ಮಂಡ್ಯ: ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಎಲ್ಲರೂ ಮುಂಜಾಗ್ರತೆ ವಹಿಸುವುದು ಅವಶ್ಯ. ಸ್ವತ್ಛತೆಯನ್ನು ಕಾಪಾಡಿಕೊಂಡಲ್ಲಿ ಸೋಂಕನ್ನು ದೂರವಿಡಬಹುದು ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ. ರೇವಣ್ಣ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತ ರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವಿಡ್‌ನಿಂದ 200ಕ್ಕೂ ಹೆಚ್ಚು ದೇಶಗಳು ತತ್ತರಿಸಿ ಹೋಗಿವೆ.
ಎಲ್ಲ ಉದ್ಯಮ ಗಳು ನೆಲಕಚ್ಚಿದ್ದು, ಇಂತಹ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಲ್ಲಬೇಕಾ ದದ್ದು ಎಲ್ಲರ ಕರ್ತವ್ಯ ಎಂದು ತಿಳಿಸಿದರು. ಕೋವಿಡ್ 19 ಸೋಂಕು ಹರಡದಂತೆ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿ ದ್ದಾರೆ. ಅದರಂತೆ ಕೋವಿಡ್ 19 ವೈರಸ್ ಹರಡ ದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜನತೆಗೆ ತಿಳಿಸುವ ಮೂಲಕ ದಿನದ 24 ಗಂಟೆಯೂ ಕೋವಿಡ್ 19 ವಾರಿಯರ್ಸ್‌ಗಳಾಗಿ ಮಾಧ್ಯಮದವರು ಕೆಲಸ ಮಾಡುತ್ತಿ ರುವುದು ಶ್ಲಾಘನೀಯ ಎಂದರು.
12 ಸಾವಿರ ಮಂದಿಗೆ ಆಹಾರ ಕಿಟ್: ಕೋವಿಡ್ 19 ಹಾಗೂ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಪಾಂಡವಪುರ ತಾಲೂಕಿನ ಬಡವರು, ಸಂತ್ರಸ್ತರು, ಕೂಲಿ ಕಾರ್ಮಿಕರು, ಚಾಲಕರು, ಆಶಾ ಕಾರ್ಯಕರ್ತೆ ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ರಸ್ತೆ ಬದಿ ವ್ಯಾಪಾರಿಗಳು ಸೇರಿ ಸುಮಾರು 12 ಸಾವಿರ ಮಂದಿಗೆ ಆಹಾರ ಕಿಟ್ ವಿತರಿಸಿದ್ದೇನೆ. ಉಳ್ಳವರು ಇಲ್ಲದವರಿಗೆ ನೆರವಾಗಬೇಕಾದದ್ದು ಮಾನವನ ಧರ್ಮ ಎಂದು ತಿಳಿಸಿದರು.
ವೈರಸ್ ವಿರುದ್ಧ ಹೋರಾಟ ಅನಿವಾರ್ಯ: 1.25 ಲಕ್ಷ ಮಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದು, ಕಾಣದ ವೈರಸ್ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾ ಗಿದೆ. ಜನತೆಯು ಸಹ ಸ್ವತ್ಛತೆಗೆ ಹೆಚ್ಚು ಒತ್ತು ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ಮಹಾಮಾರಿಯನ್ನು ದೇಶ ದಿಂದ ಓಡಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಸಿದ್ದರಾಮೇ ಗೌಡ, ಅಂಜನಾ ಶ್ರೀಕಾಂತ್, ಚಿನಕುರಳಿ ರಮೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್, ಖಜಾಂಚಿ ಕೆ. ಶ್ರೀನಿವಾಸ್, ಪಿ.ಜೆ. ಚೈತನ್ಯ ಕುಮಾರ್ ಇದ್ದರು.