Advertisement

ಬಾಲ್ಯ ವಿವಾಹ ದುಷ್ಪರಿಣಾಮದ ಜಾಗೃತಿ ಅಗತ್ಯ

07:14 AM Jun 15, 2020 | Lakshmi GovindaRaj |

ಹಾಸನ: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹದಿಹರೆಯದವರಿಗೆ ಹಾಗೂ ವಯಸ್ಕ ಮಕ್ಕಳನ್ನು ಹೊಂದಿರುವ ಪೋಷಕರಿಗೆ ಬಾಲ್ಯ ವಿವಾಹ ದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿಯವ ಕಚೇರಿ ಸಭಾಂಗಣದಲ್ಲಿ ಡಾ.ಕೆ.ಎಂ.ಸತೀಶ್‌ ಕುಮಾರ್‌ ಅವರ ಅಧ್ಯಕ್ಷತೆ ಯಲ್ಲಿ ನಡೆದ ಪಿ.ಸಿ.ಪಿ.ಎನ್‌.ಡಿ.ಟಿ ಹಾಗೂ ಡಿ.ಐ.ಎಂ.ಪಿ. ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಸಭೆಯಲ್ಲಿ  ಪಾಲ್ಗೊಂಡಿದ್ದ ಸದಸ್ಯರೆಲ್ಲರೂ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸುವುದು ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಾಲ್ಯವಿವಾಹ ಮಾಡಿದರೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಗುರಿ ಯಾಗುವ ಕುರಿತು  ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಬಾಲ್ಯ ವಿವಾಹ, ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಕೃತ್ಯ ಎಸಗುವುದರಿಂದ ಹೆಣ್ಣು ಮಕ್ಕಳು ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಒಳಗಾಗುವುದರೊಂದಿಗೆ ಸಮಾಜದಲ್ಲಿ  ಸಂಭವಿಸುವ ಅನಾಹುತಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ರೇಡಿಯೋ ಮೂಲಕ ಫೋನ್‌ ಇನ್‌ ಕಾರ್ಯಕ್ರಮ ಮಾಡುವುದರ ಮೂಲಕ ಹೆಚ್ಚು ಪರಿಣಾಮ ಕಾರಿಯಾಗಿ ಜಾಗೃತಿ ಮೂಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಆರ್‌ಸಿಎಚ್‌.ಅಧಿಕಾರಿ ಡಾ. ಕಾಂತರಾಜ್‌, ಸಮಿತಿಯ ಸದಸ್ಯರಾದ ಡಾ. ಭಾರತಿ ರಾಜಶೇಖರ್‌, ಡಾ. ಸಾವಿತ್ರಿ, ಲೀಲಾವತಿ, ಡಾ. ದಿನೇಶ್‌, ಡಾ.ಶೈಲೇಶ್‌, ಕೆ.ಟಿ. ಜಯಶ್ರೀ, ರಿಹಾನಾ ಬಾನು,  ಮಧುರಾ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next