Advertisement

ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ

03:04 PM May 08, 2023 | Team Udayavani |

ಕೋಲಾರ: ಜಿಲ್ಲೆಯಲ್ಲಿ ಪ್ರತಿಯೊಬ್ಬ ಮತದಾರರೂ ತಮ್ಮ ಹಕ್ಕು ಚಲಾಯಿಸಿಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಶೇ.100 ರಷ್ಟು ಕಡ್ಡಾಯ ಮತ ದಾನ ಮಾಡುವ ಮೂಲಕ ಗಾರ್ಮೆಂಟ್ಸ್‌ ಕಾರ್ಮಿಕರು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪಿ.ಮುನಿಯಪ್ಪ ನೀಡಿದರು.

Advertisement

ನಗರ ಹೊರವಲಯದ ಬೆತ್ತನಿ ಸಮೀಪ ಇರುವ ಶಾಹಿ ಗಾರ್ಮೆಂಟ್ಸ್‌ ಕಾರ್ಖಾನೆಯ ಮಹಿಳಾ ಕಾರ್ಮಿ ಕರಿಗೆ ಮತದಾನದ ಕುರಿತು ಅರಿವು ಮೂಡಿಸಿ ಅವರು ಮಾತನಾಡಿ, ಸರ್ಕಾರ ಮತದಾನ ದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಲು ಅನುವಾಗುವಂತೆ ಮತದಾನದ ದಿನ ರಜೆ ಘೋಷಿಸಿದೆ. ಮಹಿಳೆಯರು ತಮ್ಮ ಹಕ್ಕುಗಳ ರಕ್ಷಣೆಗೆ ಉತ್ತಮ ಜನಪ್ರತಿನಿಧಿ ಆಯ್ಕೆಯ ಅಧಿಕಾರ ಬಳಸಿ, ಮತದಾನದಲ್ಲಿ ತಪ್ಪದೇ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದರು.

ಮತದಾನಕ್ಕೆ ಪ್ರೇರೇಪಿಸಿ: ಮತದಾನ ಜನಸಾಮಾ ನ್ಯರ ಒಂದು ಪವಿತ್ರ ಕರ್ತವ್ಯ ಒಂದು ದೇಶದ ಪ್ರಗತಿ ಮತದಾನದಿಂದ ಎಂಬ ಸತ್ಯದ ಅರಿವು ಮೂಡಿಸುವ ಅಗತ್ಯವಿದೆ. ನಾವು ಮತ ಹಾಕದಿದ್ದರೆ ಏನಾಗುತ್ತದೆ ಎಂದು ನಕಾರಾತ್ಮಕವಾಗಿ ಮಾತನಾಡುವವರನ್ನೂ ಮನ ವೊಲಿಸಿ ಮತ ಚಲಾಯಿಸಲು ಪ್ರೇರೇಪಿಸಿ ಎಂದರು.

ಕಳೆದ ಚುನಾವಣೆಯಲ್ಲಿ ಮತದಾನ ನಿರಾಕರಿಸಿರುವ ಮತದಾರರ ಮನವೊಲಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ ಎಂದ ಅವರು, ವಿಕಲಚೇತನರು, ಹಿರಿಯ ನಾಗರಿಕರಿಗೆ ಪ್ರತಿ ಮತಗಟ್ಟೆ ಯಲ್ಲೂ ಗಾಲಿ ಕುರ್ಚಿಯನ್ನು ಬಳಸಲಾಗುವುದು, ಇದರ ಪ್ರಯೋಜನ ಪಡೆದು ಮತದಾನದಲ್ಲಿ ತಪ್ಪದೇ ಭಾಗವಹಿಸಲು ಕೋರಿದರು.

ತಮ್ಮ ಗ್ರಾಮಗಳಲ್ಲಿ ಹಾಗೂ ನೆರೆಹೊರೆ ಕುಟುಂಬಗಳಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಿ, ಇದು ನಿಮ್ಮ ಕರ್ತವ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಓರ್ವ ಉತ್ತಮ ಜನಪ್ರತಿನಿಧಿಯ ಆಯ್ಕೆಗೆ ಇರುವ ಸುವರ್ಣಾವಕಾಶ ಎಂದು ಮನವರಿಕೆ ಮಾಡಿಕೊಡಿ ಎಂದರು.

Advertisement

ಆಮಿಷಕ್ಕೆ ಒಳಗಾಗಬೇಡಿ: ಶಾಹಿ ಗಾರ್ಮೆಂಟ್ಸ್‌ನ ರಾಜೇಶ್‌ ಮಾತನಾಡಿ, ನನ್ನ ಮತ ನನ್ನ ಭವಿಷ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಯಾವುದೋ ನೆಪ ಹೇಳಿಕೊಂಡು ಮತದಾನದಿಂದ ದೂರ ಉಳಿಯುವ ಮೂಲಕ ತಪ್ಪು ಮಾಡಬಾರದು, ಸಂವಿಧಾನದಡಿ ಸಿಕ್ಕಿರುವ ಹಕ್ಕನ್ನು ಬಳಸಿಕೊಳ್ಳಬೇಕು ಎಂದರು.

ಪ್ರತಿ ಮತದಾರನೂ ನಾನು ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸುವೆ ಎಂದು ಪ್ರತಿಜ್ಞೆ ಸ್ವೀಕರಿಸುವ ಮೂಲಕ ಚುನಾವಣೆಯಲ್ಲಿ ಹಣ,ಆಮಿಷ, ಹೆಂಡ ಹಂಚಿಕೆಗೆ ಕಡಿವಾಣ ಹಾಕಬೇಕು, ಇಂತಹ ಕಾರ್ಯಗಳು ತಮ್ಮ ಗಮನಕ್ಕೆ ಬಂದರೆ ಕೂಡಲೇ ಚುನಾವಣಾಧಿಕಾರಿಗಳಿಗೆ ದೂರು ನೀಡಬೇಕು ಎಂದು ಕೋರಿದರು.

ಶಾಹಿ ಗಾರ್ಮೆಂಟ್ಸ್‌ನ ಷಫಿನಾ ಮತ್ತಿತರ ಅಧಿ ಕಾರಿಗಳು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರ ವಾಧ್ಯಕ್ಷ ಎನ್‌.ಶ್ರೀನಿವಾಸರೆಡ್ಡಿ ಯೋಜನಾಧಿಕಾರಿ ಎನ್‌. ರಮೇಶ, ಸಹಾಯಕ ನಿರ್ದೇಶಕಿ ಸುನಿತಾ, ಕಾರ್ಯದರ್ಶಿ ಬಸಪ್ಪ, ಐಇಸಿ ಸಂಯೋಜಕ ಭಾಸ್ಕರರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next