Advertisement

ಮಕ್ಕಳ ಕಾಯ್ದೆಗಳ ಅರಿವು ಅಗತ್ಯ

04:57 PM Nov 30, 2019 | Suhan S |

ಕನಕಪುರ: ಮಕ್ಕಳ ಹಕ್ಕುಗಳ ಒಡಂಬಡಿಕೆಯಾಗಿ 30 ವರ್ಷ ಕಳೆದಿದೆ ಆದರೆ ಬಹುತೇಕ ಗ್ರಾಪಂ ಅಧಿಕಾರಿಗಳಿಗೆ ಈ ಕಾಯ್ದೆ ಅರಿವೇ ಇಲ್ಲ ಎಂದು ಮಗು ಮತ್ತು ಕಲ್ಯಾಣ ಕೇಂದ್ರದ ಅಧಿಕಾರಿ ನಿರಂಜನ ಆರಾಧ್ಯ ತಿಳಿಸಿದರು.

Advertisement

ತಾಲೂಕಿನ ಸಾತನೂರು ಹೋಬಳಿಯ ಪ್ರಿಯದರ್ಶಿನಿ ಖಾಸಗಿ ಶಾಲೆಯ ಆವರಣದಲ್ಲಿ ಗ್ರಾಪಂ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು.ಮಕ್ಕಳ ಹಕ್ಕುಗಳ ಒಡಂಬಡಿಕೆಯಾಗಿ 30 ವರ್ಷದ ಕಳೆದಿದೆ ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಸಂಭ್ರಮ ಆಚರಿಸುತ್ತಿದೆ ಆದರೆ ಮಕ್ಕಳ ವಿಶೇಷವಾದ 4 ಹಕ್ಕುಗಳಲ್ಲಿ ಬಹಳ ಮಹತ್ವದ ಶಿಕ್ಷಣ ಕಾಯ್ದೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಗ್ರಾಪಂಗಳಿಗೆ ಕೊಟ್ಟಿದೆ ಆದರೆ ಕಾಯ್ದೆ ಜಾರಿಯಾದ 10 ವರ್ಷಗಳ ನಂತರ ನಡೆಸಿದ ಅಧ್ಯಯನದಲ್ಲಿ ಬಹುತೇಕ ಗ್ರಾಪಂ ಅಧಿಕಾರಿಗಳಿಗೆ ಶಿಕ್ಷಣ ಕಾಯ್ದೆಯ ಅರಿವೇ ಇಲ್ಲ ಬಾಲಕಾರ್ಮಿಕ ಪದ್ಧತಿ ಕಾಯ್ದೆ ಬದಲಾಗಿರುವ ಅರಿವೂ ಇಲ್ಲ ಮಕ್ಕಳ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಆದರೆ ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಗಳು ಚುನಾಯಿತ ಜನಪ್ರತಿನಿಧಿಗಳು ಅವರೆಲ್ಲರಿಗೂ ಮಕ್ಕಳಹಕ್ಕುಗಳ ಬಗ್ಗೆ ವಿಶೇಷವಾದ ಅರಿವನ್ನು ಮೂಡಿಸಬೇಕು ಜತೆಗೆ ತಮ್ಮ ಸಂಪನ್ಮೂಲದಲ್ಲಿ ಕನಿಷ್ಠ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಗೆ ಪ್ರಯತ್ನಿಸಬೇಕು 2011ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ 6.45 ಕೋಟಿ ಜನಸಂಖ್ಯೆಯಿದೆ ಅದರಲ್ಲಿ ಶೇ. 40ರಷ್ಟು ಮಕ್ಕಳಿದ್ದಾರೆ ಆದರೆ ಸರ್ಕಾರಗಳು ಮಾತ್ರ ಮಂಡನೆ ಮಾಡುವ ಬಜೆಟ್‌ಗಳಲ್ಲಿ ಸಮರ್ಪಕವಾಗಿ ಅನುದಾನ ಮತ್ತುಯೋಜನೆಗಳನ್ನು ರೂಪಿಸುವಲ್ಲಿ ವಿಫ‌ಲವಾಗಿದೆ ಈವರೆಗೆ ಸರ್ಕಾರಗಳುಮಕ್ಕಳ ಹಕ್ಕುಗಳ ರಕ್ಷಣೆಗೆ ನೀಡುತ್ತಿರುವಅನುದಾನ ಬೀದಿ ದೀಪ ನೀರು ಚರಂಡಿ ಇಂತಹ ಕಾರ್ಯಕ್ರಮಗಳಿಗೆ ಸೀಮಿತವಾಗಿದೆಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅನುಷ್ಠಾನದಲ್ಲಿ ವಿಫ‌ಲ: ಮಕ್ಕಳ ಹಕ್ಕುಗಳಕಾಯ್ದೆಯಲ್ಲಿ ಅನೇಕ ಕಾನೂನು ಬದಲಾವಣೆಮಾಡಲಾಗಿದೆ. ಆದರೆ, ಅದರ ಆಚರಣೆ ಮತ್ತು ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಮಾಡುವಲ್ಲಿ ವಿಫ‌ಲವಾಗಿದ್ದೇವೆ. 2013ರ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಅಂಗನವಾಡಿಗಳಲ್ಲಿ ಅತ್ಯಂತ ಪೌಷ್ಟಿಕ ಆಹಾರ ಕೊಡಬೇಕು ಅಪೌಷ್ಟಿಕತೆ ಇರುವ ಮಕ್ಕಳಿಗೆವಿಶೇಷ ಪೌಷ್ಟಿಕ ಆಹಾರ ಕೊಡಬೇಕು ಈ ಎಲ್ಲ ಯೋಜನೆಗಳು ಇಂತಹ ಮಕ್ಕಳ ಗ್ರಾಮ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗವಹಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿಗಳು ಸುಧಾರಣೆಯಾಗಿವೆಯೇ, ಸಮರ್ಪಕವಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತಿದೆಯೇ ಎಂಬುದನ್ನು ವಿಮರ್ಶೆ ಮಾಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.

ಜಿಪಂ ಸದಸ್ಯ ಶಂಕರ್‌, ಇಒ ಶಿವರಾಮು,ಗ್ರಾಪಂ ಅಧ್ಯಕ್ಷೆ ಗಂಗಮ್ಮ,ಉಪಾಧ್ಯಕ್ಷೆಜಯಮ್ಮ, ಅಭಿವೃದ್ಧಿ ಅಧಿಕಾರಿ ಮಧುರೇಶ್ವರಿ,ಶಾಲಾ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next