ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾದ “ಮಾದಕ ವ್ಯಸನ ವಿರೋಧಿ ಮಾಸಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Advertisement
ತಂತ್ರಜ್ಞಾನ ಮುಂದುವರಿದಿರುವ ಈ ಸಮಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಬಗ್ಗೆ ಜಾಗೃತಿ ಮೂಡಿಸುವುದು ಅತೀಆವಶ್ಯಕವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಾದಕ ವ್ಯಸನವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಾದ್ಯಂತ ಮಾದಕ ವ್ಯಸನ ವಿರೋಧಿ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ಮಾದಕ ವಸ್ತುಗಳ ಬೇಡಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಬೇಕು. ಯುವ ಜನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಿಕ್ಷಕರು, ಶಾಲಾ-ಕಾಲೇಜು, ಪ್ರಾಂಶುಪಾಲರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಭಾವ ಬೀರಬಹುದು. ಈ ಚಟುವಟಿಕೆಯಲ್ಲಿ ತೊಡಗಿರುವವರು ಅದರಿಂದ ಹೊರಬರಲು ಪ್ರಯತ್ನಿಸಬೇಕು ಎಂದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ, ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಣ ಇಲಾಖೆಗಳ ಮುಖ್ಯಸ್ಥರು, ಪೊಲೀಸ್ ಸಿಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿವಾನಂದ ನಾಯರಿ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್‌ಪಿ ಜಯ್‌ಶಂಕರ್ ವಂದಿಸಿದರು.
Related Articles
ಖ್ಯಾತ ಮನೋರೋಗ ತಜ್ಞರಾದ ಡಾ| ಪಿ.ವಿ.ಭಂಡಾರಿ ಮಾತನಾಡಿ, ಈಗಿನ ಮಕ್ಕಳು 14, 16ನೇ ವಯಸ್ಸಿಗೆ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇದೊಂದು ಚಕ್ರವ್ಯೂಹವಾಗಿದ್ದು, ಇದರೊಳಗೆ ಸೇರಿಕೊಂಡರೆ ಹೊರಬರುವುದು ತೀರಾ ಕಷ್ಟ ಎಂದರು. 10 ವರ್ಷ ಕಳೆದ ಬಳಿಕ ಮೊಬೈಲ್ ಬಳಕೆ ಕೂಡ ವ್ಯಸನದಂತೆ ಆಗಬಹುದು. ಆತಂಕ, ಖನ್ನತೆ ಮರೆಮಾಚಲು ಕೆಲವರು ಕುಡಿತದ ವ್ಯಸನ ಬೆಳೆಸಿಕೊಳ್ಳುತ್ತಾರೆ. ಆದರೆ ಆಲ್ಕೋಹಾಲ್ ಸೇವನೆಯಿಂದ ಒತ್ತಡ ಅಧಿಕವಾಗುತ್ತದೆ ಎಂದರು. ವಿದ್ಯಾರ್ಥಿಗಳು ಸೋಲನ್ನು ಸಹಿಸುವುದಿಲ್ಲ. ಇದೇ ಕಾರಣಕ್ಕೆ ಆತ್ಮಹತ್ಯೆ, ಮಾದಕ ವ್ಯಸನಗಳಂತಹ ಪ್ರಕರಣಗಳು ನಡೆಯುತ್ತವೆ. ಈ ಬಗ್ಗೆ ಪ್ರತೀ ಮನೆಯಲ್ಲಿಯೂ ಜಾಗೃತಿ ಆಗಬೇಕು ಎಂದರು.
Advertisement