Advertisement

ಸರಳೀಕೃತ ರಿಟರ್ನ್ಸ್ ಬಗ್ಗೆ ಜಾಗೃತಿ

11:00 PM Dec 23, 2019 | Lakshmi GovindaRaj |

ಬೆಂಗಳೂರು: ಜಿಎಸ್‌ಟಿಯಡಿ ಸುಗಮವಾಗಿ ವ್ಯವಹರಿಸಲು ಅನುಕೂಲವಾಗುವಂತೆ ರಿಟರ್ನ್ಸ್ ಸಲ್ಲಿಕೆ ನಮೂನೆ (ಸಹಜ್‌, ಸುಗಮ್‌, ನಾರ್ಮಲ್‌) ವ್ಯವಸ್ಥೆ ಏ.1ರಿಂದ ಜಾರಿ ಹಿನ್ನೆಲೆಯಲ್ಲಿ ಅವುಗಳ ಬಗ್ಗೆ ವ್ಯಾಪಾರ- ವ್ಯವಹಾರಸ್ಥರಿಗೆ ಜಾಗೃತಿ ಮೂಡಿಸುವ ಕಾರ್ಯ ಶುರುವಾಗಿದೆ.

Advertisement

ಕೇಂದ್ರ ತೆರಿಗೆಗಳ ಇಲಾಖೆ, ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯು ಎಫ್ಕೆಸಿಸಿಐ, ಇತರೆ ವ್ಯಾಪಾರ- ವಾಣಿಜ್ಯ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದಲ್ಲೂ ಈಗಾಗಲೇ 20ಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಸುಧಾರಿತ ರಿಟರ್ನ್ಸ್ ನಮೂನೆಗಳ ಭರ್ತಿ, ವಿವರ ಸಲ್ಲಿಕೆ ಇತರೆ ವಿಚಾರಗಳ ಬಗ್ಗೆ ವ್ಯಾಪಾರ- ವ್ಯವಹಾರಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಪ್ರಮುಖವಾಗಿ ಅನುಬಂಧ -1 (ಪೂರೈಕೆದಾರರು ನೀಡಬೇಕಾದ ವಿವರ) ಹಾಗೂ ಅನುಬಂಧ- 2ರ (ಖರೀದಾರರು ತಮ್ಮ ಖರೀದಿ ವಿವರ ತಿಳಿಯುವ ವ್ಯವಸ್ಥೆ) ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ. ಜಿಎಸ್‌ಟಿ ವ್ಯವಸ್ಥೆಯಡಿ ತೆರಿಗೆದಾರರು ಸುಲಭವಾಗಿ ವ್ಯವಹರಿಸಲು ಅನುಕೂಲವಾಗುವಂತೆ ನಿಯಮಿತವಾಗಿ ಕಾರ್ಯಾಗಾರ, ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ತೆರಿಗೆದಾರರು ಸಮಯಕ್ಕೆ ಸರಿಯಗಿ ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗಲಿದೆ.

ಪರಿಣಾಮವಾಗಿ ಸರ್ಕಾರಕ್ಕೂ ಸಕಾಲದಲ್ಲಿ ತೆರಿಗೆ ಸಂಗ್ರಹವಾಗುವುದಲ್ಲದೆ, ತೆರಿಗೆದಾರರೂ ಸಮಸ್ಯೆ ಇಲ್ಲದೆ ರಿಟರ್ನ್ಸ್ ಸಲ್ಲಿಸಲು ನೆರವಾಗಲಿದೆ. ಈವರೆಗೆ ಬೆಂಗಳೂರಿನಲ್ಲಿ 10 ಕಾರ್ಯಾಗಾರ ಸೇರಿದಂತೆ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಕಾರ್ಯಾಗಾರಗಳಾಗಿದ್ದು, ವ್ಯಾಪಾರ- ವ್ಯವಹಾರಸ್ಥರಿಗೆ ಅನುಕೂಲವಾಗುವ ವಿಶ್ವಾಸವಿದೆ ಎಂದು ಎಫ್ಕೆಸಿಸಿಐ ರಾಜ್ಯ ಜಿಎಸ್‌ಟಿ ಅಧ್ಯಕ್ಷ ಬಿ.ಟಿ.ಮನೋಹರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next