Advertisement

ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಿ: ಸೆಂಥಿಲ್‌

03:39 AM Mar 29, 2019 | Sriram |

ಮಂಗಳೂರು: ಮತದಾನ ಕಡ್ಡಾಯವಲ್ಲ. ಆದರೆ ಮತದಾನ ಮಾಡದಿದ್ದರೆ 5 ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗುತ್ತೇವೆ. ಆದ್ದರಿಂದ ಮತದಾನ ಅರ್ಹರೆಲ್ಲರೂ ಮತದಾನ ಮಾಡಬೇಕೆಂದು ನಾವು ಹೇಳುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣ ಅಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

Advertisement

ಅವರು ಗುರುವಾರ ಇಲ್ಲಿನ ಶ್ರೀನಿವಾಸ ವಿಶ್ವವಿದ್ಯಾನಿಲಯ, ದ.ಕ. ಜಿಲ್ಲಾಡಳಿತ, ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಪಾಂಡೇಶ್ವರದ ಶ್ರೀನಿವಾಸ್‌ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಯುವ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಲೆಕ್ಟ್ರಾನಿಕ್‌ ಮತಯಂತ್ರ ಬಂದಿರುವುದರಿಂದ ಮತದಾನ ಪ್ರಕ್ರಿಯೆ ಈಗ ಸುಲಭವಾಗಿದೆ. ಆದ್ದರಿಂದ ಕನಿಷ್ಠ ಕುತೂಹಲಕ್ಕಾಗಿ ಆದರೂ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿ ಎಂದು ಜಿಲ್ಲಾಧಿಕಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

25,000 ಯುವ ಮತದಾರರು
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಆರ್‌. ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 18- 19 ವರ್ಷ ವಯಸ್ಸಿನ 25,000 ಯುವಜನರು ಮತದಾರರ ಪಟ್ಟಿಗೆ ನೋಂದಣಿ ಮಾಡಿದ್ದಾರೆ ಎಂದರು.

ಮನಪಾ ಕಮಿಷನರ್‌ ಬಿ.ಎಸ್‌. ನಾರಾಯಣಪ್ಪ ಮಾತನಾಡಿದರು. ಶ್ರೀನಿವಾಸ ವಿ.ವಿ. ಕುಲಾಧಿಪತಿ ಎ.ರಾಘವೇಂದ್ರ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಕುಲಪತಿ ಡಾ| ಪಿ. ಎಸ್‌. ಐತಾಳ ಸ್ವಾಗತಿಸಿದರು.

Advertisement

ಒಂದು ಮತಕ್ಕೂ ಬೆಲೆ
ಶ್ರೀನಿವಾಸ ವಿ.ವಿ. ಸಹ ಕುಲಾಧಿಪತಿ ಶ್ರೀನಿವಾಸ ರಾವ್‌ ಮಾತನಾಡಿ, “ನನ್ನ ಒಂದು ಮತದಿಂದ ಏನಾಗ್ತದೆ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇಂತಹ ನಕಾರಾತ್ಮಕ ಭಾವನೆ ಸರಿಯಲ್ಲ. ಏಕೆಂದರೆ ಒಂದು ಮತದಿಂದ ಒಬ್ಬ ಅಭ್ಯರ್ಥಿ ಗೆಲ್ಲಲೂ ಬಹುದು. ಅಂತಹ ಸಂದರ್ಭದಲ್ಲಿ ನನ್ನ ಒಂದು ಓಟಿನಿಂದಾಗಿ ಅವರು ಗೆದ್ದಿದ್ದಾರೆ ಎಂದು ಹೆಮ್ಮೆ ಪಡುವ ಅವಕಾಶವೂ ಮತದಾರನಿಗೆ ಲಭಿಸುತ್ತದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next