Advertisement

ದೌರ್ಜನ್ಯ ಮುಕ್ತ ಸಮಾಜಕ್ಕೆ ಜಾಗೃತಿ ಅವಶ್ಯ

05:47 PM Dec 11, 2020 | Suhan S |

ಬಸವಕಲ್ಯಾಣ: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಸಮಾಜದಿಂದ ಮುಕ್ತಗೊಳಿಸಲು ಸರ್ಕಾರ ಜಾರಿಗೆತಂದಿರುವ ಕಾನೂನು ಮತ್ತು ಯೋಜನೆಗಳ ಬಗ್ಗೆ ಜಾಗೃತಿಮೂಡಿಸುವ ಕೆಲಸವಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ| ಜಯಶ್ರೀ ಹೇಳಿದರು.

Advertisement

ನಗರದ ಬಸವ ಮಹಾಮನೆಯಲ್ಲಿ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬೀದರ ಜಿಲ್ಲಾ ಹಾಗೂ ನಗರ ಪೊಲೀಸ್‌ ಠಾಣೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹದಿಂದ ಮಕ್ಕಳನ್ನು ರಕ್ಷಿಸುವುದು, ಮಕ್ಕಳಮೇಲೆ ನಡೆಯುವ ಕೃತ್ಯ ರಕ್ಷಿಸುವುದೇ ಆಯೋಗದ ಉದ್ದೇಶ. ಹೀಗಾಗಿ ಪ್ರಕರಣಗಳ ಬಗ್ಗೆ ಯಾರು ಮಾಹಿತಿ ನೀಡುತ್ತಾರೆ ಅಂಥವರಿಗೆ ಪ್ರಮಾಣಪತ್ರ ಮತ್ತು ಸರ್ಹಾರದಿಂದ ಪ್ರೋತ್ಸಾಹಧನ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ಮಾಡುವುದಾಗಿ ತಿಳಿಸಿದರು.

ಸಿಪಿಐ ನ್ಯಾಮಗೌಡ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಹಿಂಸೆ ನಡೆಯುತ್ತಿದ್ದರು ಮಕ್ಕಳಲ್ಲಿಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಆದರೆ ಮಕ್ಕಳನ್ನು ಜಾಗೃತರನ್ನಾಗಿ ಮಾಡುವಲ್ಲಿ ಪೋಷಕರ ಪಾತ್ರ ಅಡಗಿದೆ ಎಂದರು. ಗ್ರಾಮಗಳಲ್ಲಿ ಯಾವುದೇ ಘಟನೆಗಳು ಸಂಭವಿಸಿದರೆ, ತಕ್ಷಣ ಆಶಾ ಕಾರ್ಯ ಕರ್ತೆಯರು ಮತ್ತು ಅಂಗವಾಡಿ ಸಹಾಯಕರಿಗೆ ಮಾಹಿತಿ ಸಿಗುತ್ತದೆ. ಅದನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತರಬೇಕು ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿರಸಿಗೆ ಮಾತನಾಡಿದರು. ತಹಶೀಲ್ದಾರ್‌ ಸಾವಿತ್ರಿ ಸಲಗರ ಅಧ್ಯಕ್ಷತೆ ವಹಿಸಿದರು. ಈ ವೇಳೆ ಸಿಡಿಪಿಒ ಶಾರದಾ ಕಲಮಲಕರ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಲಿಂಗರಾಜ ಅರಸ್‌, ಸಿಆರ್‌ಪಿ ಅಧಿಕಾರಿ ಡಾ| ಅಂಬದಾಸ್‌, ಬಿ. ಸುದರ್ಶನ ಇತರರಿದ್ದರು.ಮೇಲ್ವಿಚಾರಕಿ ಸೀಮಾ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ ನಿರೂಪಿಸಿದರು. ವಿನೋದ ಕುರೆ ವಂದಿಸಿದರು.

Advertisement

ಕಾನೂನು ಅರಿತು ಜೀವನ ಸಾಗಿಸಿ :

ಔರಾದ: ಕಾನೂನು ಯಾರು ಗೌರವಿಸುತ್ತಾರೋ ಅವರನ್ನು ನಾವುಗಳು ಗೌರವಿಸುತ್ತೇವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಕಾನೂನು ಅರಿತು ಜೀವನ ಸಾಗಿಸಬೇಕು ಎಂದು ಭಾಲ್ಕಿ ಡಿವೈಎಸ್‌ಪಿ ಡಾ| ದೇವರಾಜ ಹೇಳಿದರು.

ತೇಗಂಪುರ ಗ್ರಾಮದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಕೈಗೆ ದ್ವಿಚಕ್ರ ವಾಹನ ಹಾಗೂ ಲೈಸೆನ್ಸ್‌ ಇಲ್ಲದೆ ಮನೆಯಿಂದಹೊರಗಡೆ ವಾಹನ ತರುವುದು ಮತ್ತು ಹೆಲ್ಮೆಟ್‌ ಧರಿಸದೇ ವಾಹನ ಸಂಚಾರಮಾಡಿದರೆ ದಂಡ ವಿಧಿ ಸಲಾಗುತ್ತದೆ. ಕಳ್ಳತನ ನಡೆಯದಂತೆ ಮನೆ ಹೊರಗಡೆ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ಗ್ರಾಮಕ್ಕೆ ಹೊಸಬರು ಬಂದಾಗ ಅವರೊಂದಿಗೆ ಆತ್ಮೀಯತೆಯಿಂದ ಮಾತನಾಡದೇ ಹತ್ತಿರದ ಪೊಲೀಸ್‌ ಠಾಣೆಗೆ ತಿಳಿಸಿ ಜಾಗೃತಿ

ವಹಿಸಿ ಎಂದರು. ಪಿಎಸ್‌ಐ ಜಗದೀಶ ನಾಯಕ ಮಾತನಾಡಿ, ಅಂತಾರಾಜ್ಯ ರಸ್ತೆಯಲ್ಲಿ ಗ್ರಾಮ ಇರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಗೃಹಿಣಿಯರು ಚಿನ್ನದ ಆಭರಣ ಹಾಕಿಕೊಂಡು ಸುತ್ತಾಡಬೇಡಿ. ಕಪಟಿಗಳ ಮಾತಿನ ಮೋಸಕ್ಕೆ ಒಳಗಾಗಬೇಡಿ ಎಂದರು. ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿ ಕಾರಿ ನಾಗೇಶ ಮುಕ್ರಂಬೆ, ಪತ್ರಕರ್ತರ ಸಂಘದ ಅಧ್ಯಕ್ಷ ಶರಣಪ್ಪ ಚಿಟ್ಮೆ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ರುಘುನಾಥ ಬಿರಾದರ, ನಾಗನಾಥ ಚಿಟ್ಮೆ, ಚಂದ್ರಕಾಂತ ನಿರ್ಮಳೆ, ಮಲ್ಲಿಕಾರ್ಜುನ ದಳಪತಿ, ರೇವಪಯ್ನಾ ಸ್ವಾಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವಣಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next