Advertisement

ಸಾಂಕ್ರಮಿಕ ರೋಗದ ಬಗ್ಗೆ ಜಾಗೃತಿ ಅವಶ್ಯ: ವಿಜಯ್‌

10:07 PM Jul 19, 2019 | Lakshmi GovindaRaj |

ಬೇಲೂರು: ನಗರ ಪ್ರದೇಶಗಳ ಜನರಲ್ಲಿ ಸ್ವತ್ಛತೆ ಮತ್ತು ಸಾಂಕ್ರಾಮಿಕ ರೋಗ ಹರಡು ವುದು ಹಾಗೂ ತಡೆಗಟ್ಟುವ ಬಗ್ಗೆ ಅರಿವು ಅಗತ್ಯ ಎಂದು ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‌ ತಿಳಿಸಿದರು.

Advertisement

ತಾಲೂಕು ಸರ್ಕಾರಿ ಆಸ್ಪತ್ರೆ ಮತ್ತು ಪುರಸಭೆ ಜಂಟಿಯಾಗಿ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಿಳುವಳಿಕೆ ಅವಶ್ಯ: ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಜನರಲ್ಲಿ ಹೆಚ್ಚು ಕಾಡುತ್ತವೆ. ಈ ಕಾಯಿಲೆಗಳು ಹರಡದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಹಾಗೂ ಯಾವ ರೀತಿ ತಡೆಗಟ್ಟಬೇಕು ಎಂಬುದರ ಕುರಿತು ತಿಳಿವಳಿಕೆ ನೀಡಬೇಕೆಂದು ಹೇಳಿದರು.

ರೋಗ ಲಕ್ಷಣವೇನು?: ರೋಗದ ಲಕ್ಷಣ ವಿಪರೀತ ಜ್ವರ, ಚಳಿ, ಮೈ ಕೈ ನೋವು, ತಲೆನೋವು, ಮೈ ಬೆವರುವುದು, ನಿಶ್ಯಕ್ತಿ ಇವು ರೋಗದ ಲಕ್ಷಣಗಳು. ಆದರೆ, ಇವುಗಳು ಬಂದೊಡನೆ ಹತ್ತಿರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯ ಬಹುದಾಗಿದೆ ಎಂದು ತಿಳಿಸಿದರು.

ಹೀಗೆ ಮಾಡಿ: ನಗರದ ಪದೇಶದಲ್ಲಿ ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಡಬೇಕು. ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಟಯರ್‌ ಎಳನೀರು ಚಿಪ್ಪು ಇನ್ನೀತರೆ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಂಡಾಗ ಸಾಂಕ್ರಾಮಿಕ ರೋಗಗಳನ್ನು ದೂರ ಇಡಬಹುದು.

Advertisement

ಅಲ್ಲದೇ, ಕುಡಿಯುವ ನೀರು ಶೇಖರಣೆ ಮಾಡುವ ಪಾತ್ರೆಗಳನ್ನು ತೊಳೆದು ಒಣಗಿಸಿ ನೀರು ತುಂಬ ಬೇಕು. ನೀರು ತುಂಬಿದ ಡ್ರಮ್‌ಗಳನ್ನು ಸ್ವತ್ಛವಾದ ಬಟ್ಟೆಯಿಂದ ಮುಚ್ಚಬೇಕು ಎಂದು ಹೇಳಿದರು.

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುಲು ಅರಿವು ಮೂಡಿಸಲು ಎನ್‌ಎಸ್‌ಎಸ್‌ ಸ್ಕೌಟ್ಸ್‌- ಗೈಡ್ಸ್‌, ಆರೋಗ್ಯ ಇಲಾಖೆ 176 ಸಿಬ್ಬಂದಿ, ಪಟ್ಟಣದ 23 ವಾರ್ಡ್‌ಗಳಲ್ಲಿ ಸಂಚರಿಸಿ ಪ್ರತಿ ಮನೆಗೆ ತೆರಳಿ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಕರಪತ್ರ ಹಂಚಿಕೆ: ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಮಾತನಾಡಿ, ಸಾಂಕ್ರಾಮೀಕ ರೋಗ ಹರಡುವಿಕೆ ಬಗ್ಗೆ ಜನಸಾಮಾನ್ಯರಲ್ಲಿ ಪುರಸಭೆ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಕರ ಪತ್ರದ ಮೂಲಕ ಅರಿವು ಮೂಡಿಸುತ್ತಿದೆ. ಪಟ್ಟಣದ 23 ವಾರ್ಡ್‌ಗಳಲ್ಲಿ ಸ್ವತ್ಛತೆ ಬಗ್ಗೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.

ವಾರ್ಡ್‌ಗಳಲ್ಲಿ ಖಾಲಿ, ನಿವೇಶನ , ಪಾರ್ಕ್‌ಗಳಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸೊಳ್ಳೆ ಮತ್ತು ಲಾರ್ವಾಗಳ ತಾಣಗಳಿಗೆ ರಾಸಾಯನಿಕ ಸಿಂಪಡಿಸಿ ನಾಶ ಮಾಡಲಾಗಿದೆ. ಯುಜಿಡಿ ಪ್ಲಾಂಟ್‌ನಲ್ಲೂ ರಾಸಾಯನಿಕ ಸಿಂಪಡಿಸಲಾಗಿದ್ದು ಸಾರ್ವಜನಿಕರು ಸ್ವತ್ಛತೆಗೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.

ಕಸ ಬೇರ್ಪಡಿಸಿ: ಪುರಸಭೆಯಿಂದ ಈಗಾಗಲೇ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಆಟೋ ಟಿಪ್ಪರ್‌ಗಳಲ್ಲಿ ಪಡೆಯುತ್ತಿದ್ದು ಸಾಂಕ್ರಾಮಿಕ ರೋಗ ಹರಡದಂತೆ ಎಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕೃಷ್ಣಪ್ಪ, ಉಷಾ, ಪುರಸಭೆ ಆರೋಗ್ಯಾಧಿಕಾರಿ ವೆಂಕಟೇಶ್‌, ಪರಿಸರ ಎಂಜಿನಿಯರ್‌ ಮಧುಸೂದನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next