ಮುದ್ದೇಬಿಹಾಳ: ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಹುಬ್ಬಳ್ಳಿಯಿಂದ ಬೈಕ್ ಮೇಲೆ ದೇಶವ್ಯಾಪಿ ಸಂಚಾರ ನಡೆಸುತ್ತಿರುವ ಧಾರವಾಡ ಸುನೀಲ ಮರಾಠೆ, ಬೆಳಗಾವಿಯ ಮಹಮ್ಮದಹುಸೇನ್ ಹಾಜಿ ಅವರನ್ನು ಇಲ್ಲಿನ
ಬಸವೇಶ್ವರ ವೃತ್ತದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಮಾ.6ರಂದು ಹುಬ್ಬಳ್ಳಿಯಿಂದ ಯಾತ್ರೆ ಆರಂಭಿಸಿದ್ದ ಇವರು ಮೊದಲಿಗೆ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಅಲ್ಲಿನ ಮಹಾಲಕ್ಷ್ಮೀ ದೇವಸ್ಥಾನ, ಪುಣೆಯಲ್ಲಿ ಸಿದ್ಧಿ ವಿನಾಯಕ ಮಂದಿರ, ಮುಂಬೈನಲ್ಲಿ ಹಾಜಿ ಅಲಿ ದರ್ಗಾ, ಇಂಡಿಯಾ
ಗೇಟ್ ಮಂತಾದೆಡೆ ಸಂಚರಿಸಿ ಕಲಬುರಗಿ ಮಾರ್ಗವಾಗಿ ಮರಳಿ ಹುಬ್ಬಳ್ಳಿಗೆ ತೆರಳುತ್ತಿದ್ದ ಈ ಯಾತ್ರಿಕರನ್ನು ತಡೆದು ಯಾತ್ರೆಯ ಉದ್ದೇಶ, ಹಿನ್ನೆಲೆ ತಿಳಿದುಕೊಂಡ ನಂತರ ಇಬ್ಬರಿಗೂ ಸಿಹಿ ತಿನ್ನಿಸಿ, ಸನ್ಮಾನಿಸಿ ಭಾರತ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆ ಕೂಗುವ ಮೂಲಕ ಹುಬ್ಬಳ್ಳಿಯತ್ತ ಬೀಳ್ಕೊಡಲಾಯಿತು.
ಯಾತ್ರಿಕರಾದ ಸುನೀಲ ಮರಾಠೆ, ಮಹ್ಮದಹುಸೇನ್ ಹಾಜಿ ಮಾತನಾಡಿ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಂತರ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂರ ವಿರುದ್ಧ ಬರುತ್ತಿದ್ದ ಪ್ರಚೋದನಕಾರಿ ಸ್ಟೇಟ್‌ಮೆಂಟ್ ಗಳು ಭಯೋತ್ಪಾದನೆ ಎಂದರೆ ಇಸ್ಲಾಂ, ಇಸ್ಲಾಂ ಎಂದರೆ ಭಯೋತ್ಪಾದನೆ ಎನ್ನುವಂತಿದ್ದವು.
ಭಯೋತ್ಪಾದಕರು ಯಾವುದೇ ಧರ್ಮಕ್ಕೆ ಸೇರಿದವರಲ್ಲ. ಯಾರೂ ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡುವುದಿಲ್ಲ. ಎಲೆಕ್ಷನ್ ಸಮೀಪ ಬಂದರೆ ಸಾಕು ದೇಶದಲ್ಲಿ ಕೋಮು ಗಲಭೆ ಸೃಷ್ಟಿಯಾಗುತ್ತಿರುವುದು ವಿಷಾದ ಪಡುವಂಥದ್ದು. ದೇಶದ ಜನತೆಗೆ ಕೋಮು ಸೌಹಾರ್ದತೆಯ ಮಹತ್ವ ತಿಳಿಸಿಕೊಡಲು, ಎಲ್ಲರೂ ಜಾತಿ ಭೇದ ಬಿಟ್ಟು ಬಿಡಬೇಕು ಎಂದರು. ಎನ್‌ಎಸ್ ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫಿಕ ಶಿರೋಳ, ಜಿಲ್ಲಾ ಕಾರ್ಯದರ್ಶಿ ಉಮರ ಮಮದಾಪೂರ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಮೋರ್ಚಾ ಅಧ್ಯಕ್ಷ ಅಶೋಕ ಅಜಮನಿ, ಪುರಸಭೆ ಸದಸ್ಯ ರಿಯಾಜ ಢವಳಗಿ, ಯುವ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಲಕ್ಷ್ಮಣ ಚವ್ಹಾಣ, ಯುವ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಾನಪ್ಪ ನಾಯಕ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಮೀನಸಾ ಮುಲ್ಲಾ, ಪ್ರಮುಖರಾದ ಬಾಪು ಢವಳಗಿ, ಶರಣು ಛಲವಾದಿ, ಫಾರೂಕ ಕುಂಟೋಜಿ, ಫಾರೂಕ ಶಿರಗುಪ್ಪಿ, ಸುಹೆಲ್ ಧಾರವಾಡಕರ, ಬಸವರಾಜ ಗೂಳಿ, ಅಸ್ಲಂ ಆದೋನಿ, ಸಮೀರ ದ್ರಾಕ್ಷಿ, ಯುಸೂಫ ವಾಲಿಕಾರ, ಕಾಶೀಮ ಬಾಗಲಕೋಟ ಇತರರು ಹಾಜರಿದ್ದರು.