Advertisement

ಟಾಸ್ಕ್ ಫೋರ್ಸ್‌ ಸಮಿತಿಯಿಂದ ಜಾಗೃತಿ

08:48 AM Jul 25, 2020 | Suhan S |

ನರಗುಂದ: ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಜಾಗೃತಗೊಳಿಸುವ ಉದ್ದೇಶದಿಂದ ಪುರಸಭೆ ಕಾರ್ಯಾಲಯದ ಕೋವಿಡ್‌-19 ವಾರ್ಡ್‌ ಮಟ್ಟದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯನ್ನು ಪಟ್ಟಣದ ಅಲ್ಲಿಭಾಯಿ ನಗರದಲ್ಲಿ ನಡೆಸಿ ಜನಜಾಗೃತಿ ಮೂಡಿಸಲಾಯಿತು.

Advertisement

ಕೋವಿಡ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಮನೆಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡಲಾಯಿತು. ಪುರಸಭೆ ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿ, ಕೋವಿಡ್ ರೋಗ ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಯಾರೊಬ್ಬರೂ ಭಯಪಡಬಾರದು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೆಣಸಗಿ ಮಾತನಾಡಿ, ಕೋವಿಡ್ ಪೀಡಿತರನ್ನು ಕೀಳಾಗಿ ಕಾಣುವುದು ಬೇಡ. ಬದಲಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕಿದೆ. ಕೊರೊನಾ ಶೀಘ್ರ ಗುಣಮುಖವಾಗುವ ಸಾಮಾನ್ಯ ಕಾಯಿಲೆಯಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿದರು.

ವಾರ್ಡ್‌ ಮಟ್ಟದ ಟಾಸ್ಕ್ಫೋರ್ಸ್‌ ಸಮಿತಿ ಸದಸ್ಯರಾದ ಚಂದ್ರಗೌಡ ಪಾಟೀಲ, ಕಾರ್ಯದರ್ಶಿ ವಿಠuಲ ಹಡಗಲಿ, ಆರೋಗ್ಯ ಇಲಾಖೆಯ ಎಸ್‌.ಎಸ್‌. ಅಂಗಡಿ, ಅಂಗನವಾಡಿ ಕಾರ್ಯಕರ್ತೆ ಸವಿತಾ ಮರಿಗೌಡ್ರ, ಶಿಕ್ಷಕಿ ಟಿ.ಬಿ.ಹಿರೇಮನಿ, ಶಿವಾನಂದ ಜಾಲಿಹಾಳ, ಚನ್ನಪ್ಪ ಮೋಟೆ, ರಾಚನಗೌಡ ಪಾಟೀಲ, ಫಕೀರಪ್ಪ ಕೀಲಿಕೈ, ಹುಲ್ಲಪ್ಪ ಹುಲಜೋಗಿ, ರಾಜು ಬಂಡಿವಡ್ಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next