Advertisement

“ಗುಣಮುಖರಾದವರಿಂದ ಜಾಗೃತಿ’

08:42 PM Apr 08, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕಿನಿಂದ ಗುಣಮುಖರಾಗಿರು ವವರಿಂದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಸಿದ್ಧತೆ ಮಾಡುತ್ತಿದ್ದೇವೆ. ಸದ್ಯ 25 ಮಂದಿ ರಾಜ್ಯದಲ್ಲಿ ಗುಣಮುಖರಾಗಿದ್ದಾರೆ. ಪ್ರಸ್ತುತ ನಿಯಮಗಳ ಪ್ರಕಾರ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ಆಸ್ಪತ್ರೆಯಿಂದ ಮನೆಗೆ ತೆರಳಿ ಅಲ್ಲಿಯೂ ಕೆಲವು ದಿನಗಳ ಕಾಲ ನಿಗಾದಲ್ಲಿರಬೇಕು. ಆ ನಿಗಾ ಅವಧಿ ಮುಗಿದ ತತ್‌ಕ್ಷಣ ಅವರನ್ನು ಜಾಗೃತಿ ಕಾರ್ಯಕ್ಕೆ ಬಳಕೆ ಮಾಡಿಕೊಂಡು ಜನರಲ್ಲಿನ ಆತಂಕ, ಗೊಂದಲ ದೂರ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಹೇಳಿದರು.

Advertisement

ರಾಜ್ಯದಲ್ಲಿ ಆತಂಕದ ಸನ್ನಿವೇಶ ಇಲ್ಲ. ಆದರೂ ಯಾವುದೇ ಕ್ಷಣದಲ್ಲೂ ಸೋಂಕು ಹೆಚ್ಚಳವಾಗಬಹುದು. ಹೀಗಾಗಿ ಲಾಕ್‌ಡೌನ್‌ ಅನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಸಡಿಲಿಸುವ ಕುರಿತು ಮುಖ್ಯಮಂತ್ರಿ ಅವರು ವೈದ್ಯಕೀಯ ತಜ್ಞರಿಂದ ಮಾಹಿತಿ ಪಡೆಯಲಿದ್ದಾರೆ. ಅಂತಿಮವಾಗಿ ಕೇಂದ್ರ ಮತ್ತು ಇತರ ರಾಜ್ಯಗಳನ್ನು ನೋಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಂತ್ರಜ್ಞಾನ ಬಳಕೆ, ವೈದ್ಯರ ಪರಿಶ್ರಮದಿಂದಾಗಿ 175 ಮಂದಿ ಕೋವಿಡ್ 19 ಸೋಂಕಿತರಲ್ಲಿ 25 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತಬ್ಲೀ ಜಮಾತ್‌ ಮತ್ತು ನಂಜನಗೂಡು ಘಟನೆಗಳು ಸಂಭವಿಸದೇ ಇರುತ್ತಿದ್ದರೆ ನಮ್ಮ ಸೋಂಕಿತರ ಸಂಖ್ಯೆ ಎರಡಂಕಿ ಕೂಡ ದಾಟುತ್ತಿರಲಿಲ್ಲ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next