Advertisement

ಡೆಂಘೀ ಬಾರದಂತೆ ಜನ ಜಾಗೃತಿ

06:18 AM Jun 07, 2020 | Suhan S |

ಹಾನಗಲ್ಲ: ಮುಂಗಾರು ಆರಂಭವಾಗುತ್ತಿದ್ದು, ಮಹಾಮಾರಿ ಕೋವಿಡ್‌-19 ವೈರಸ್‌ನ ಭಯದಲ್ಲಿರುವ ಜನತೆಗೆ ಡೆಂಘೀ ಬಾರದಂತೆ ತಡೆಗಟ್ಟುವ ಕುರಿತು ಜನಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ಆರೋಗ್ಯ ಇಲಾಖೆ ಮೇಲಿದೆ ಎಂದು ತಾಲೂಕು ವೈದ್ಯಾಧಿಕಾರಿ ರವೀಂದ್ರಗೌಡ ಪಾಟೀಲ ಕರೆ ನೀಡಿದರು.

Advertisement

ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಡೆಂಘೀ ಜನಜಾಗೃತಿ ಪ್ರಸಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೇ ತಿಂಗಳಿನಿಂದ ಅಕ್ಟೋಬರ್‌ ತಿಂಗಳ ಅವಧಿಯಲ್ಲಿ ಡೆಂಘೀ ಪ್ರಕರಣಗಳು ಕಂಡು ಬರುತ್ತವೆ. ಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ನಿಂತ ನೀರಿನಲ್ಲಿ ಡೆಂಘೀ ವೈರಸ್‌ಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದ ಹಾಗೆ ನಿಗಾವಹಿಸುವಂತೆ ಆಶಾ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು ಎಂದರು.

ವೈದ್ಯಾಧಿಕಾರಿ ಡಾ| ಎಸ್‌.ವೈ. ಹಾದಿಮನಿ ಮಾತನಾಡಿ, ಪ್ರತಿ ವರ್ಷ ಮೇ 16ಕ್ಕೆ ಡೆಂಘೀ ದಿನಾಚರಣೆ ಆಚರಿಸಲಾಗುತ್ತಿತ್ತು. ಕೋವಿಡ್  ಹಾವಳಿಯಿಂದಾಗಿ ಈಗ ಆಚರಣೆ ಹಾಗೂ ಜಾಗೃತಿ ಮೂಡಿಸಲಾಗುತ್ತಿದೆ. ಸಂಗ್ರಹಿಸಿದ ನೀರನ್ನು ಆಗಾಗ ಖಾಲಿ ಮಾಡಿ ಪಾತ್ರೆಗಳನ್ನು ತೊಳೆದು ಒಣಗಿಸಿ ಹೊಸ ನೀರನ್ನು ತುಂಬಿಸಬೇಕು. ಹಿರಿಯ ನಾಗರಿಕರು ಹಾಗೂ ಸಣ್ಣ ಮಕ್ಕಳು ಮೈತುಂಬ ಬಟ್ಟೆ ಧರಿಸಬೇಕು. ಈ ಕುರಿತು ಆರೋಗ್ಯ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.

ಆರೋಗ್ಯ ಮೇಲ್ವಿಚಾರಕಿರಾದ ಸಿ.ಎಸ್‌. ನೆಗಳೂರ, ಜ್ಞಾನೇಶ್ವರ ಬೆಳವೆನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರಬಸಮ್ಮ ಹಾಲಮ್ಮನವರ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next