಉಮೇಶ್, ಮಂಜುನಾಥ್, ಕೃಷ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಹೆಳವಜನಾಂಗದ ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next